ಕಾರ್ಪೋರೇಟರ್ ಗೌರಮ್ಮಗೆ ಜಾಮೀನು
ಬೆಂಗಳೂರು: ಆರ್ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿ ಕಾರ್ಪೋರೇಟರ್ ಗೌರಮ್ಮ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆರ್ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಅಜಾದ್ನಗರದ ಕಾರ್ಪೋರೇಟರ್ ಗೌರಮ್ಮ ಅವರಿಗೆ ಬೆಂಗಳೂರಿನ 4ನೇ ತ್ವರಿತಗತಿ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ. 1 ಲಕ್ಷ ರುಪಾಯಿ ಮೌಲ್ಯದ ಭದ್ರತಾ ಠೇವಣಿ ಮತ್ತು ಇಬ್ಬರು ವ್ಯಕ್ತಿಗಳ ಶೂರಿಟಿಯ ಮೇರೆಗೆ ಗೌರಮ್ಮ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಗೌರಮ್ಮ ಅವರಿಗೆ ಕೆಲವು ಎಚ್ಚರಿಕೆಗಳನ್ನು ನೀಡಿರುವ ನ್ಯಾಯಾಲಯ, ಸಾಕ್ಷಿಗಳನ್ನು ನಾಶಪಡಿಸದಂತೆಯೂ, ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆಯೂ ಸೂಚನೆ ನೀಡಿದೆ. ಅಲ್ಲದೆ ನ್ಯಾಯಾಲಯದ ಅನುಮತಿ ಪಡೆಯದೇ ವಿದೇಶಕ್ಕೆ ಹೋಗದಂತೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಅಜಾದ್ನಗರದ ಕಾರ್ಪೋರೇಟರ್ ಆಗಿರುವ ಗೌರಮ್ಮ ಅವರ ಅಕ್ರಮ ಆಸ್ತಿ ಗಳಿಕೆಯನ್ನು ಲಿಂಗರಾಜು ಎಂಬ ಆರ್ಟಿಐ ಕಾರ್ಯಕರ್ತ ಮಾಹಿತಿ ಹಕ್ಕಿನ ಮೂಲಕ ಬಯಲಿಗೆಳೆದಿದ್ದ. ನಂತರ ಲಿಂಗರಾಜು ಅಜಾದ್ನಗರದ ತಮ್ಮ ಮನೆಯ ಎದುರೇ ಭೀಕರವಾಗಿ ಹತ್ಯೆಗೊಳಗಾಗಿದ್ದ. ಗೌರಮ್ಮ ಅವರ ಪತಿ ಗೋವಿಂದರಾಜು ಅವರು ಕೆಲ ರೌಡಿಗಳಿಗೆ ಸುಪಾರಿ ನೀಡಿ ಲಿಂಗರಾಜು ಅವರನ್ನು ಹತ್ಯೆ ಮಾಡಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಹಂತಕರನ್ನು ಬಂಧಿಸಿದ್ದ ಪೊಲೀಸರು ಅವರು ನೀಡಿದ ಸಾಕ್ಷಿಯ ಮೇರೆಗೆ ಗೌರಮ್ಮ ಪತಿ ಗೋವಿಂದರಾಜು ಅವರನ್ನು ಕೂಡಲೇ ಬಂಧಿಸಿದ್ದರು. ಪ್ರಕರಣ ನಂತರ ತಲೆ ಮರೆಸಿಕೊಂಡಿದ್ದ ಗೌರಮ್ಮ ಅವರನ್ನು ಕರ್ನಾಟಕ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

