ಸಿಂಧೂ ರಕ್ಷಕ್ ದುರಂತ: 6ನೇ ಮೃತ ದೇಹ ಪತ್ತೆ

ಮುಂಬೈ: ಇತ್ತೀಚೆಗೆ ದುರಂತಕ್ಕೀಡಾದ ಸಿಂಧೂ ರಕ್ಷಕ್ ಸಬ್ ಮರೀನ್ ನೌಕೆಯಲ್ಲಿ ನಡೆಯುತ್ತಿರುವ ಶೋಧಕಾರ್ಯದ ವೇಳೆ ಭಾನುವಾರ 6ನೇ ಯೋಧನ ಮೃತ ದೇಹ ಪತ್ತೆಯಾಗಿದೆ.
ಕಳೆದು ಬುಧವಾರ ಮುಂಬೈನ ಹೊರವಲಯದಲ್ಲಿ ನಡೆದ ಸಿಂಧೂ ರಕ್ಷಕ್ ಸಬ್ ಮರೀನ್ ನೌಕಾದುರಂತದಲ್ಲಿ ಕಣ್ಮರೆಯಾಗಿದ್ದ 18 ಯೋಧರ ಪೈಕಿ ಈವರೆಗೂ 6 ಮಂದಿ ಯೋಧರ ಶವಗಳು ಪತ್ತೆಯಾಗಿವೆ. ನೌಕೆಯಲ್ಲಿ ಶೋಧಕಾರ್ಯ ನಡೆಸುತ್ತಿರುವ ಭಾರತೀಯ ನೌಕಾದಳದ ಸಿಬ್ಬಂದಿಗೆ ರಷ್ಯಾ ಸೇನೆಯ ನುರಿತ ನೌಕಾದಳದ ತಜ್ಞರು ಸಹಾಯ ಮಾಡುತ್ತಿದ್ದು, ಭಾನುವಾರ ನಡೆದ ಶೋಧ ಕಾರ್ಯದ ವೇಳೆ 6ನೇ ಮೃತದೇಹ ಪತ್ತೆಯಾಗಿದೆ.
ಸಿಂಧೂರಕ್ಷಕ್ ನ ಎರಡನೇ ದ್ವಾರದ ಬಾಗಿಲನ್ನು ತೆರೆಯುವಲ್ಲಿ ನಿನ್ನೆ ನೌಕಾದಳದ ಸಿಬ್ಬಂದಿ ಯಶಸ್ವಿಯಾಗಿದ್ದರು. ಈ ನಡುವೆ ಇಂದು ನೌಕೆಯಲ್ಲಿ 6ನೇ ಶವಪತ್ತೆಯಾಗಿದ್ದು, ಶಸ್ತ್ರಾಸ್ತ್ರ ಸ್ಫೋಟದಿಂದಾಗಿ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗುತ್ತಿದೆ. ಅಲ್ಲದೆ ಮೃತಪಟ್ಟ ಯೋಧನ ಮೂಲವನ್ನು ನೌಕಾದಳ ರಹಸ್ಯವಾಗಿಟ್ಟಿದ್ದು, ಈತ ಭಾರತೀಯ ನೌಕಾದಳದಲ್ಲಿ ಶಸ್ತ್ರಾಸ್ತ್ರ ತಜ್ಞನಾಗಿದ್ದನು ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ಸಬ್ಮರೀನ್ಗಳಿಗೆ ರಾತ್ರಿ ವೇಳೆಯಲ್ಲಿ ಶಸ್ತ್ರಾಸ್ತ್ರಗಳನ್ನು ಲೋಡ್ ಮಾಡುತ್ತಾರೆ. ಮೂಲಗಳ ಪ್ರಕಾರ ಸಿಂಧೂರಕ್ಷಕ್ ಸಬ್ ಮರೀನ್ ಗೆ ಕೂಡ ಕಳೆದ ವಾರ ಶಸ್ತ್ರಾಸ್ತ್ರಗಳನ್ನು ತುಂಬಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಹೀಗಾಗಿ ಶಸ್ತ್ರಾಸ್ತ್ರಗಳನ್ನು ತುಂಬುವಾಗ ನೌಕೆಯಲ್ಲಿ ಉಂಟಾದ ಒತ್ತಡದಿಂದಾಗಿ ನೌಕೆ ಸ್ಫೋಟಗೊಂಡಿರಬಹುದು ಎಂದು ತಜ್ಞರು ಶಂಕೆವ್ಯಕ್ತಪಡಿಸುತ್ತಿದ್ದಾರೆ.
ಇದೀಗ ನೌಕಾ ಸ್ಫೋಟದ ಕುರಿತು ತನಿಖೆ ನಡೆಸುತ್ತಿರುವ ಭಾರತೀಯ ನೌಕಾದಳಕ್ಕೆ ರಷ್ಯಾ ಸೇನೆ ಸಹಾಯ ಮಾಡಲಿದೆ ಎಂದು ರಷ್ಯಾ ಉಪಾಧ್ಯಕ್ಷ ಡಿಮಿಟ್ರಿ ರೊಗೊಜಿನ್ ಅವರು ಆಶ್ವಾಸನೆ ನೀಡಿದ್ದಾರೆ. ಒಟ್ಟಾರೆ ದುರಂತಕ್ಕೀಡಾದ ಸಿಂಧೂ ರಕ್ಷಕ್ ನೌಕೆಯ ಶೋಧ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


