ಚಾಮುಂಡೇಶ್ವರಿ ಅಮ್ಮನ ಮೆರವಣಿಗೆಯಲ್ಲಿ ದಲಿತ ದ್ವೇಷ: ಇದೇ ನೋಡಿ ಕಾಂಗ್ರೆಸ್ ನಲ್ಲಿ ದಲಿತ ಸಚಿವರಿಗೆ ಸಿಗುತ್ತಿರುವ ರಾಜ ಮರ್ಯಾದೆ!

ನಿಮ್ಮ ಜೊತೆಯಲ್ಲೇ ಬಂದ ಸಂಪುಟದ ಸಹೋದ್ಯೋಗಿಗಳನ್ನು ವೇದಿಕೆಗೆ ಕರೆದೊಯ್ಯದೆ ಹಾಗೆಯೇ ಬಿಟ್ಟು ಹೋದದ್ದು ಯಾಕೆ? ಸ್ವತಃ ಸಚಿವರಿಗೇ ಈ ದುಸ್ಥಿತಿಯಾದರೆ ಇನ್ನು ನಿಮ್ಮ ಆಡಳಿತದಲ್ಲಿ ಸಾಮಾನ್ಯರ ಗತಿಯೇನು? ಇದೇನಾ ನಿಮ್ಮ ಸಾಮಾಜಿಕ ನ್ಯಾಯ?
SP Rishyanth
ಮೈಸೂರು ದಸರಾ ವೇಳೆ ಸಚಿವರನ್ನು ತಡೆದ ಎಸ್ ಪಿ ರಿಷ್ಯಂತ್
Updated on: 

ಬೆಂಗಳೂರು: ದಲಿತರನ್ನು ಕೇವಲ ಮತಬ್ಯಾಂಕ್‌ಗೆ ಮಾತ್ರ ಬಳಸಿಕೊಂಡು, ಅಧಿಕಾರ ಬಂದಾಗ ಅಪಮಾನಿಸುವುದೇ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಎಂದು ಜೆಡಿಎಸ್ ಕಿಡಿ ಕಾರಿದೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜೆಡಿಎಸ್ ಇದೇ ನೋಡಿ ಕಾಂಗ್ರೆಸ್’ನಲ್ಲಿ ದಲಿತ ಸಚಿವರಿಗೆ ಸಿಗುತ್ತಿರುವ ರಾಜ ಮರ್ಯಾದೆ. ದಲಿತರನ್ನು ಕೇವಲ ಮತಬ್ಯಾಂಕ್‌ಗೆ ಮಾತ್ರ ಬಳಸಿಕೊಂಡು, ಅಧಿಕಾರ ಬಂದಾಗ ಅಪಮಾನಿಸುವುದೇ ಕಾಂಗ್ರೆಸ್ ಸಂಸ್ಕೃತಿ. ಮೈಸೂರು ದಸರಾ ಜಂಬೂಸವಾರಿ ವೇದಿಕೆಗೆ ತೆರಳುತ್ತಿದ್ದ ವೇಳೆ ದಲಿತ ಮಂತ್ರಿಗಳನ್ನು ತಡೆದು ಅಪಮಾನಿಸಿರುವುದು ಖಂಡನೀಯ ಎಂದಿದೆ.

ಡಿ.ಕೆ ಶಿವಕುಮಾರ್ ಅವರೇ , ನಿಮ್ಮ ಜೊತೆಯಲ್ಲೇ ಬಂದ ಸಂಪುಟದ ಸಹೋದ್ಯೋಗಿಗಳನ್ನು ವೇದಿಕೆಗೆ ಕರೆದೊಯ್ಯದೆ ಹಾಗೆಯೇ ಬಿಟ್ಟು ಹೋದದ್ದು ಯಾಕೆ? ಸ್ವತಃ ಸಚಿವರಿಗೇ ಈ ದುಸ್ಥಿತಿಯಾದರೆ ಇನ್ನು ನಿಮ್ಮ ಆಡಳಿತದಲ್ಲಿ ಸಾಮಾನ್ಯರ ಗತಿಯೇನು? ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಇದೇನಾ ನಿಮ್ಮ ಅಂಬೇಡ್ಕರ್ ವಾದ? ಇದೇನಾ ಅವರು ಬರೆದ ಸಂವಿಧಾನದ ಮೇಲಿರುವ ನಂಬಿಕೆ? ನಾಚಿಕೆಯಾಗಬೇಕು ನಿಮಗೆ? ಎಂದು ಜೆಡಿಎಸ್ ಆಕ್ರೋಶ ವ್ಯಕ್ತ ಪಡಿಸಿದೆ.

ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ. ಇಂಥ ದ್ವಂದ್ವದಿಂದ ಕರ್ನಾಟಕಕ್ಕೆ ಕಳಂಕ ತಂದಿದ್ದೀರಿ ನೀವು. ಅಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿ, ಅಪಮಾನಿಸಿ, ಚುನಾವಣಾ ಕಣದಲ್ಲಿ ನಾಲ್ಕು ಬಾರಿ ಸೋಲಿಸಿ, ಚುನಾವಣಾ ಕಣದಿಂದಲೇ ಹತ್ತಿಕ್ಕಿ ದಲಿತಜ್ಯೋತಿಯನ್ನು ನಂದಿಸಿದ ಕಾಂಗ್ರೆಸ್, ಮುಕ್ಕಾಲು ಶತಮಾನದ ನಂತರವೂ ಅದನ್ನು ನಿಷ್ಠೆಯಿಂದ ಪಾಲಿಸುತ್ತಿದೆ. ಶ್ರೀ ಚಾಮುಂಡೇಶ್ವರಿ ಅಮ್ಮನ ಮೆರವಣಿಗೆಯಲ್ಲಿ ದಲಿತ ದ್ವೇಷವನ್ನು ಆಚರಿಸಿದ್ದು ಸಾಕ್ಷಾತ್ ಆ ತಾಯಿಯೇ ನಿಮ್ಮನ್ನು ಕ್ಷಮಿಸುವುದಿಲ್ಲ. ತಪ್ಪು ಮಾಡಿದ್ದೀರಿ, ಮುಂದೆ ಅನುಭವಿಸುತ್ತೀರಿ.

SP Rishyanth
ವೈಭವದ ಜಂಬೂ ಸವಾರಿ, ಪಂಜಿನ ಕವಾಯತು, ಸಿಡಿಮದ್ದು ಪ್ರದರ್ಶನ...: ಮೈಸೂರು ದಸರಾ 2026ಕ್ಕೆ ವರ್ಣರಂಜಿತ ತೆರೆ

ನಮ್ಮ ಒತ್ತಾಯ ಇಷ್ಟೇ, ಸಂಪುಟದಲ್ಲಿರುವ ಎಲ್ಲಾ ದಲಿತ ಸಚಿವರು ಮುಖ್ಯಮಂತ್ರಿ ಹಾಗೂ ಅವರ ಅಧಿಕಾರಿಗಳು ವರ್ತಿಸಿದ ರೀತಿಯನ್ನು ಖಂಡಿಸಬೇಕು. ಅಷ್ಟೇ ಅಲ್ಲ, ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದ ಇಂತಹ ವ್ಯಕ್ತಿ ಕೈಕೆಳಗೆ ಕೆಲಸ ಮಾಡುವುದೇ ಅಪಮಾನ. ನೀವೆಲ್ಲರೂ ರಾಜೀನಾಮೆ ಬಿಸಾಡಿ ಹೊರಬರುತ್ತೀರೋ ಅಥವಾ ನಿಮ್ಮ ಗೌರವವನ್ನು ಬದಿಗಿಟ್ಟು ಮುಂದುವರಿಯುತ್ತೀರೋ ಎಂಬುದು ನಿಮಗೆ ಬಿಟ್ಟಿದ್ದುಎಂದಿದೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ನಾಡಹಬ್ಬ ದಸರಾ ವೇಳೆ ನಿಮ್ಮ ಇಲಾಖೆಯ ಅಧಿಕಾರಿಗಳು ತೋರಿದ ಈ ದುವರ್ತನೆ ಬಗ್ಗೆ ಬಾಯಿಬಿಡಿ. ಬೇಡವಾದದ್ದಕ್ಕೆಲ್ಲಾ ಕಿರುಚಾಡುವ ನೀವು ಈ ಬಗ್ಗೆ ಮಾತನಾಡಿ ಎಂದು ಜೆಡಿಎಸ್ ತಪರಾಕಿ ಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com