ಪುಲಕೇಶಿನಗರ ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್‌; ಪಾರ್ಸೆಲ್‌ನಲ್ಲಿದ್ದ ಸಾಧನ ಸ್ಫೋಟ., ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ..!

ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಕಾರಣವಾಗಿರುವ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
File photo
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಪುಲಕೇಶಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ.

ಪಾರ್ಸೆಲ್‌ನಲ್ಲಿ ಬಂದಿದ್ದ ಟಾರ್ಚ್ ರೂಪದ ಸುಧಾರಿತ ಸ್ಫೋಟಕ ಸಾಧನವೇ (IED) ಸ್ಫೋಟಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಬ್ಯಾಟರಿ ಚಾಲಿತ ಟಾರ್ಚ್‌ನಂತಿರುವ ವಸ್ತುವನ್ನು ಒಳಗೊಂಡ ಪಾರ್ಸೆಲ್‌ವೊಂದು ಕಟ್ಟಡಕ್ಕೆ ತಲುಪಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಕಾರಣವಾಗಿರುವ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಂಗಳವಾರ ಕಟ್ಟಡದ ಭದ್ರತಾ ಸಿಬ್ಬಂದಿ ಅಲ್ಲಾವುದ್ದೀನ್‌ಗೆ ದೂರವಾಣಿ ಕರೆ ಬಂದಿತ್ತು. ಪಾರ್ಸೆಲ್‌ವೊಂದನ್ನು ಸ್ವೀಕರಿಸುವಂತೆ ಕರೆ ಮಾಡಿದ ವ್ಯಕ್ತಿ ಸೂಚಿಸಿದ್ದ ಎಂದು ತಿಳಿದುಬಂದಿದೆ.

File photo
Watch | ಬೆಂಗಳೂರು ಕಟ್ಟಡದಲ್ಲಿ ಸ್ಫೋಟ: ಇಬ್ಬರಿಗೆ ಗಾಯ; ಪ್ರಿಯಾಂಕ್ ಖರ್ಗೆ ರಿಯಾಕ್ಷನ್!

ಕರೆ ಬಂದ ಬಳಿಕ ಪಾರ್ಸೆಲ್‌ ಸ್ವೀಕರಿಸಿದ ಅಲ್ಲಾವುದ್ದೀನ್ ಮತ್ತು ಪೇಂಟರ್‌ ಸೂರಜ್ ಅದನ್ನು ಕಟ್ಟಡದ ಐದನೇ ಮಹಡಿಗೆ ತೆಗೆದುಕೊಂಡು ಹೋಗಿದ್ದರು.

ಪಾರ್ಸೆಲ್‌ ತೆರೆದ ಬಳಿಕ ಅದರೊಳಗಿದ್ದ ವಸ್ತುವಿನ ಬ್ಯಾಟರಿಯನ್ನು ಚಾಲನೆ ಮಾಡಲು ಇಬ್ಬರೂ ಪ್ರಯತ್ನಿಸಿದಾಗ ಅದು ಸ್ಫೋಟಗೊಂಡಿದೆ. ಪರಿಣಾಮ ಇಬ್ಬರಿಗೂ ಗಾಯಗಳಾಗಿದ್ದು, ಅವರಲ್ಲಿ ಒಬ್ಬರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಭದ್ರತಾ ಸಿಬ್ಬಂದಿ ಅಲ್ಲಾವುದ್ದೀನ್‌ಗೆ ಬಂದ ದೂರವಾಣಿ ಕರೆಗಳ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಸ್ಫೋಟಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com