ಈಗಿನ ಸುದ್ದಿ

ಗಡಿ ಅತಿಕ್ರಮಣ: ಪಿಎಂಗೆ ಮುಲಾಯಂ ತರಾಟೆ

ಗಡಿ ಅತಿಕ್ರಮಣ: ಪಿಎಂಗೆ ಮುಲಾಯಂ ತರಾಟೆ
Published On :

ನವದೆಹಲಿ: ಚೀನಾ ಯೋಧರ ಗಡಿ ಅತಿಕ್ರಮಣ ಕುರಿತಂತೆ ಸೋಮವಾರ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಲೋಕಸಭೆಯಲ್ಲಿ ಗಡಿ ಅತಿಕ್ರಮಣ ವಿಚಾರವನ್ನು ಪ್ರಸ್ತಾಪಿಸಿದ ಮುಲಾಯಂ ಸಿಂಗ್ ಯಾದವ್ ಅವರು, ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಗಂಭೀರ ವಿಚಾರದ ಬಗ್ಗೆ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.

'ನೆರೆಯ ಚೀನಾ ದೇಶ ನಮ್ಮ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ. ಆದರೆ ನಾವು ಈ ಬಗ್ಗೆ ಭೂಮಿಯನ್ನು ವಾಪಸ್ ಪಡೆಯಲು ಅವರಲ್ಲಿ ಬಿಕ್ಷೆ ಬೇಡುತ್ತಿದ್ದೇವೆ. ಗಡಿ ಅತಿಕ್ರಮಣ ವಿಚಾರವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಭಾಸವಾಗುತ್ತಿದೆ. ಈ ಬಗ್ಗೆ ಪ್ರಧಾನಿ ಸಿಂಗ್ ಅವರು ಏಕೆ ಚೀನಾವನ್ನು ಪ್ರಶ್ನಿಸುತ್ತಿಲ್ಲ. ಅಲ್ಲದೆ ನಮ್ಮ ನೆಲವನ್ನು ಕಾಪಾಡಿಕೊಳ್ಳಲು ಅವರು ಯೋಧರಿಗೂ ಅವಕಾಶ ಮಾಡಿಕೊಡುತ್ತಿಲ್ಲ ಏಕೆ' ಎಂದು ಮುಲಾಯಂ ಸಿಂಗ್ ಪ್ರಶ್ನಿಸಿದರು.

ಅಲ್ಲದೆ ಚೀನಾದ ಅತಿಕ್ರಮಣವನ್ನು ಸಹಿಸಿಕೊಂಡಿರುವ ಸರ್ಕಾರದ ನಿರ್ಧಾರದಿಂದಾಗಿ 1962ರಲ್ಲಿ ಭಾರತಕ್ಕಾದ ಸೋಲಿಗಿಂತ ಇದು ದೊಡ್ಡ ಅವಮಾನಕರವಾಗಿದೆ. ಭಾರತಕ್ಕೆ ಪಾಕಿಸ್ತಾನಕ್ಕಿಂತ ಚೀನಾವೇ ದೊಡ್ಡ ಶತ್ರು. ಗಡಿಯನ್ನು ಮತ್ತೆ ಭಾರತ ಮರಳಿ ಪಡೆಯಲು ಸರ್ಕಾರ ಕೈಗೊಳ್ಳುವ ಎಲ್ಲ ಕ್ರಮಗಳಿಗೆ ನಾವು ಬೆಂಬಲವಾಗಿರುತ್ತೇವೆ. ಆದರೆ ಇದು ಶೀಘ್ರವೇ ಆಗಬೇಕು. ಎಂದು ಅವರು ಹೇಳಿದರು.

ಚೀನಾ ಯೋಧರ ಗಡಿ ಅತಿಕ್ರಮಣ ವಿಚಾರ ಲೋಕಸಭೆಯಲ್ಲಿಯೂ ಬಾರಿ ಗದ್ದಲ ಮಾಡುತ್ತಿದೆ. ಇತ್ತ ಈ ವಿಚಾರದ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳಲಾಗದ ಕೇಂದ್ರ ಸರ್ಕಾರ ಪೇಚಿಗೆ ಸಿಲುಕಿ ಒದ್ದಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.