ಅಖಂಡ ಆಂಧ್ರಕ್ಕಾಗಿ ಮುಂದುವರಿದ ರಾಜಿನಾಮೆ ಪರ್ವ

ನವದೆಹಲಿ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯನ್ನು ವಿರೋಧಿಸಿ ಸಿಡಿದೆದ್ದಿರುವ ಸೀಮಾಂಧ್ರ ನಾಯಕರು, ಅಖಂಡ ಆಂಧ್ರಪ್ರದೇಶಕ್ಕಾಗಿ ಇಂದು ಮತ್ತೆ ಇಬ್ಬರು ಕಾಂಗ್ರೆಸ್ ಸಚಿವರು ಹಾಗೂ ಏಳು ಸಂಸದರು ರಾಜಿನಾಮೆ ನೀಡಿದ್ದಾರೆ. ನಿನ್ನೆಯಷ್ಟೇ ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ ಸಂಪುಟದ ನಾಲ್ವರು ಸಚಿವರು ಹಾಗೂ 14 ಶಾಸಕರು ರಾಜಿನಾಮೆ ನೀಡಿದ್ದರು.
ಇಂದು ಆಂಧ್ರ ಸಚಿವರಾದ ವಿಶ್ವರೂಪ್ ಹಾಗೂ ಮಹಿಂದರ್ ರೆಡ್ಡಿ ಅವರು ಸಿಎಂ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ. ಇನ್ನು ಸೀಮಾಂಧ್ರದ ಕಾಂಗ್ರೆಸ್ ಸಂಸದರು ಸಹ ಆಂಧ್ರಪ್ರದೇಶ ವಿಭಜನೆಯನ್ನು ವಿರೋಧಿಸಿದ್ದು, ಅಖಂಡ ಆಂಧ್ರಕ್ಕೆ ಒತ್ತಾಯಿಸಿ ಇಂದು ಏಳು ಕಾಂಗ್ರೆಸ್ ಸಂಸದರು ಸಂಸತ್ ಕಾರ್ಯದರ್ಶಿಗೆ ರಾಜಿನಾಮೆ ಸಲ್ಲಿಸಿದ್ದಾರೆ.
ಲೋಕಸಭಾ ಸಂಸದರಾದ ಎಲ್. ರಾಜ್‌ಗೋಪಾಲ್, ಎ. ಸಾಯಿಪ್ರತಾಪ್, ವಿ. ಅರುಣ್ ಕುಮಾರ್. ಜಿ.ವಿ. ಹರ್ಷ ಕುಮಾರ್, ಅನಂತ್ ವೆಂಕಟರಾಮ್ ರೆಡ್ಡಿ, ಎಸ್.ಪಿ.ವೈ. ರೆಡ್ಡಿ ಹಾಗೂ ರಾಜ್ಯಸಭಾ ಸಂಸದ ಕೆ.ವಿ.ಪಿ. ರಾಮಚಂದ್ರ ರಾವ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಈ ಮಧ್ಯೆ ಸೀಮಾಂಧ್ರ ಸಂಸದರ ರಾಜಿನಾಮೆಗೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕೋಟ್ಲ ಸೂರ್ಯಪ್ರಕಾಶ್ ರೆಡ್ಡಿ ಅವರು, ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನಾಳೆ ಭೇಟಿ ಮಾಡಿ, ಚರ್ಚಿಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


