ಈಗಿನ ಸುದ್ದಿ

ಈಜಿಪ್ಟ್ ಸಂಘರ್ಷ: ಸಾವಿನ ಸಂಖ್ಯೆ 638ಕ್ಕೇರಿಕೆ

ಈಜಿಪ್ಟ್ ಸಂಘರ್ಷ: ಸಾವಿನ ಸಂಖ್ಯೆ 638ಕ್ಕೇರಿಕೆ
Published On :

ಕೈರೋ: ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಗಲಭೆ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ ಬರೊಬ್ಬರಿ 638ಕ್ಕೇರಿದ್ದು, ಈಜಿಪ್ಟ್ ಮಟ್ಟಿಗೆ ಕಳೆದ ಗುರುವಾರ ಕರಾಳ ದಿನವಾಗಿ ದಾಖಲಾಗಿದೆ.

ಈಜಿಪ್ಟ್ ಅಧ್ಯಕ್ಷ ಮಹಮದ್ ಮೋರ್ಸಿ ಅವರನ್ನು ಬೆಂಬಲಿಸಿ ಅವರ ಬೆಂಬಲಿಗರು ನಡೆಸುತ್ತಿದ್ದ ಪ್ರತಿಭಟನಾ ರ್ಯಾಲಿ ಎರಡು ಬಣಗಳ ಸಂಘರ್ಷಕ್ಕೆ ತಿರುಗಿದ್ದು, ಇದುವರೆವಿಗೂ ಸುಮಾರು 638 ಸಾವು ಸಂಭವಿಸಿದೆ. ಮಿಲಿಟರಿ, ಮೋರ್ಸಿ ಬೆಂಬಲಿಗರು ಮತ್ತು ಮೋರ್ಸಿ ಆಡಳಿತವನ್ನು ವಿರೋಧಿಸುತ್ತಿರುವವರ ಪಡೆಗಳ ನಡುವಿನ ಸಂಘರ್ಷ ಈಜಿಪ್ಟ್‌ನ ಅತ್ಯಂತ ದೊಡ್ಡ ಗಲಭೆಯಾಗಿ ಮಾರ್ಪಟ್ಟಿದೆ.

ಮೋರ್ಸಿ ಅವರು ಮುಸ್ಲಿಂ ಎಂದು ಅವರನ್ನು ಅಧಿಕಾರದಿಂದ ದೂರವಿಡಲಾಗುತ್ತಿದೆ ಎಂದು ಆರೋಪಿಸುತ್ತಿರುವ ಮೋರ್ಸಿ ಬೆಂಬಲಿಗರು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋರ್ಸಿ ಆಡಳಿತ ವಿರೋಧಿಗಳು ಕೂಡ ಮೋರ್ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಈ ಎರಡೂ ಬಣಗಳನ್ನು ನಿಯಂತ್ರಿಸಲು ಈಜಿಪ್ಟ್ ಮಿಲಿಟರಿ ಹರಸಾಹಸ ಪಡುತ್ತಿದೆ. ರಾಜಧಾನಿ ಕೈರೋದ ಪ್ರಮುಖ ರಸ್ತೆಗಳಲ್ಲಿ ಘರ್ಷಣೆಯಲ್ಲಿ ಸಾವನ್ನಪ್ಪಿದವರ ಮೃತ ದೇಹಗಳು ಅನಾಥವಾಗಿ ಬಿದ್ದಿದ್ದು, ಮುಖಗಳು ಗುರುತು ಸಿಗದಷ್ಟರ ಮಟ್ಟಿಗೆ ರಕ್ತಸಿಕ್ತವಾಗಿವೆ.

ಈ ನಡುವೆ ಈಜಿಪ್ಟ್ ಗಲಭೆಯನ್ನು ಕಠಿಣ ಶಬ್ಧಗಳಿಂದ ಟೀಕಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ಮಿಲಿಟರಿ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ಯುಎಸ್-ಈಜಿಪ್ಟ್ ಮಿಲಿಟರಿ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಮೆರಿಕದ ಯೋಧರನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.