ದಾವೂದ್ನನ್ನು ಭೇಟಿ ಮಾಡಿದ್ದೆ: ತುಂಡಾ

ನವದೆಹಲಿ: ನಾನು ಸಾಕಷ್ಟು ಬಾರಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದೆ ಎಂದು ದೆಹಲಿ ವಿಶೇಷ ಪೊಲೀಸರಿಂದ ಬಂಧನಕ್ಕೊಳಗಾರಿರುವ ಉಗ್ರ ಸೈಯ್ಯದ್ ಅಬ್ದುಲ್ ಕರೀಂ ತುಂಡಾ ಹೇಳಿಕೆ ನೀಡಿದ್ದಾನೆ.
ಭಾರತ ಮೊಸ್ಟ್ ವಾಂಟೆಡ್ ಉಗ್ರ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯಲ್ಲಿ ಸಾಕಷ್ಟು ಬಾರಿ ಭೇಟಿಯಾಗಿದ್ದೆ ಎಂದು ಬಂಧಿತ ಉಗ್ರ ಸೈಯ್ಯದ್ ಅಬ್ದುಲ್ ಕರೀಂ ತುಂಡಾ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ನಿನ್ನೆ ಭಾರತ ಮತ್ತು ನೇಪಾಳ ಗಡಿಯಲ್ಲಿ ದೆಹಲಿ ವಿಶೇಷ ಪೊಲೀಸರಿಗೆ ಸೆರೆ ಸಿಕ್ಕಿದ್ದ ಉಗ್ರ ತುಂಡಾನನ್ನು ನ್ಯಾಯಾಲಯ 3 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು.
ಬಂಧಿತ ಉಗ್ರ ತುಂಡಾನನ್ನು ವಿಚಾರಣೆ ನಡೆಸುತ್ತಿರುವ ದೆಹಲಿ ವಿಶೇಷ ಪೊಲೀಸರು ಆತನಿಂದ ಸಾಕಷ್ಟು ಸ್ಫೋಟಕ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ತುಂಡಾ ನಡುವಿನ ನಂಟು ಸೇರಿದಂತೆ, 26/11 ಮುಂಬೈ ದಾಳಿ ರೂವಾರಿ ಝಾಕಿ ಉರ್ ರೆಹಮಾನ್ ನಡುವಿನ ಸಂಬಂಧವನ್ನು ಆತ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಮೂಲತಃ ಕಡು ಬಡತನದಲ್ಲಿ ಹುಟ್ಟಿದ ತುಂಡಾ ಐಶಾರಾಮಿ ಜೀವನ ನಡೆಸಲು ಉಗ್ರರೊಂದಿಗೆ ಕೈ ಜೋಡಿಸಿದ್ದಾಗೆ ಹೇಳಿಕೆ ನೀಡಿದ್ದಾನೆ.
ಭಾರತದ ಯುವಕರನ್ನು ಭಯೋತ್ಪಾದನೆಯ ತರಭೇತಿಗಾಗಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ವಿಷಯವನ್ನು ಕೂಡ ತುಂಡಾ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ಲಷ್ಕರ್ ಸಂಘಟನೆಯ 'ಬ್ಲೀಡ್ ಇಂಡಿಯಾ'(ಭಾರತದಲ್ಲಿ ದುಷ್ಕೃತ್ಯ ನಡೆಸು) ಎಂಬ ಕಾರ್ಯಕ್ರಮದ ಬಗೆಗೆನ ಚರ್ಚೆಯಲ್ಲಿ ತನಗೂ ಮತ್ತು ಝಾಕಿ ಉರ್ ರೆಹ್ಮಾನ್ ನಡುವೆ ಉಂಟಾದ ಮನಸ್ತಾಪದ ಕುರಿತು ಕೂಡ ಆತ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ ತುಂಡಾ, ಎಲ್ಇಟಿ ಸಂಘಟನೆಯಲ್ಲಿ ಬಾಂಬ್ಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣಿತನಾಗಿದ್ದ. ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ತುಂಡಾ, ಪೊಲೀಸರಿಂದ ತಪ್ಪಿಸಿಕೊಳ್ಳಲು ಆಗ್ಗಿಂದಾಗ್ಗೆ ದೇಶದಿಂದ ದೇಶಕ್ಕೆ ಪಲಾಯನ ಮಾಡುತ್ತಿದ್ದನು. ತುಂಡಾ ಹೀಗೆ ಸುಮಾರು 19 ದೇಶಗಳಿಗೆ ಪಲಾಯನ ಮಾಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲ್ಲದೆ 2001ರ ಸಂಸತ್ ಮೇಲಿನ ದಾಳಿ, 1996-98ರಲ್ಲಿ ಇಂಡೋ ನೇಪಾಳ ಗಡಿಯಲ್ಲಿ ನಡೆದ ಸರಣಿ ಸ್ಫೋಟ, 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ರೂವಾರಿ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಮಹಮದ್ ಸೈಯ್ಯದ್ನೊಂದಿಗೂ ಈತನಿಗೆ ನಂಟಿತ್ತು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


