ಬೆಂಗಳೂರಿನಲ್ಲಿ 'ತ್ಯಾಜ್ಯ ಮುಕ್ತ' ಆಪರೇಷನ್: ಒಂದೇ ತಿಂಗಳಲ್ಲಿ 1.40 ಲಕ್ಷ ಟನ್ ಕಸ ಮುಕ್ತಗೊಳಿಸಿದ GBA..!

ತಿಂಗಳ ಕಾಲ ನಡೆದ ಅಭಿಯಾನದ ವೇಳೆ ಜಿಬಿಎಗೆ ಒಟ್ಟು 6,819 ಮನವಿಗಳು ಬಂದಿದ್ದು, ಆಗಸ್ಟ್‌ನಲ್ಲಿ ಪ್ರತಿದಿನ ಸರಾಸರಿ 2,650 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.
Garbage collection disrupted in Bengaluru; 35 FIRs registered against contractors
ಸಾಂದರ್ಭಿಕ ಚಿತ್ರPhoto | Express
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ GBA) ಹಮ್ಮಿಕೊಂಡಿರುವ "ತ್ಯಾಜ್ಯ ಮುಕ್ತ ಅಭಿಯಾನ" (Freedom From Waste) ಯಶಸ್ಸು ಕಂಡಿದೆ.

ಕಳೆದ ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ನಡೆದ ಈ ವಿಶೇಷ ಸ್ವಚ್ಛತಾ ಆಂದೋಲನದಲ್ಲಿ ನಗರದಾದ್ಯಂತ ಬರೋಬ್ಬರಿ 1,40,277 ಟನ್ ಕಸ ತೆರವುಗೊಳಿಸಿ ಜಿಬಿಎ ಇತಿಹಾಸ ನಿರ್ಮಿಸಿದೆ.

ಇದರಲ್ಲಿ ಜಿಬಿಎ ಒಂದೇ 3,378 ಸ್ಥಳಗಳಿಂದ 82,124 ಟನ್ ಕಟ್ಟಡ ನಿರ್ಮಾಣ ಮತ್ತು ನೆಲಸಮಗೊಳಿಸುವಿಕೆಯ ತ್ಯಾಜ್ಯವನ್ನು ತೆರವುಗೊಳಿಸಿದೆ.

ತಿಂಗಳ ಕಾಲ ನಡೆದ ಅಭಿಯಾನದ ವೇಳೆ ಜಿಬಿಎಗೆ ಒಟ್ಟು 6,819 ಮನವಿಗಳು ಬಂದಿದ್ದು, ಆಗಸ್ಟ್‌ನಲ್ಲಿ ಪ್ರತಿದಿನ ಸರಾಸರಿ 2,650 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.

ಐದು ನಗರ ಪಾಲಿಕೆಗಳ ಪೈಕಿ ಬೆಂಗಳೂರು ಉತ್ತರ ನಗರ ಪಾಲಿಕೆಯು 29,830 ಟನ್ ತ್ಯಾಜ್ಯವನ್ನು ತೆರವುಗೊಳಿಸಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ 20,848 ಟನ್, ಬೆಂಗಳೂರು ದಕ್ಷಿಣ ನಗರ ಪಾಲಿಕೆ 13,775 ಟನ್, ಬೆಂಗಳೂರು ಪೂರ್ವ ನಗರ ಪಾಲಿಕೆ 11,606 ಟನ್ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆ 6,065 ಟನ್ ತ್ಯಾಜ್ಯವನ್ನು ತೆರವುಗೊಳಿಸಿವೆ.

Garbage collection disrupted in Bengaluru; 35 FIRs registered against contractors
ಮುಂಜಾನೆ 5:30ಕ್ಕೆ ಸಚಿವ ಕೃಷ್ಣ ಬೈರೇಗೌಡ ದಿಢೀರ್ ರೌಂಡ್ಸ್: ಕಸ ವಿಲೇವಾರಿ ವ್ಯವಸ್ಥೆ ಪರಿಶೀಲನೆ, ಗೇಟ್ ಬಳಿಯೇ ಕಸ ಸಂಗ್ರಹಿಸುವಂತೆ ಸಿಬ್ಬಂದಿಗೆ ಸೂಚನೆ; Video

ಇತರೆ ಸಂಸ್ಥೆಗಳ ಪೈಕಿ ಬಿಡಿಎ 51,323 ಟನ್, ಕೆಐಎಡಿಬಿ 2,800 ಟನ್ ಹಾಗೂ ಬಿಎಂಆರ್‌ಸಿಎಲ್ 2,572 ಟನ್ ತ್ಯಾಜ್ಯವನ್ನು ತೆರವುಗೊಳಿಸಿವೆ.

ಬೆಸ್ಕಾಂ 3,448 ಹಾನಿಗೊಳಗಾದ ವಿದ್ಯುತ್ ಪರಿವರ್ತಕಗಳು, ವಿದ್ಯುತ್ ಕಂಬಗಳು ಸೇರಿದಂತೆ ಇತರೆ ತ್ಯಾಜ್ಯವನ್ನು ತೆರವುಗೊಳಿಸಿದೆ. ಇದರ ಜತೆಗೆ 7,547 ಯಾರ್ಡ್‌ಗಳನ್ನು ಸ್ವಚ್ಛಗೊಳಿಸಲಾಗಿದೆ.

ಈ ಅಭಿಯಾನಕ್ಕೆ ಯಾವುದೇ ಗಡುವು ನಿಗದಿಪಡಿಸಿಲ್ಲ. ನಗರದ ಹೊರವಲಯಗಳಲ್ಲಿಯೂ ಇದರ ಪರಿಣಾಮವಾಗಿ ಬದಲಾವಣೆಗಳನ್ನು ಕಾಣಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com