ಶಾರದಾ ಹಗರಣ: ಚಿದಂಬರಂ ಪತ್ನಿ ವಿಚಾರಣೆಗೆ ಆಗ್ರಹ
ನವದೆಹಲಿ: ಪಶ್ಚಿಮ ಬಂಗಾಳದ ಶಾರದಾ ಚಿಟ್ಫಂಡ್ ಸಂಸ್ಥೆಯ ಹಗರಣದಲ್ಲಿ ಕೇಂದ್ರ ಸಚಿವ ಚಿದಂಬರಂ ಅವರು ಪತ್ನಿ ನಳಿನಿ ಚಿದಂಬರಂ ಅವರ ಹಸ್ತಕ್ಷೇಪವಿದ್ದು, ಅವರ ವಿಚಾರಣೆ ನಡೆಸಬೇಕು ಎಂದು ಬಿಜೆಪಿ ಮತ್ತು ಎಡ ಪಕ್ಷಗಳು ಆಗ್ರಹಿಸುತ್ತಿವೆ.
ಪ್ರಕರಣದ ಕುರಿತು ಶಾರದಾ ಸಂಸ್ಥೆಯ ಮುಖ್ಯಸ್ಥ ಸುದೀಪ್ತಾ ಸೇನ್ ಅವರು ಉದ್ದೇಶಪೂರ್ವಕವಾಗಿಯೇ ಸಿಬಿಐಗೆ ಪತ್ರಬರೆದಿದ್ದು, ಪತ್ರದಲ್ಲಿ ಚಿದಂಬರಂ ಅವರ ಪತ್ನಿ ಮತ್ತು ಸಂಸ್ಥೆಯ ಇತರೆ ಪ್ರಮುಖ ಸದಸ್ಯರ ಹೆಸರುಗಳನ್ನು ನಮೂದಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆಗೊಳಪಡಿಸಬೇಕು. ಅಲ್ಲದೆ ಪ್ರಕರಣದಲ್ಲಿ ಚಿದಂಬರಂ ಅವರ ಪತ್ನಿಯ ಹೆಸರು ಕೇಳಿಬರುತ್ತಿರುವುದರ ಕುರಿತು ಸಚಿವ ಚಿದಂಬರಂ ಅವರು ಸ್ಫಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಈ ಕುರಿತು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಅವರು ಮಾತನಾಡಿ, ಶಾರದಾ ಚಿಟ್ ಫಂಡ್ ಹಗರಣ ಸಂಪೂರ್ಣವಾಗಿ ತನಿಖೆಯಾಗಬೇಕು. ಹಗರಣದಲ್ಲಿ ಕೇಂದ್ರ ಸಚಿವರ ಪತ್ನಿಯ ಹೆಸರು ತಳುಕು ಹಾಕಿಕೊಂಡಿರುವುದು ಗಂಭೀರ ವಿಚಾರವಾಗಿದೆ. ಹೀಗಾಗಿ ಪ್ರಕರಣದ ಬಗ್ಗೆ ವಸ್ತುನಿಷ್ಟ ತನಿಖೆಯಾಗಬೇಕು. ಪ್ರಕರಣದ ಬಗ್ಗೆ ವಿತ್ತ ಸಚಿವ ಚಿದಂಬರಂ ಅವರು ತಮ್ಮ ನಿಲುವನ್ನು ಸ್ಫಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಈ ನಡುವೆ ಪ್ರತಿಪಕ್ಷಗಳ ಆರೋಪವನ್ನು ತಿರಸ್ಕರಿಸಿರುವ ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ಅವರು, ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ. ತಾವು ಯಾರಿಗೂ ಅಥವಾ ಯಾವ ಸಂಸ್ಥೆಗೂ ತಮ್ಮ ಕುಟುಂಬದ ಒಡೆತನವಿರುವ ವಾಹಿನಿಯ ಮೇಲೆ ಬಂಡವಾಳ ಹೂಡುವಂತೆ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

