ಬೆಂಗಳೂರು ಕಸದ ಸಮಸ್ಯೆಗೆ ಶೀಘ್ರ ಮುಕ್ತಿ? ಇನ್ಮುಂದೆ ಸಿಲಿಕಾನ್ ಸಿಟಿಯಲ್ಲಿ ರಾತ್ರಿ 12ರವರೆಗೂ ಬರಲಿದೆ ಕಸದ ಗಾಡಿ: GBAಯಿಂದ ಹೊಸ ಯೋಜನೆ ಶುರು!

ಬೆಳಗ್ಗೆ ಕಸದ ಗಾಡಿ ಬರುವ ಸಮಯಕ್ಕೆ ಸರಿಯಾಗಿ ಕಸ ಹಾಕಲು ಸಾಧ್ಯವಾಗದೆ ಪರದಾಡುವ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಗೃಹಿಣಿಯರ ಅನುಕೂಲಕ್ಕಾಗಿ ಸಂಜೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುವ ವಿಶೇಷ ಯೋಜನೆಗೆ ಚಾಲನೆ ನೀಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:
Bengaluru Garbage Truck
ಕಸದ ಗಾಡಿOnline Desk
Updated on: 

ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ ಮತ್ತು ಸ್ಟಾರ್ಟ್‌ಅಪ್ ಹಬ್ ಆಗಿರುವ ಬೆಂಗಳೂರಿಗೆ ದೇಶದ ಹಾಗೂ ಪ್ರಪಂಚದ ವಿವಿಧ ಮೂಲೆಗಳಿಂದ ಲಕ್ಷಾಂತರ ಜನರು ಉದ್ಯೋಗ ಮತ್ತು ಉದ್ಯಮಕ್ಕಾಗಿ ಬಂದವರೆ ಹೆಚ್ಚು.! ಹಾಗಾಗಿಯೇ, ಈ ನಗರ ದಿನವೂ 24 ಗಂಟೆಯೂ ಬ್ಯುಸಿಯಾಗಿರುತ್ತದೆ. ಅದರಲ್ಲೂ, ಇಲ್ಲಿನ ಸಾಫ್ಟ್‌ವೇರ್ ಮತ್ತು ಕಾಲ್ ಸೆಂಟರ್ ಕಂಪನಿಗಳು ಜಾಗತಿಕ ಗ್ರಾಹಕರಿಗಾಗಿ ಕೆಲಸ ಮಾಡುವುದರಿಂದ, ಸಾವಿರಾರು ಉದ್ಯೋಗಿಗಳು ಶಿಫ್ಟ್ ಆಧಾರದ ಮೇಲೆಯೇ ಕೆಲಸ ಮಾಡುತ್ತಾರೆ. ಹಾಗಾಗಿ, ದಿನಕ್ಕೆ ಒಮ್ಮೆ, ಅದುವೇ ಮುಂಜಾನೆ ಬರುವ ಕಸದ ಗಾಡಿಗೆ ತಮ್ಮ ಮನೆಯ ಕಸ ಹಾಕಲು ಸಾಧ್ಯವಾಗದೆ ಹಲವಾರು ಉದ್ಯೋಗಿಗಳು ಪರದಾಡುತ್ತಿದ್ದರು. ಆದರೆ, ಇದಕ್ಕೆ ಪರಿಹಾರವಾಗಿ, ಇನ್ಮುಂದೆ ಸಂಜೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುವ ವಿಶೇಷ ಯೋಜನೆಗೆ ಜಿಬಿಎ ಚಾಲನೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಪ್ರಾಯೋಗಿಕವಾಗಿ 5 ಪ್ರದೇಶಗಳಲ್ಲಿ ಜಾರಿ

ಸದ್ಯಕ್ಕೆ ಈ ಯೋಜನೆಯನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಾಲ್ಕು ವಾರ್ಡ್‌ಗಳು ಹಾಗೂ ಹೊಂಗಸಂದ್ರ ವಾರ್ಡ್ ಸೇರಿದಂತೆ ಒಟ್ಟು 5 ವಾರ್ಡ್‌ಗಳಲ್ಲಿ (ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ, ಹೊಂಗಸಂದ್ರ, ಮಂಗಳಮ್ಮನಪಾಳ್ಯ ಮತ್ತು ಸಿಂಗಸಂದ್ರ) ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಅದರಂತೆ,  ಬೆಳಗ್ಗಿನ ಅವಧಿಯಲ್ಲಿ ಈ 5 ವಾರ್ಡ್‌ಗಳಲ್ಲಿ ಸುಮಾರು 160 ಕಸದ ವಾಹನಗಳು ಕಾರ್ಯನಿರ್ವಹಿಸಿದರೆ, ಸಂಜೆಯ ವಿಶೇಷ ವಿಲೇವಾರಿಗಾಗಿ 20 ರಿಂದ 25 ಆಟೋಗಳನ್ನು ನಿಯೋಜಿಸಲಾಗಿದೆ. ಉದಾಹರಣೆಗೆ, ಹೊಂಗಸಂದ್ರ ಒಂದರಲ್ಲೇ ಸಂಜೆ ವೇಳೆ ಹಸಿ ಕಸಕ್ಕೆ 3 ಮತ್ತು ಒಣ ಕಸಕ್ಕೆ 3 ರಂತೆ ಒಟ್ಟು 6 ವಾಹನಗಳು ಓಡಾಡಲಿವೆ. ಏತನ್ಮಧ್ಯೆ,  ಸಾರ್ವಜನಿಕರು ಎಂದಿನಂತೆ ಹಸಿ ಕಸ ಮತ್ತು ಒಣ ಕಸವನ್ನು ಕಡ್ಡಾಯವಾಗಿ ಪ್ರತ್ಯೇಕಿಸಿಯೇ ನೀಡಬೇಕಾಗುತ್ತದೆ. ಬೆಳಗ್ಗಿನ ಕಸ ಸಂಗ್ರಹಣೆ ವ್ಯವಸ್ಥೆಯು ಎಂದಿನಂತೆ ಮುಂದುವರಿಯಲಿದೆ.

ಮುಂದುವರೆದು, ಸಂಜೆ ಮತ್ತು ರಾತ್ರಿ ವೇಳೆ ಕಸ ಸಂಗ್ರಹಣೆ ವಾಹನಗಳು ಲಭ್ಯವಿರುವುದರಿಂದ ಸಾರ್ವಜನಿಕರು ಹಾಗೂ ರಸ್ತೆಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಕಸ ಹಾಕುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಕಮಿಷನರ್ ಕೆ.ಎನ್. ರಮೇಶ್ ಎಚ್ಚರಿಸಿದ್ದಾರೆ. ನಿಯಮ ಉಲ್ಲಂಘಿಸುವವರಿಗೆ ಮೊದಲ 2-3 ದಿನ ಜಾಗೃತಿ ಮೂಡಿಸಿ, ಆ ಬಳಿಕವೂ ಮುಂದುವರಿಸಿದರೆ ಭಾರೀ ದಂಡ ಹಾಗೂ ವಾಹನ ಸೀಜ್ ಮಾಡುವ ಕ್ರಮ ಜರುಗಿಸಲಾಗುತ್ತದೆ.

Bengaluru Garbage Truck
ಮಧ್ಯರಾತ್ರಿ 3 ಗಂಟೆಗೆ ಪಟಾಕಿ ಸದ್ದು: ಭಾರೀ ಶಬ್ದದೊಂದಿಗೆ ಮ್ಯೂಸಿಕ್; 'ಫನ್ ವರ್ಲ್ಡ್' ವಿರುದ್ಧ ಕ್ರಮಕ್ಕೆ ರಮ್ಯಾ ಆಗ್ರಹ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com