ಬೆಂಗಳೂರು: ಉತ್ತರಹಳ್ಳಿಯ ಬ್ರಿಗೇಡ್ 7 ಗಾರ್ಡನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ; Video

ನಿನ್ನೆ ಬೆಳಗ್ಗೆ 11.50ಕ್ಕೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಹುಳಿಮಾವು, ಅಂಜನಾಪುರ ಮತ್ತು ಬನಶಂಕರಿ ಅಗ್ನಿಶಾಮಕ ಠಾಣೆಗಳಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಅಗ್ನಿಶಾಮಕ ಸಿಬ್ಬಂದಿ ಮಧ್ಯಾಹ್ನ 3.30ರವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
damages on the eighth floor of Brigade 7 Gardens in Uttarahalli
ಉತ್ತರಹಳ್ಳಿಯ ಬ್ರಿಗೇಡ್ 7 ಗಾರ್ಡನ್ಸ್ ಅಪಾರ್ಟ್‌ಮೆಂಟ್‌ನ ಎಂಟನೇ ಮಹಡಿಯಲ್ಲಿ ಅಗ್ನಿ ಅವಘಡ
Updated on: 

ಬೆಂಗಳೂರು: ನಿನ್ನೆ ಬುಧವಾರ ಬೆಂಗಳೂರಿನ ಉತ್ತರಹಳ್ಳಿಯ ಬ್ರಿಗೇಡ್ 7 ಗಾರ್ಡನ್ಸ್‌ನ ಡಿ ಬ್ಲಾಕ್‌ನ ಎಂಟನೇ ಮಹಡಿಯಲ್ಲಿರುವ ಫ್ಲ್ಯಾಟ್‌ಗೆ ಬೆಂಕಿ ಹತ್ತಿಕೊಂಡು ವ್ಯಾಪಕ ಹಾನಿಯುಂಟಾಗಿದೆ.

ಘಟನೆ ಸಂಭವಿಸಿದ ಸಂದರ್ಭದಲ್ಲಿ ಫ್ಲ್ಯಾಟ್‌ನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ನಿನ್ನೆ ಬೆಳಗ್ಗೆ 11.50ಕ್ಕೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಹುಳಿಮಾವು, ಅಂಜನಾಪುರ ಮತ್ತು ಬನಶಂಕರಿ ಅಗ್ನಿಶಾಮಕ ಠಾಣೆಗಳಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಅಗ್ನಿಶಾಮಕ ಸಿಬ್ಬಂದಿ ಮಧ್ಯಾಹ್ನ 3.30ರವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

damages on the eighth floor of Brigade 7 Gardens in Uttarahalli
ಬೆಂಗಳೂರು: ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ; ದುಬಾರಿ ಬೆಲೆಯ ಕಾರುಗಳು ಸೇರಿ 25ಕ್ಕೂ ಹೆಚ್ಚು ವಾಹನ ಸುಟ್ಟು ಭಸ್ಮ!

ಬೆಂಕಿಯಿಂದ ಫ್ಲ್ಯಾಟ್‌ನಲ್ಲಿದ್ದ ಪೀಠೋಪಕರಣಗಳು ಸುಟ್ಟುಹೋಗಿದ್ದು, ಒಳಾಂಗಣಕ್ಕೆ ವ್ಯಾಪಕ ಹಾನಿಯಾಗಿದೆ. ಪಕ್ಕದ ಫ್ಲ್ಯಾಟ್‌ನ ಗಾಜಿನ ಕಿಟಕಿ ಫಲಕಗಳೂ ಒಡೆದುಹೋಗಿವೆ ಎಂದು ಅಪಾರ್ಟ್‌ಮೆಂಟ್ ಸಂಘದ ಸದಸ್ಯರೊಬ್ಬರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.

ರಜೆಯ ಮೇಲೆ ತೆರಳುವ ಮುನ್ನ ಬಾಡಿಗೆದಾರರು ಫ್ಲ್ಯಾಟ್‌ನಲ್ಲಿ ಪೂಜೆ ನೆರವೇರಿಸಿದ್ದರು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

ಮೊದಲಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ವಾಹನದಿಂದ ಎಂಟನೇ ಮಹಡಿಯನ್ನು ತಲುಪಲು ಸಾಧ್ಯವಾಗದ ಕಾರಣ, ಬೆಂಕಿ ನಂದಿಸುವ ಕಾರ್ಯಾಚರಣೆಗೆ ಆರಂಭದಲ್ಲಿ ವಿಳಂಬವಾಯಿತು.

ಅಗ್ನಿ ಸುರಕ್ಷತೆಗೆ ಒತ್ತು

ಈ ಘಟನೆ ಅಪಾರ್ಟ್‌ಮೆಂಟ್‌ಗಳಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ಮತ್ತೆ ಕಳವಳ ಮೂಡಿಸಿದೆ. ಅಗ್ನಿಶಾಮಕ ಉಪಕರಣಗಳ ನಿರ್ವಹಣೆ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ನಿವಾಸಿಗಳು ಸಿದ್ಧರಾಗಿರುವ ಅಗತ್ಯದ ಬಗ್ಗೆಯೂ ಗಮನ ಸೆಳೆದಿದೆ.

ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್ (BAF) ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್, ತುರ್ತು ಸೇವೆಗಳನ್ನೇ ಸಂಪೂರ್ಣವಾಗಿ ಅವಲಂಬಿಸುವ ಬದಲು ನಿವಾಸಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಗ್ನಿ ಸುರಕ್ಷತಾ ವ್ಯವಸ್ಥೆಗಳಿವೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ, ಅವುಗಳನ್ನು ಹೇಗೆ ಬಳಸಬೇಕು ಎಂಬುದು ಅವರಿಗೆ ತಿಳಿದಿರುವುದಿಲ್ಲ ಎಂದು ಹೇಳಿದ್ದಾರೆ.

ಅಗ್ನಿಶಾಮಕ ಉಪಕರಣಗಳನ್ನು ಬಳಸುವ ವಿಧಾನ ಕಲಿಯುವುದು, ತುರ್ತು ಸಂದರ್ಭದಲ್ಲಿ ಹೊರಹೋಗುವ ಮಾರ್ಗಗಳನ್ನು ಗುರುತಿಸುವುದು ಹಾಗೂ ಪ್ಲಗ್‌ಗಳಲ್ಲಿ ಕಿಡಿ ಕಾಣಿಸಿಕೊಳ್ಳುವುದು, ದೀಪಗಳು ಮಿನುಗುವುದು ಮುಂತಾದ ಎಚ್ಚರಿಕೆಯ ಲಕ್ಷಣಗಳನ್ನು ಗುರುತಿಸುವುದು ಅಗತ್ಯ ಎಂದು ಅವರು ನಿವಾಸಿಗಳಿಗೆ ಸಲಹೆ ನೀಡಿದ್ದಾರೆ.

ಬ್ರಿಗೇಡ್ 7 ಗಾರ್ಡನ್ಸ್ ಅಪಾರ್ಟ್‌ಮೆಂಟ್ ಸಂಘದ ಸದಸ್ಯರೊಬ್ಬರ ಪ್ರಕಾರ, ಸಂಕೀರ್ಣದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಎಸ್ಟೇಟ್ ನಿರ್ವಹಣಾ ಸಿಬ್ಬಂದಿಗಾಗಿ ಪ್ರತಿ 15 ದಿನಗಳಿಗೊಮ್ಮೆ ಅಣಕು ಅಗ್ನಿ ಅವಘಡದ ತುರ್ತು ಕಾರ್ಯಾಚರಣೆ ಅಭ್ಯಾಸ ನಡೆಸಲಾಗುತ್ತದೆ. ಇತ್ತೀಚೆಗಷ್ಟೇ ಅಗ್ನಿ ಸುರಕ್ಷತಾ ಪ್ರಮಾಣಪತ್ರವನ್ನೂ ನವೀಕರಿಸಲಾಗಿದೆ.

ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಕುರಿತು ವಿವರವಾದ ವರದಿಗಾಗಿ ಸಂಘ ಕಾಯುತ್ತಿದ್ದು, ವರದಿ ಲಭಿಸಿದ ಬಳಿಕ ಅದನ್ನು ಬಿಎಎಫ್‌ಗೆ ಸಲ್ಲಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com