ಸಿಎಂ ಜತೆಗಿನ ಸಭೆ ವಿಫಲ, ಕಬ್ಬು ಬೆಳೆಗಾರರ ಹೋರಾಟ ಮುಂದುವರಿಕೆ; ಗಲಾಟೆ ಏಕೆ ಮಾಡ್ಕೊಂಡ್ರಿ: ಡಿಕೆಶಿ ಗರಂ

ಸಿಎಂ ಡಿ.ಕೆ ಶಿವಕುಮಾರ್ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಸಭೆ ಕ ಕರೆದಿರುವ ಹಿನ್ನೆಲೆಯಲ್ಲಿ, ಸರ್ಕಾರ ಮತ್ತು ಮುಖ್ಯಮಂತ್ರಿಗಳ ಗಮನ ಸೆಳೆಯಲು ರೈತರು ಈ ಹೋರಾಟಕ್ಕಿಳಿದಿದ್ದಾರೆ.
Sugarcane Farmers Meeting With CM Shivakumar
ರೈತರೊಂದಿಗೆ ಸಿಎಂ ಡಿಕೆ ಶಿವಕುಮಾರ್
Updated on: 

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಂಬಂಧ ನಡೆದ ಸಭೆ ವಿಫಲವಾಗಿದ್ದು, ರೈತರ ಧರಣಿ ಮುಂದುವರೆದಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ರಾಜ್ಯ ಹೆದ್ದಾರಿ ತಡೆದು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಇಂದು ಸಿಎಂ ಡಿ.ಕೆ ಶಿವಕುಮಾರ್ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಸಭೆ ಕ ಕರೆದಿರುವ ಹಿನ್ನೆಲೆಯಲ್ಲಿ, ಸರ್ಕಾರ ಮತ್ತು ಮುಖ್ಯಮಂತ್ರಿಗಳ ಗಮನ ಸೆಳೆಯಲು ರೈತರು ಈ ಹೋರಾಟಕ್ಕಿಳಿದಿದ್ದಾರೆ.

ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಅ.26) ಕಬ್ಬು ಬೆಳೆಗಾರರೊಂದಿಗಿನ ಸಭೆ ಅಂತ್ಯವಾಗಿದೆ. ಸುವರ್ಣ ಸೌಧದಲ್ಲಿ ಆರಂಭದಲ್ಲಿ ಕಾರ್ಖಾನೆ ಮಾಲೀಕರ ಜತೆ ಸಭೆ ನಡೆಸಿದ ಬಳಿಕ ಸತತ ಎರಡು ಗಂಟೆ ಕಾಲ ರೈತರ ಜೊತೆ ಸಭೆ ಮಾಡಿದ್ದು, ರೈತರ ಆಹ್ವಾಲುಗಳನ್ನು ಆಲಿಸಿದ್ದಾರೆ.

ಆದ್ರೆ, ಯಾವುದೇ ಸ್ಪಷ್ಟ ಭರವಸೆ ‌ನೀಡಿಲ್ಲ. ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳಲು ಆಗಲ್ಲ. ಇದಕ್ಕೆ ಸ್ವಲ್ಪ ಸಮಯವಕಾಶ ಬೇಕು ಎಂದಿದ್ದಾರೆ. ಆದ್ರೆ, ರೈತರು ಮಾತ್ರ ಪ್ರೋತ್ಸಾಹ ಧನ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

Sugarcane Farmers Meeting With CM Shivakumar
ಕಬ್ಬು ತೂಕದಲ್ಲೂ ಅಕ್ರಮ, ಸಕ್ಕರೆ MSP ಹೆಚ್ಚಳಕ್ಕೆ ಆಗ್ರಹ; ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಚರ್ಚೆ

ಸಂಧಾನ ಸಭೆ ವಿಫಲ

ಸಿಎಂ ಜೊತೆ ಸಭೆ ಬಳಿಕ ಮಾತನಾಡಿರುವ ಚೂನಪ್ಪ ಪೂಜಾರಿ, ರಾಜ್ಯ ಸರ್ಕಾರ 1 ಸಾವಿರ ಕೊಡಲೇಬೇಕು, ಇಲ್ಲದಿದ್ದರೆ ಹೋರಾಟ ಮುಂದುವರಿಯುತ್ತದೆ. ಕರ್ನಾಟಕ ಬಂದ್‌ ಬಗ್ಗೆ ಮಾತುಕತೆ ನಡೆಸಿ ನಿರ್ಧಾರ ಮಾಡುತ್ತೇವೆ. ಸರ್ಕಾರದ ನಿರ್ಧಾರ ಬಳಿಕ ಕರ್ನಾಟಕ ಬಂದ್ ಬಗ್ಗೆ ತೀರ್ಮಾನಿಸ್ತೇವೆ. ರಾಷ್ಟ್ರೀಯ ಹೆದ್ದಾರಿ ಸೇರಿ ಎಲ್ಲಾ ರೀತಿಯ ಬಂದ್ ಮಾಡುತ್ತೇವೆ.

ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ ನಡೆಸಿ ನಿರ್ಧರಿಸಲಿ. ಬರೀ ಚರ್ಚೆ ಮಾತ್ರ ಆಗಿದೆ, ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಂದು ರಾತ್ರಿ ಆಗಲಿ, ನಾಳೆ ಆಗಲಿ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿ. ಕಬ್ಬಿನ ದರ ನಿಗದಿ ಆಗುವವರೆಗೂ ಕಾರ್ಖಾನೆಗಳನ್ನು ನಡೆಸಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.

ಗಲಾಟೆ ಏಕೆ ಮಾಡ್ಕೊಂಡ್ರಿ: ಡಿಕೆಶಿ ಗರಂ

ಕಬ್ಬಿಗೆ ದರ ನಿಗದಿ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ರೈತರ ಜೊತೆ ಸಭೆ ನಡೆಸಿದ್ದು, ಈ ವೇಳೆ ರೈತರ ನಡುವೆ ನಡೆದ ಗಲಾಟೆಯನ್ನು ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಹೊಡೆಯೋ ಹಾಗಾದ್ರೆ ನನಗೆ ಹೊಡೆದು ಹೋಗಿ.

ಸಭೆಯಲ್ಲಿ ಏಕೆ ನೀವು ಗಲಾಟೆ ಮಾಡ್ಕೊಂಡ್ರಿ. ನಾವು ಏನೋ ರಾಜಕಾರಣಿಗಳು ಚುನಾವಣೆ ನಿಲ್ಲತ್ತೇವೆ ಯುದ್ಧ ಮಾಡುತ್ತೇವೆ. ನೀವು ಚುನಾವಣೆಗೆ ನಿಂತ್ರೆ ಮಾತು ಬೇರೆ. ಆದ್ರೆ ನೀವು ಯಾರೂ ಚುನಾವಣೆಗೆ ನಿಲ್ಲುವುದಿಲ್ಲ. ನೀವೆಲ್ಲರೂ ಒಂದಾಗಿ ಇರಬೇಕು. ನಮ್ಮ ರೈತರು ಎಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿ ಇರಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಪ್ರೋತ್ಸಾಹಧನ ವಿಚಾರವಾಗಿ ರೈತರ ಎರಡು ಗುಂಪುಗಳ ನಡುವೆ ಘರ್ಷಣೆ

ಪ್ರೋತ್ಸಾಹಧನದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಭಾನುವಾರ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿ ರಾಜ್ಯ ಹೆದ್ದಾರಿಯನ್ನು ತಡೆದಿದ್ದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ರೈತರೊಂದಿಗೆ ನಡೆದ ಸಭೆಯ ವೇಳೆ ಪ್ರೋತ್ಸಾಹಧನದ ಮೊತ್ತದ ವಿಚಾರವಾಗಿ ರೈತರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಹೊಡೆದಾಟ ನಡೆದಿದೆ. ಜಿಲ್ಲಾ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರತಿ ಟನ್ ಕಬ್ಬಿಗೆ 6,000 ರೂ ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ಒಂದು ಗುಂಪು 5,500ರೂಗೆ ಇಳಿಸಲು ಒಪ್ಪಿಕೊಂಡಿತ್ತು. ಮತ್ತೊಂದು ಗುಂಪು 4,500ಗೆ ಇಳಿಸಲು ಮುಂದಾಗಿತ್ತು ಎನ್ನಲಾಗಿದೆ. ಈ ವಿಚಾರವೇ ಘರ್ಷಣೆಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com