ಈಗಿನ ಸುದ್ದಿ

ಸರಬ್ಜಿತ್ ಆರೋಗ್ಯ ಮತ್ತಷ್ಟು ಗಂಭೀರ; ಭಾರತಕ್ಕೆ ಕುಟುಂಬ ವಾಪಸ್

ಸರಬ್ಜಿತ್ ಆರೋಗ್ಯ ಮತ್ತಷ್ಟು ಗಂಭೀರ; ಭಾರತಕ್ಕೆ ಕುಟುಂಬ ವಾಪಸ್
Published On :

ನವದೆಹಲಿ: ಪಾಕಿಸ್ತಾನದ ಜೈಲಿನಲ್ಲಿ ಹಲ್ಲೆಗೊಳಗಾಗಿರುವ ಭಾರತೀಯ ಖೈದಿ ಸರಬ್ಜಿತ್ ಸಿಂಗ್ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಹೊರ ಬರಲಾಗದ ಕೋಮಾಗೆ ಸರಬ್ಜಿತ್ ಜಾರಿದ್ದಾರೆ.

ನಿನ್ನೆ ಸರಬ್ಜಿತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಜಿನ್ನಾ ಆಸ್ಪತ್ರೆಯ ವೈದ್ಯರು, ಸರಬ್ಜಿತ್ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದ್ದರು. ಆದರೆ ಇಂದು ನಡೆದ ಪರೀಕ್ಷೆಯಲ್ಲಿ ಸರಬ್ಜಿತ್ ಆರೋಗ್ಯ ಮತ್ತಷ್ಟು ಗಂಭೀರವಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಸರಬ್ಜಿತ್ ಅವರು ಹೊರಬರಲಾಗದ ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಜಿನ್ನಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸರಬ್ಜಿತ್ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವ ಮಾಹಿತಿಯನ್ನು ಪಾಕ್ ಅಧಿಕಾರಿಗಳಿಗೆ ಸೂಚಿಸಲಾಗಿದ್ದರೂ, ಈ ಬಗ್ಗೆ ಅವರು ಯಾವುದೇ ತೀರ್ಮಾನ ಕೈಗೊಳ್ಳುತ್ತಿಲ್ಲ. ಅಂತೆಯೇ ಜಿನ್ನಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸರಬ್ಜಿತ್ ಆರೋಗ್ಯ ಗಂಭೀರವಾಗಿರುವ ಕುರಿತು ನಿನ್ನೆ ಅವರ ಕುಟುಂಬ ಸದಸ್ಯರಿಗೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದರು. ಹೀಗಾಗಿಯೇ ಅವರ ಪತ್ನಿ ಪುತ್ರಿಯರು ಸೇರಿದಂತೆ ಸರಬ್ಜಿತ್ ಅವರ ಸಹೋದರಿ ಕೂಡ ಭಾರತಕ್ಕೆ ವಾಪಸಾಗಿದ್ದಾರೆ. ಸರಬ್ಜಿತ್‌ರನ್ನು ಭಾರತಕ್ಕೆ ಕರೆಸಿಕೊಂಡು ಚಿಕಿತ್ಸೆ ನೀಡುವಂತೆ ದಲಬೀರ್ ಖೌರ್ ಅವರು, ಸೋನಿಯಾ ಗಾಂಧಿ ಅವರನ್ನು ಕೋರಿದ್ದಾರೆ. ಇತ್ತ ಸರಬ್ಜಿತ್ ಅವರನ್ನು ಭಾರತಕ್ಕೆ ಕರೆತರುವಂತೆ ಕೋರಿ ನವದೆಹಲಿಯಲ್ಲಿ ನಡೆಯುತ್ತಿರು ಪ್ರತಿಭಟನೆ ಇಂದೂ ಕೂಡ ಮುಂದುವರೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.