ಮೈಸೂರು ದಸರಾ ವೇಳೆ ದಲಿತ ಸಚಿವರಿಗೆ ಅವಮಾನ: BJP ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರ ನಾಯಕರು ಪೂಜಾ ಸ್ಥಳದೊಳಗೆ ತೆರಳುತ್ತಿದ್ದಾಗ, ಈ ಮೂವರು ಸಚಿವರನ್ನು ಒಳಗೆ ಪ್ರವೇಶಿಸದಂತೆ ಎಸ್ಪಿ ರಿಷ್ಯಂತ್ ತಡೆದಿದ್ದಾರೆ ಎನ್ನಲಾದ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಈ ಆರೋಪ ಮಾಡಿದೆ.
Ministers stopped in Mysuru
ಮೈಸೂರಿನಲ್ಲಿ ಸಚಿವರನ್ನು ಅಡ್ಡಗಟ್ಟಿದ ಸಂದರ್ಭ
Updated on: 

ಮೈಸೂರು ದಸರಾ ಉತ್ಸವದ ಕೊನೆಯ ದಿನವಾದ ನಿನ್ನೆ ವಿಜಯದಶಮಿಯಂದು ಮೂವರು ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ ಮತ್ತು ಕೆ.ಎಸ್. ಬಸವಂತಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ, ಅವಮಾನಿಸಿ ಅವರು ದಲಿತರೆಂಬ ಕಾರಣಕ್ಕೆ ಜಾತಿ ಆಧಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರ ನಾಯಕರು ಪೂಜಾ ಸ್ಥಳದೊಳಗೆ ತೆರಳುತ್ತಿದ್ದಾಗ, ಈ ಮೂವರು ಸಚಿವರನ್ನು ಒಳಗೆ ಪ್ರವೇಶಿಸದಂತೆ ಎಸ್ಪಿ ರಿಷ್ಯಂತ್ ತಡೆದಿದ್ದಾರೆ ಎನ್ನಲಾದ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಈ ಆರೋಪ ಮಾಡಿದೆ.

ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಹಾಗೂ ಅಂಬಾರಿ ಪುಷ್ಪಾರ್ಚನೆಗೆ ಮುಂಚೆ ನಡೆದ ಐತಿಹಾಸಿಕ ನಂದಿ ಕಂಬ ಪೂಜೆ ವೇಳೆ  ಶಿಷ್ಟಾಚಾರ ಉಲ್ಲಂಘನೆ ಮತ್ತು ಪ್ರವೇಶ ನಿರ್ಬಂಧದ ವಿವಾದವು ಈಗ ಕಾಂಗ್ರೆಸ್​​​ ಪಕ್ಷದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಚಿವರಾದ ಬಿ. ಬಸವಂತಪ್ಪ, ಶಿವರಾಜ ತಂಗಡಗಿ ಹಾಗೂ ಪಿ.ಎಂ. ನರೇಂದ್ರ ಸ್ವಾಮಿ ಸೇರಿದಂತೆ ಪ್ರಮುಖ ನಾಯಕರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಿಷ್ಯಂತ್ ಅವರು ಭದ್ರತೆ ಕಾರಣ ಹೇಳಿ ಅಡ್ಡಗಟ್ಟಿದ್ದರು. ಈ ವೇಳೆ ಸ್ವಲ್ಪ ಸಮಯ ಸಚಿವರು ಹಾಗೂ ಪೊಲೀಸ್​​ ಅಧಿಕಾರಿಗಳ ನಡುವೆ ಗೊಂದಲ ಉಂಟಾಗಿತ್ತು. ನಂತರ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​​ ಮಧ್ಯಪ್ರವೇಶ ಮಾಡಿ ಅಲ್ಲಿಂದ  ಎಲ್ಲ ಸಚಿವರನ್ನು ಕರೆದುಕೊಂಡು ಹೋಗಿದ್ದಾರೆ.

Ministers stopped in Mysuru
CS ಗೆ ತನಿಖೆ ಮಾಡಿ ವರದಿ ನೀಡಲು ಹೇಳಿದ್ದೇನೆ: ಮೈಸೂರಿನಲ್ಲಿ ಸಚಿವರನ್ನೇ ಅಡ್ಡಗಟ್ಟಿ ನಿಲ್ಲಿಸಿದ ಪೊಲೀಸರ ವರ್ತನೆಗೆ ಸಿಎಂ ಡಿಕೆಶಿ ಏನೆಂದರು?

ಇದೀಗ ಈ ವಿಚಾರ ಕಾಂಗ್ರೆಸ್​​ನಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ದಲಿತ ಸಚಿವರಿಗೆ ಅವಮಾನ ಎಂಬ ಆರೋಪ ಕೇಳಿ ಬಂದಿದೆ. ದಲಿತ ಸಚಿವರಿಗೆ ಸಾರ್ವಜನಿಕವಾಗಿ ಅವಮಾನ ಎಸಗಲಾಗಿದೆ ಎಂದು ಕಿಡಿಕಾರಿರುವ ಸಚಿವರು ಹಾಗೂ ನಾಯಕರು, ಕೂಡಲೇ ಎಸ್‌ಪಿ ರಿಷ್ಯಂತ್ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಿ ಎಂದು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಕಟ್ಟುನಿಟ್ಟಿನ ಆಗ್ರಹ ಮಾಡಿದ್ದಾರೆ.

‘ಜಾತಿಯನ್ನು ಪ್ರಸ್ತಾಪಿಸುವ ಅಗತ್ಯವೇನು?’

ಚುನಾಯಿತ ಜನಪ್ರತಿನಿಧಿಗಳನ್ನು ಅವರ ಜಾತಿಯ ಆಧಾರದಲ್ಲಿ ಗುರುತಿಸುವುದಕ್ಕೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಚಿವರನ್ನು ಅವರ ಸಾಮಾಜಿಕ ಹಿನ್ನೆಲೆಯ ಬದಲಿಗೆ ಸಾಂವಿಧಾನಿಕ ಹುದ್ದೆಯ ಆಧಾರದಲ್ಲಿ ಗುರುತಿಸಬೇಕು ಎಂದು ಅವರು ಹೇಳಿದ್ದಾರೆ.

ಮೈಸೂರು ದಸರಾ ಆಚರಣೆಯ ಸಂದರ್ಭದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಕೆಲವು ಸಚಿವರನ್ನು ಪ್ರವೇಶ ದ್ವಾರದಲ್ಲಿ ಪೊಲೀಸರು ತಡೆದಿದ್ದಾರೆ ಎನ್ನಲಾದ ಘಟನೆಯ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಹಿರಿಯ ನಾಯಕರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಪತ್ರಕರ್ತರೊಬ್ಬರು ಸಚಿವರನ್ನು ನಿರ್ದಿಷ್ಟವಾಗಿ ‘ದಲಿತ ಸಚಿವರು’ ಎಂದು ಉಲ್ಲೇಖಿಸಿದಾಗ ಮಧ್ಯಪ್ರವೇಶಿಸಿದ ಪರಮೇಶ್ವರ್, ಸಾರ್ವಜನಿಕ ಚರ್ಚೆಗಳಲ್ಲಿ ಪದೇಪದೆ ಜಾತಿಯ ಗುರುತನ್ನು ಪ್ರಸ್ತಾಪಿಸುವುದೇಕೆ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com