ಏ.30ರವರೆಗೆ ಎಫ್ಐಎ ವಶಕ್ಕೆ ಮುಷರ್ರಫ್
ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಮಾಜಿ ಅಧ್ಯಕ್ಷ ಮುಷರ್ರಫ್ ಅವರನ್ನು ಏಪ್ರಿಲ್ 30ರವರೆಗೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎಫ್ಐಎ) ವಶಕ್ಕೆ ನೀಡಲಾಗಿದೆ.
ಬೆನಜೀರ್ ಭುಟ್ಟೋ ಅವರ ಹತ್ಯಾ ಪ್ರಕರಣಕ್ಕೆ ಸಂಬಂಧ ವಕೀಲ ಚೌದರಿ ಜುಲ್ಫಿಕರ್ ಅಲಿ ಅವರು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಖ್ಯ ನ್ಯಾ. ಚೌದರಿ ಹಬೀಬ್ ಉರ್ ರೆಹ್ಮಾನ್ ಅವರು, ಮುಷರಫ್ ಅವರನ್ನು ಏಪ್ರಿಲ್ 30ರವರೆಗೆ ಎಫ್ಐಎ ವಶಕ್ಕೆ ನೀಡಿದ್ದಾರೆ.
ಎಫ್ಐಎ ಅಧಿಕಾರಿಗಳು ನಿನ್ನೆ ಮುಷರಫ್ ಅವರನ್ನು ಇಸ್ಲಾಮಾಬಾದ್ನ ಹೊರವಲಯದಲ್ಲಿರುವ ಅವರ ಫಾರ್ಮ್ಹೌಸ್ನಿಂದ ಅಧಿಕೃತವಾಗಿ ವಶಕ್ಕೆ ಪಡೆದಿದ್ದರು.
2007ರಲ್ಲಿ ನಡೆದ ಮಾಜಿ ಪ್ರಧಾನಿ ಭುಟ್ಟೋ ಹತ್ಯೆ ಪ್ರಕರಣದಲ್ಲಿ ಮುಷರ್ರಫ್ ಅವರ ನೇರ ಹಸ್ತಕ್ಷೇಪವಿದೆ ಎಂಬ ಆರೋಪದ ಮೇರೆಗೆ ಎಫ್ಐಎ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. 2007ರ ಚುನಾವಣಾ ಪ್ರಚಾರದ ವೇಳೆ ಅಂದು ಅಧ್ಯಕ್ಷರಾಗಿದ್ದ ಮುಷರ್ರಫ್ ಅವರು, ಉದ್ದೇಶಪೂರ್ವಕವಾಗಿಯೇ ಭುಟ್ಟೋ ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸಿರಲ್ಲಿಲ್ಲ. ಹೀಗಾಗಿಯೇ ಬೆನ್ಜೀರ್ ಭುಟ್ಟೋ ಅವರ ಹತ್ಯೆಯಾಗಿದೆ ಎಂದು ಆರೋಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

