ಸರಬ್ಜಿತ್ ಕುಟುಂಬದ ನಾಲ್ಕು ಮಂದಿಗೆ ಪಾಕ್ ವೀಸಾ

ನವದೆಹಲಿ: ಪಾಕಿಸ್ತಾನ ಜೈಲಿನಲ್ಲಿ ಹಲ್ಲೆಗೊಳಗಾಗಿರುವ ಸರಬ್ಜಿತ್ ಸಿಂಗ್ ಅವರನ್ನು ನೋಡ ಬಯಸುತ್ತಿದ್ದ ಅವರ ಕುಟುಂಬ ಸದಸ್ಯರಿಗೆ ಪಾಕ್ ರಾಯಭಾರ ಕಚೇರಿ ವೀಸಾ ನೀಡಿದೆ.
ಸರಬ್ಜಿತ್ ಕುಟುಂಬ ಸದಸ್ಯರ ಪೈಕಿ ನಾಲ್ಕು ಮಂದಿಗೆ, ಅವರ ಪತ್ನಿ ಸುಖ್ಪ್ರೀತ್ ಖೌರ್, ಸಹೋದರಿ ತಲಬೀರ್ ಕೌರ್ ಮತ್ತು ಸರಬ್ಜಿತ್ ಪುತ್ರಿಯರಾದ ಪೂನಂ, ಸ್ವಪನ್ದೀಪ್ ಕೌರ್ ಅವರಿಗೆ ಪಾಕಿಸ್ತಾನ ಸರ್ಕಾರ ವೀಸಾ ನೀಡಿದೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸರಬ್ಜಿತ್ ಸಹೋದರಿ ತಲಬೀರ್ ಕೌರ್ ಅವರು, 'ಪಾಕಿಸ್ತಾನ ಸರ್ಕಾರ ನಮಗೆ ವೀಸಾ ನೀಡಿದೆ. ಶೀಘ್ರದಲ್ಲಿಯೇ ನಾವು ಪಾಕಿಸ್ತಾನಕ್ಕೆ ತೆರಳುತ್ತೇವೆ. ಲಾಹೋರ್ನ ಜಿನ್ನಾ ಆಸ್ಪತ್ರೆಯಲ್ಲಿ ಕುಟುಂಬದ ಒಬ್ಬರಿಗೆ ಮಾತ್ರ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ' ಎಂದು ಹೇಳಿದರು. ಆದರೆ ಪ್ರಯಾಣದ ದಿನಾಂಕ ಹೇಳಲು ಮಾತ್ರ ಅವರು ಹಿಂದೇಟು ಹಾಕಿದರು.
ನಿನ್ನೆ ಸರಬ್ಜಿತ್ ಸಿಂಗ್ ಅವರ ಮೇಲೆ ಹಲ್ಲೆಯಾದ ವಿಚಾರ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾಗಿದ್ದ ಕುಟುಂಬದ ಸದಸ್ಯರು, ಸರಬ್ಜಿತ್ರನ್ನು ನೋಡಲು ಅವಕಾಶ ಮಾಡಿಕೊಡುವಂತೆ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ವಿದೇಶಾಂಗ ರಾಜ್ಯ ಸಚಿವೆ ಪ್ರಣೀತ್ ಕೌರ್ ಅವರಿಗೆ ಮನವಿ ಮಾಡಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


