ಮತ್ತೆ ಕದನ ವಿರಾಮ ಉಲ್ಲಂಘನೆ: ಭಾರಿ ಗುಂಡಿನ ಕಾಳಗ

ಶ್ರೀನಗರ: ಪಾಕಿಸ್ತಾನ ಸೈನಿಕ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಉಭಯ ದೇಶಗಳ ನಡುವೆ ಭಾರಿ ಗುಂಡಿನ ಕಾಳಗ ನಡೆದಿದೆ ಎಂದು ವರದಿಯಾಗಿದೆ.
ನಿನ್ನೆ ರಾತ್ರಿ ಸುಮಾರು 10:45ರ ಸುಮಾರಿನಲ್ಲಿ ಕಾಶ್ಮೀರದ ಪೂಂಛ್ ಜಿಲ್ಲೆಯ ದುರ್ಗಾ ಸೆಕ್ಟರ್ನಲ್ಲಿ ಕರ್ತವ್ಯ ನಿರತರಾಗಿದ್ದ ಭಾರತೀಯ ಯೋಧರತ್ತ ಪಾಕಿಸ್ತಾನಿ ಪಡೆಗಳು ಭಾರಿ ಗುಂಡಿನ ದಾಳಿ ನಡೆಸಿವೆ. ಸತತ 7 ಗಂಟೆಗಳ ಕಾಲ ನಡೆದ ಈ ಗುಂಡಿನ ಕಾಳಗದಲ್ಲಿ ಪಾಕ್ ಪಡೆಗಳು ಭಾರತೀಯ ಸೈನಿಕರತ್ತ ಸುಮಾರು 7000 ಸುತ್ತು ಗುಂಡು ಹಾರಿಸಿದ್ದು, 6 ಸುತ್ತು ಶೆಲ್ ದಾಳಿ ನಡೆಸಿವೆ.
ಪಾಕ್ ಪಡೆಗಳಿಗೆ ದಿಟ್ಟ ಉತ್ತರ ನೀಡಿರುವ ಭಾರತೀಯ ಯೋಧರು ಸುಮಾರು 4595 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ ಆರ್ಪಿಜಿ ಲಾಂಚರ್ಗಳ ಮೂಲಕ 111 ರಾಕೆಟ್ಗಳನ್ನು ಮತ್ತು 18 ಶೆಲ್ಗಳನ್ನು ಪಾಕಿಸ್ತಾನ ಪಡೆಗಳತ್ತ ಉಡಾಯಿಸಿದ್ದಾರೆ. ಈ ಭಾರಿ ಕಾಳಗದಲ್ಲಿ ಯಾವುದೇ ಸಾವು-ನೋವಿನ ಕುರಿತು ವರದಿಯಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪಾಕ್ ಪಡೆಯು ನಿನ್ನೆ ದೊಡ್ಡ ಪ್ರಮಾಣದಲ್ಲಿ ಕದನ ವಿರಾಮವನ್ನು ಉಲ್ಲಂಘನೆ ಮಾಡಿದ್ದು, ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.
ಗುಂಡಿನ ಕಾಳಗ ನಡೆದಿರುವ ಕುರಿತು ಸ್ಪಷ್ಟನೆ ನೀಡಿರುವ ಭಾರತೀಯ ರಕ್ಷಣಾ ಇಲಾಖೆಯ ವಕ್ತಾರ ಎಸ್ಎನ್ ಆಚಾರ್ಯ ಅವರು, ಉಭಯ ದೇಶಗಳ ನಡುವೆ ಭಾರಿ ಗುಂಡಿನ ದಾಳಿ ನಡೆದಿದ್ದು, ಸಾವು ನೋವಿನ ಕುರಿತು ಯಾವುದೇ ವರದಿಗಳು ಬಂದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸಿದ್ದು, ನಿನ್ನೆ ದೊಡ್ಡ ಪ್ರಮಾಣದಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ತಿಳಿಸಿದರು.
ಕಳೆದ ಆಗಸ್ಟ್ 6ರಂದು ಇದೇ ಪೂಂಚ್ ಜಿಲ್ಲೆಯ ಚಕನ್ ದ ಬಾಗ್ ಮಿಲಿಟರಿ ಸೆಕ್ಟರ್ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದ್ದ ಪಾಕಿಸ್ತಾನ ವಿಶೇಷ ಕಮಾಂಡೋಗಳು ಭಾರತೀಯ ಗಡಿ ನಿಯಂತ್ರಣ ರೇಖೆಯನ್ನು ಅಕ್ರಮವಾಗಿ ಪ್ರವೇಶಿಸಿ ಭಾರತೀಯ ಐವರು ಯೋಧರನ್ನು ಕೊಂದು ಹಾಕಿದ್ದರು. ಘಟನೆಯ ಬಳಿಕ ಪಾಕ್ ಯೋಧರ ದುಷ್ಕೃತ್ಯಕ್ಕೆ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


