ಈಗಿನ ಸುದ್ದಿ

ರಮ್ಯಾಗೆ ತಂದೆ, ಜಾತಿ ಗೊತ್ತಿಲ್ಲ: ಮಾಜಿ ಶಾಸಕ ಶ್ರೀನಿವಾಸ್

ರಮ್ಯಾಗೆ ತಂದೆ, ಜಾತಿ ಗೊತ್ತಿಲ್ಲ: ಮಾಜಿ ಶಾಸಕ ಶ್ರೀನಿವಾಸ್
Published On :

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ದಿಸಿರುವ ನಟಿ ರಮ್ಯಾಗೆ ತಂದೆ ಯಾರೆಂದು, ತನ್ನ ಜಾತಿ ಯಾವುದೆಂದು ಗೊತ್ತಿಲ್ಲ ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ್ ಹೇಳಿದ್ದಾರೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರು ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ, ಟೀಕೆಗೆ ಗುರಿಯಾಗಿದ್ದಾರೆ. 'ನಟಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಪ್ರನಾಳ ಶಿಶು ಇದ್ದಂತೆ. ಅವರಿಗೆ ರಾಜಕೀಯದಲ್ಲಿ ಎಳ್ಳಷ್ಟೂ ಅನುಭವವಿಲ್ಲ. ಜಿಲ್ಲೆಯ ಸಮಸ್ಯೆಗಳ ಕುರಿತು ಮತ್ತು ಹಳ್ಳಿಯ ನಾಡಿಮಿಡಿತ ಗೊತ್ತಿಲ್ಲ. ಇಂತಹ ಅನನುಭವಿಗೆ ಜನತೆ ಬೆಂಬಲ ನೀಡಬಾರದು ಎಂದು ಶ್ರೀನಿವಾಸ್ ಹೇಳಿದರು.

ಅಲ್ಲದೆ ರಮ್ಯಾ ಅವರ ತಂದೆಯ ಕುರಿತು ಮಾತನಾಡಿದ ಅವರು,ಇತ್ತೀಚೆಗೆ ಪತ್ರಿಕೆಗಳಲ್ಲಿ ನಾನು ನೋಡಿದ್ದೆ. ನಟಿ ರಮ್ಯಾಗೆ ಅವರ ತಂದೆ ಯಾರೆಂದೇ ಗೊತ್ತಿಲ್ಲ. ಅಲ್ಲದೆ ತನ್ನ ಜಾತಿ ಯಾವುದೆಂದು ಕೂಡ ಗೊತ್ತಿಲ್ಲ ಎಂದು ರಮ್ಯಾ ತನ್ನ ನಾಮಪತ್ರ ಅರ್ಜಿಯಲ್ಲಿ ನಮೂದಿಸಿದ್ದರು ಎಂದು ವರದಿಯಾಗಿತ್ತು. ತಂದೆ ಯಾರೆಂದು ತಿಳಿಯದ ಮತ್ತು ತನ್ನ ಜಾತಿ ಯಾವುದೆಂದು ಗೊತ್ತಿಲ್ಲದ ಇಂತಹವರಿಗೆ ಬೆಂಬಲ ನೀಡಬೇಡಿ ಎಂದು ಟೀಕಿಸಿದರು.

ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಗುರಿಯಾಗಿದ್ದು, ಶ್ರೀನಿವಾಸ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಶ್ರೀನಿವಾಸ್ ಅವರ ಹೇಳಿಕೆಯನ್ನು ಖಂಡಿಸಿದ ವಸತಿ ಸಚಿವ ಅಂಬರೀಶ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ನೀಡಬಾರದು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವಾಗ ಶ್ರೀನಿವಾಸ್ ಅವರು ಯೋಚಿಸಿ ಮಾತನಾಡಬೇಕು. ತಂದೆ ಹೆಸರು ಮತ್ತು ಜಾತಿ ಹೆಸರನ್ನು ನಮೂದಿಸದೇ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಶ್ರೀನಿವಾಸ್ ಅವರಿಗೆ ಅನುಮಾನವಿದ್ದರೆ ರಮ್ಯಾ ಅವರ ಅರ್ಜಿಯನ್ನು ನೋಡಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ತಮ್ಮ ವಿರುದ್ಧ ಜೆಡಿಎಸ್ ಮಾಜಿ ಶಾಸಕ ಶ್ರೀನಿವಾಸ್ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ನಿರಾಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.