ಈಗಿನ ಸುದ್ದಿ

ರಸಗುಲ್ಲಾ-ಬಿಯರ್ ವಿತರಿಸಿಕೊಂಡ ಇಂಡೋ-ಚೀನಿ ಯೋಧರು

ರಸಗುಲ್ಲಾ-ಬಿಯರ್ ವಿತರಿಸಿಕೊಂಡ ಇಂಡೋ-ಚೀನಿ ಯೋಧರು
Published On :

ನವದೆಹಲಿ: ಸಿಕ್ಕಿಂ ಬಳಿಯ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಭಾರತ ಮತ್ತು ಚೀನಾ ಯೋಧರು ಪರಸ್ಪರ ರಸಗುಲ್ಲಾ ಮತ್ತು ಬಿಯರ್ ಬಾಟಲ್ ಹಂಚಿಕೊಳ್ಳುವ ಮೂಲಕ ಸೌಹಾರ್ಧತೆ ಮೆರೆದಿದ್ದಾರೆ.

ಇತ್ತೀಚೆಗಷ್ಟೇ ಗಡಿ ಅತಿಕ್ರಮಣ ಮಾಡಿದ್ದ ಚೀನೀ ಯೋಧರು ಭಾರತದ ಪ್ರಭಲ ವಿರೋಧದಿಂದಾಗಿ ತಮ್ಮ ಸ್ವಸ್ಥಳಗಳಿಗೆ ಹಿಂದುರಿಗಿದ್ದರು. ಈ ಕಹಿ ಘಟನೆಗಳನ್ನು ಮರೆಸುವ ಮತ್ತು ಉಭಯ ದೇಶಗಳ ನಡುವೆ ಸೌಹಾರ್ಧತೆ ಸಾಧಿಸುವ ನಿಟ್ಟಿನಲ್ಲಿ ಭಾರತೀಯ ಸೇನೆ ಹೆಜ್ಜೆ ಇಟ್ಟಿದ್ದು, ಚೀನೀ ಯೋಧರಿಗೆ ರಸಗುಲ್ಲಾ ಸಿಹಿ ನೀಡಿ ತಮ್ಮ ವಿಶಾಲ ಮನೋಭಾವ ಮೆರೆದಿದ್ದಾರೆ.

ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಇರುವ ಟ್ಯಾಂಗ್‌ಕರ್ ಲಾ ಪಾಸ್ ಬಳಿ ಚೀನೀ ಯೋಧರ 2 ವಾಹನಗಳು ಅತಿಕ್ರಮಣ ಮಾಡಿದ್ದವು. ಆ ವಾಹನಗಳಲ್ಲಿ ಓರ್ವ ಯುವ ಲೆಫ್ಚಿನೆಂಟ್ ಸೇರಿದಂತೆ ಒಟ್ಟು 10 ಮಂದಿ ಸೈನಿಕರು ಪ್ರಯಾಣಿಸುತ್ತಿದ್ದರು. ಇದನ್ನು ಗಮನಿಸಿದ ಭಾರತೀಯ ಯೋಧರು ಅವರನ್ನು ಅಲ್ಲಿಯೇ ನಿಲ್ಲುವಂತೆ ಸೂಚನೆ ನೀಡಿದರು. ಉಭಯ ದೇಶಗಳ ಯೋಧರು ಪರಸ್ಪರ ಸ್ವಸ್ಥಳಗಳಿಗೆ ವಾಪಸ್ ತೆರಳಿ ಎನ್ನುವ ಸಂದೇಶವುಳ್ಳ ಬ್ಯಾನರ್ ಪ್ರದರ್ಶಿಸಿದವು.

ಈ ನಡುವೆ ಚೀನೀ ಯೋಧರ ಬಳಿ ತೆರಳಿದ ಭಾರತೀಯ ಸೇನೆಯ ಯೋಧರು ಅವರಿಗೆ ರಸಗುಲ್ಲಾ ನೀಡುವ ಮೂಲಕ ಸ್ನೇಹ ಮನೋಭಾವ ಪ್ರದರ್ಶನ ಮಾಡಿದರು. ಇದಕ್ಕೆ ಪ್ರತಿಯಾಗಿ ಚೀನೀ ಯೋಧರೂ ಕೂಡ ತಮ್ಮ ಬಳಿ ಇದ್ದ ಬಿಯರ್ ಬಾಟಲ್‌ಗಳನ್ನು ಭಾರತೀಯ ಯೋಧರಿಗೆ ನೀಡಿದರು. ನಂತರ ಪರಸ್ಪರ ಉಭಯ ದೇಶಗಳ ಯೋಧರು ತಮ್ಮ ತಮ್ಮ ಸ್ವಸ್ಥಾನಗಳಿಗೆ ಮರಳಿದರು.

ಸದಾಕಾಲ ಭೀತಿಯಿಂದಲೇ ಕೂಡಿರುವ ಗಡಿ ಪ್ರದೇಶಗಳಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಅನುಮಾನದಿಂದಲೇ ನೋಡುತ್ತಾರೆ. ಇಂತಹ ಸಂದರ್ಭದಲ್ಲಿ ಉಭಯ ದೇಶಗಳ ಯೋಧರು ಪರಸ್ಪರ ರಸಗುಲ್ಲಾ ಮತ್ತು ಬಿಯರ್ ಬಾಟಲಿ ವಿತರಿಸಿಕೊಳ್ಳುವ ಮೂಲಕ ಸೌಹಾರ್ಧತೆ ಮೆರೆದಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.