ಶಿಷ್ಟಾಚಾರ ಏನು ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿದಿಲ್ಲ: ಜಟ್ಟಿ ಕಾಳಗ ರದ್ದಾದ ಬಗ್ಗೆ ನನಗೆ ಮಾಹಿತಿಯಿಲ್ಲ; ಯದುವೀರ್ ಒಡೆಯರ್

ದಸರಾ ಮಹೋತ್ಸವದ ಬಳಿಕ ಕಾರ್ಯಕ್ರಮಗಳ ಶಿಷ್ಟಾಚಾರ ಮತ್ತು ಸುಧಾರಣೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ದಸರಾ ಕಾರ್ಯಕ್ರಮಗಳಲ್ಲಿ ಕೆಲವು ಸುಧಾರಣೆಗಳಾಗಿವೆ ಎಂದು ಒಪ್ಪಿಕೊಂಡ ಅವರು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸುಧಾರಣೆಗಳಿಗೆ ಅವಕಾಶವಿದೆ ಎಂದರು.
Yaduveer wadiyar
ಯದುವೀರ್ ಒಡೆಯರ್
Updated on: 

ಮೈಸೂರು: ವಿಜಯಯಾತ್ರೆಗೆ ಸಮಯವಾಗಿದ್ದರಿಂದ ನಾವು ತೆರಳಿದ್ದೆವು. ಆದರೆ, ಯಾವ ವಿಚಾರವಾಗಿ ಜಟ್ಟಿ ಕಾಳಗ ರದ್ದಾಯಿತು ಎಂಬುದು ನನಗೆ ಮಾಹಿತಿ ಇಲ್ಲ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವದ ಬಳಿಕ ಕಾರ್ಯಕ್ರಮಗಳ ಶಿಷ್ಟಾಚಾರ ಮತ್ತು ಸುಧಾರಣೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ದಸರಾ ಕಾರ್ಯಕ್ರಮಗಳಲ್ಲಿ ಕೆಲವು ಸುಧಾರಣೆಗಳಾಗಿವೆ ಎಂದು ಒಪ್ಪಿಕೊಂಡ ಅವರು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸುಧಾರಣೆಗಳಿಗೆ ಅವಕಾಶವಿದೆ ಎಂದರು.

ಮುಖ್ಯವಾಗಿ, ನಂದಿಧ್ವಜ ಪೂಜೆ ಸೇರಿದಂತೆ ದಸರಾ ಸಂದರ್ಭದಲ್ಲಿನ ಪ್ರೋಟೋಕಾಲ್ ಮ್ಯಾನೇಜ್‌ಮೆಂಟ್ ಕುರಿತು ಅವರು ಗೊಂದಲ ವ್ಯಕ್ತಪಡಿಸಿದ್ದಾರೆ. ಏನು ಶಿಷ್ಟಾಚಾರ ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿದಿಲ್ಲ. ಸರ್ಕಾರವೇ ಅಧಿಕೃತ ಶಿಷ್ಟಾಚಾರ ರೂಪಿಸಿ ಅದನ್ನು ಮುಂಬರುವ ವರ್ಷಗಳಲ್ಲಿ ಅನುಸರಿಸಬೇಕು ಎಂದು ಯದುವೀರ್ ಒತ್ತಾಯಿಸಿದರು.

ನಂದಿಧ್ವಜ ಪೂಜೆ ವೇಳೆ ಸಚಿವರನ್ನು ತಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಸರ್ಕಾರ ನಡೆಸುವ ಕಾರ್ಯಕ್ರಮವಾಗಿರುವುದರಿಂದ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದರು. ಅತಿಥಿಗಳಾಗಿ ಬರುವ ಅಕ್ಕಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಕ್ತ ಶಿಷ್ಟಾಚಾರ ರೂಪಿಸುವ ಅಗತ್ಯವನ್ನೂ ಅವರು ಪ್ರಸ್ತಾಪಿಸಿದರು.

Yaduveer wadiyar
ಜಂಬೂ ಸವಾರಿಗೆ ಪುಷ್ಪಾರ್ಚನೆ ಪ್ರೋಟೋಕಾಲ್‌ನಲ್ಲಿ ಸಿಎಂ ಪತ್ನಿ ಹೆಸರು ಇರಲಿಲ್ಲ; ಶಿಷ್ಟಾಚಾರ ಉಲ್ಲಂಘನೆಯಾದ್ರೂ ತಪ್ಪೇನಿಲ್ಲ: ಯತೀಂದ್ರ

9.30ರಿಂದ 10.10ಕ್ಕೆ ಲಗ್ನದಲ್ಲಿ ಜಟ್ಟಿ ಕಾಳಗ ಮುಗಿಸಬೇಕಿತ್ತು. ನಮಗೆ ವಿಜಯಯಾತ್ರೆಗೆ ಸಮಯವಾಗುತ್ತಿದ್ದರಿಂದ ಅದಕ್ಕೆ ತೆರಳಿದೆವು. ಈ ವಿಚಾರದ ವಾಸ್ತವ ನನಗೆ ಗೊತ್ತಿಲ್ಲ. ವರದಿ ಬಂದ ನಂತರ ಪ್ರತಿಕ್ರಿಯಿಸುತ್ತೇನೆ. ಅರಮನೆ ಭದ್ರತೆಯನ್ನು ಬೇರೆಯವರಿಗೆ ವಹಿಸಿದ್ದು, ಅಲ್ಲಿನ ಪೊಲೀಸ್‌ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ. ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ನಮಗೆ ಗೊತ್ತಿಲ್ಲ,'' ಎಂದರು.

ಎಲ್ಲದಕ್ಕೂ ವಿರೋಧ ಮಾಡುವುದಿಲ್ಲ. ನಾವು ಸುಧಾರಣೆ ಬಗ್ಗೆ ಸಭೆಯಲ್ಲಿ ಸಲಹೆ ನೀಡಿದ್ದೆವು. ಆದರೆ, ಅವುಗಳನ್ನು ಪರಿಗಣಿಸಿದಂತೆ ಕಂಡು ಬರಲಿಲ್ಲ. ಪಾರದರ್ಶಕವಾಗಿ ಪಾಸ್‌ ವಿತರಣೆ ವ್ಯವಸ್ಥೆ ಮಾಡಬೇಕು. ಇದು ಪ್ರತಿಬಾರಿಯ ಸಮಸ್ಯೆ. ಎಷ್ಟು ಆಸನಗಳಿವೆ ಎಂದು ಮಿತಿಯಲ್ಲಿ ಪಾಸ್‌ಗಳನ್ನು ವಿತರಣೆ ಮಾಡಲು ಹೇಳಲಾಗಿತ್ತು. ಆದರೆ, ಇಲ್ಲಿ ಯಾವುದೂ ಪಾಲನೆಯಾಗಿಲ್ಲ,'' ಎಂದು ಹೇಳಿದರು.

ಜಂಬೂಸವಾರಿ ದಿನದಂದು ಮಾಧ್ಯಮದವರು ಮತ್ತು ಹೈವೇ ವೃತ್ತದಲ್ಲಿ ಬಾಲಕಿ ಮೇಲೆ ನಡೆದಂತಹ ಹಲ್ಲೆಯನ್ನು ಖಂಡಿಸಿದ ಯದುವೀರ್‌, ''ಇಂತಹ ಘಟನೆಗಳು ನಡೆಯಬಾರದು. ಮಗುವಿನ ಪೋಷಕರ ಜತೆ ಮಾತನಾಡಿದ್ದೇನೆ. ಸಿಎಸ್‌ಆರ್‌ ನಿಧಿಯಿಂದ ಹಣ ಭರಿಸಲಾಗುತ್ತಿದೆ. ಆದರೆ, ಸರ್ಕಾರವೇ ಆ ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು,'' ಎಂದು ಆಗ್ರಹಿಸಿದರು.

''ಇಲ್ಲಿಗೆ ಬೇರೆ ಕಡೆಯ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ. ಅವರಿಗೆ ಇಲ್ಲಿನ ಸಮಸ್ಯೆ, ಪದ್ಧತಿ ಬಗ್ಗೆ ಗೊತ್ತಿರುವುದಿಲ್ಲ. ಈ ಕುರಿತು ಇಲ್ಲಿಗೆ ‌ ನೇಮಿಸುವ ಸಿಬ್ಬಂದಿಗೆ ತರಬೇತಿ ನೀಡಬೇಕು. ಮಾಧ್ಯಮದವರಿಗೆ ಒಂದು ಶಿಷ್ಟಾಚಾರ ರೂಪಿಸಬೇಕು. ಪತ್ರಕರ್ತರಿಗೂ ಸಭೆ ಮಾಡಿ ಮಾಹಿತಿ ನೀಡಬೇಕಿತ್ತು. ಇದ್ಯಾವುದನ್ನು ಮಾಡಿಲ್ಲ. ಇದರಿಂದ ಗೊಂದಲವಾಗಿದೆ,'' ಎಂದರು.

Yaduveer wadiyar
Video: 'ಅತ್ಯಾಚಾರ ನಿಲ್ಲಿಸಿ, ಮಹಿಳೆಯರನ್ನು ಗೌರವಿಸಿ'; ಕೊಡಗಿನ ದಸರಾ ಮೆರವಣಿಗೆಯಲ್ಲಿ ಮಹಿಳಾ ಸುರಕ್ಷತೆಗೆ ಧ್ವನಿ, ವಿಶೇಷ ಅಭಿಯಾನ

ಸಿಎಂ ಪತ್ನಿ ಅಂಬಾರಿಗೆ ಪುಷ್ಪಾರ್ಚನೆ ಕುರಿತು ಮಾತನಾಡಿದ ಅವರು, ''ಶಿಷ್ಟಾಚಾರ ಏನಿದೆ ಎಂಬುದು ನನಗೂ ಗೊತ್ತಿಲ್ಲ. ಆದರೆ, ಇದೇ ರೀತಿ ಶಿಷ್ಟಾಚಾರ ಇರಬೇಕು ಎಂದು ಬಹಿರಂಗಪಡಿಸಲಿ. ಅದನ್ನು ಎಲ್ಲರೂ ಒಪ್ಪಿಕೊಂಡು ಮುಂದುವರಿಯುತ್ತೇವೆ,'' ಎಂದು ಹೇಳಿದರು.

ಒಂದು ಮಟ್ಟಿಗೆ ದಸರಾ ಯಶಸ್ವಿಯಾಗಿದೆ. ಒಂದು ವರ್ಗಕ್ಕೆ ಆನಂದವಾಗಿದೆ. ಕೆಲವು ವಿಫಲವಾಗಿವೆ. ಕೆಲ ಕಾರ್ಯಕ್ರಮಗಳು ಚೆನ್ನಾಗಿಯೇ ಆಗಿವೆ. ಆದರೆ, ವ್ಯವಸ್ಥೆಯಲ್ಲಿ ಇನ್ನೂ ಸುಧಾರಣೆ ಮಾಡುವುದು ಬಹಳಷ್ಟು ಇದೆ. ಪ್ರತಿವರ್ಷವೂ ಇಂತಹ ಸಮಸ್ಯೆಗಳಾಗುತ್ತವೆ. ನಾವು ಅಧಿಕಾರಕ್ಕೆ ಬಂದಾಗಲೂ ಸಮಸ್ಯೆಗಳಾಗಿವೆ. ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಮಾಹಿತಿ ಪಡೆದು ಚರ್ಚೆ ಮಾಡೋಣ,'' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com