ಈಗಿನ ಸುದ್ದಿ

ಮೋದಿಗೆ 'ವೀಸಾ ನಿರಾಕರಣೆ' ಮುಂದುವರಿಕೆ: ಅಮೆರಿಕ

ಮೋದಿಗೆ 'ವೀಸಾ ನಿರಾಕರಣೆ' ಮುಂದುವರಿಕೆ: ಅಮೆರಿಕ
Published On :

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಮೇಲೆ ಹೇರಿರುವ ವೀಸಾ ನಿರಾಕರಣೆಯನ್ನು ಮತ್ತಷ್ಟು ಕಾಲ ಮುಂದುವರೆಸಲಾಗುತ್ತದೆ.

2002ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ನರೇಂದ್ರಮೋದಿ ಅವರ ಹಸ್ತಕ್ಷೇಪದ ಕುರಿತು ಮಾಹಿತಿ ಲಭ್ಯವಾಗಿದ್ದು, ಇದೇ ಕಾರಣಕ್ಕೆ ಅವರಿಗೆ ಅಮೆರಿಕ ವೀಸಾವನ್ನು ನಿರಾಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ(ಯುಎಸ್‌ಸಿಐಆರ್‌ಎಫ್)ದ ಅಧ್ಯಕ್ಷೆ ಕತ್ರಿನಾ ಲಾಂಟೋಸ್ ಸ್ವೆಟ್ ಅವರು, 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋದ್ರಾ ಕೋಮುಗಲಭೆಯಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಕೈ ವಾಡವಿರುವ ಕುರಿತು ಮಹತ್ವದ ಪುರಾವೆಗಳು ದೊರೆತಿವೆ. ಹೀಗಾಗಿ ನರೇಂದ್ರಮೋದಿ ಅವರ ಮೇಲೆ ಹೇರಿರುವ ಅಮೆರಿಕ ವೀಸಾ ನಿರಾಕರಣೆಯನ್ನು ಮುಂದುವರೆಸಲಾಗಿದೆ ಎಂದು ಅವರು ಹೇಳಿದರು.

ವಾಷಿಂಗ್‌ಟನ್‌ನಲ್ಲಿ ನಡೆದ ಯುಎಸ್‌ಸಿಐಆರ್‌ಎಫ್ ವಾರ್ಷಿಕ ವರದಿ ಪ್ರಕಟಸಿದ ಅವರು, ವಿಶೇಷ ಕಾಳಜಿಯುಕ್ತ ದೇಶಗಳ ಪಟ್ಟಿಗೆ 8 ದೇಶಗಳನ್ನು ಸೇರಿಸಲು ಅಮೆರಿಕದ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದಾರೆ. ಆ ಪಟ್ಟಿಯಲ್ಲಿ ಅಮೆರಿಕ ಶುತ್ರ ರಾಷ್ಟ್ರವೆಂದೇ ಬಿಂಬಿತವಾಗಿರುವ ಉತ್ತರ ಕೊರಿಯಾ, ಚೀನಾ, ಸುಡಾನ್, ಬರ್ಮಾ, ಏರಿಟ್ರಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಉಜ್ಬೇಕಿಸ್ತಾನ ದೇಶಗಳನ್ನು ಸೇರಿಸಲು ಕತ್ರಿನಾ ಲಾಂಟೋಸ್ ಸ್ವೆಟ್ ಅವರು ಶಿಫಾರಸು ಮಾಡಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ಅಮೆರಿಕದ ವೀಸಾ ನಿರಾಕರಣೆ, ಪ್ರಧಾನಿ ಪಟ್ಟದ ಮೇಲೆ ಕಣ್ಣು ನೆಟ್ಟಿರುವ ಮೋದಿ ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.