ವಿಹಿಂಪ ಅಯೋಧ್ಯೆ ಯಾತ್ರೆ: 80ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ
ಅಯೋಧ್ಯಾ/ ಫೈಜಾಬಾದ್: ವಿಶ್ವ ಹಿಂದೂ ಪರಿಷತ್ ಭಾನುವಾರ ಅಯೋಧ್ಯೆಯಿಂದ ಯಾತ್ರೆ ಕೈಗೊಳ್ಳಲು ಪೂರ್ವಭಾವಿ ಯೋಜನೆ ನಡೆಸುತ್ತಿದ್ದಂತೆ ಪೊಲೀಸರು 50 ಮಂದಿ ವಿಹಿಂಪ ಕಾರ್ಯಕರ್ತರನ್ನು ಹಾಗು ೪೬ ಸಾಧುಗಳನ್ನು ಬಂಧಿಸಿದ್ದಾರೆ. ಮಾತ್ರವಲ್ಲದೆ ಸುಮಾರು 300 ರಷ್ಟು ವಿಹಿಂಪ ಕಾರ್ಯಕರ್ತರಿಗೆ ಅರೆಸ್ಟ್ ವಾರೆಂಟ್ ಕಳುಹಿಸಿದ್ದಾರೆ.
ಫೈಜಾಬಾದ್ನಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು ,ಫೈಜಾಬಾದ್ ಡಿಎಂ ಮತ್ತು ಎಸ್ಎಸ್ಪಿ ವಿಹಿಂಪ ಸ್ಥಳೀಯ ಕಾರ್ಯಾಲಯಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಕರಸೇವಕ್ ಪುರಂ, ಮನಿ ರಾಮ್ ಚಾವ್ನಿ, ವಿಹಿಂಪ ನಾಯಕರ ದೇವಾಲಯ, ರಾಮ ಜನಂ ಭೂಮಿ ಟ್ರಸ್ಟ್ ಸೇರಿದಂತೆ ಹಲವಾರು ಕಡೆ ಪೊಲೀಸರು ದಾಳಿ ನಡೆಸಿ, ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಅದೇ ವೇಳೆ ಅಜ್ಞಾತರಾಗಿರುವ ಹಲವಾರು ವಿಹಿಂಪ ನಾಯಕ, ಕಾರ್ಯಕರ್ತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪ್ರಸ್ತುತ ಯಾತ್ರೆ ಕೋಮಗಲಭೆಗೆ ಪ್ರೇರಣೆಯಾಗುತ್ತೆ ಎಂಬ ದೃಷ್ಟಿಯಲ್ಲಿ ಉತ್ತರಪ್ರದೇಶ ಸರ್ಕಾರವು ಈ ಯಾತ್ರೆಗೆ ನಿಷೇಧ ಹೇರಿದೆ.
ಈಗಾಗಲೇ ವಿಹಿಂಪದ 70 ಪ್ರಮುಖ ಕಾರ್ಯಕರ್ತರಿಗೆ ಜಿಲ್ಲಾಡಳಿತಾಧಿಕಾರಿ ನೊಟೀಸ್ ಕಳುಹಿಸಿದ್ದು, 300 ನಾಯಕರ ವಿರುದ್ಧ ವಾರೆಂಟ್ ಜಾರಿ ಮಾಡಲಾಗಿದೆ.
84- ಕೋಸಿ ಪರಿಕರ್ಮ ಯಾತ್ರೆಗೆ ನಿಷೇಧ ಹೇರಲಾಗಿದ್ದರೂ, ವಿಹಿಂಪ ಪ್ರಸ್ತುತ ಯಾತ್ರೆ ನಡೆಸಲು ತಯಾರಾಗಿದೆ. ಆದ್ದರಿಂದಲೇ ನಾವು ವಿಹಿಂಪ ಕಾರ್ಯಕರ್ತರನ್ನು ಬಂಧಿಸುತ್ತಿದ್ದೇವೆ ಎಂದು ಫೈಜಾಬಾದ್ ಜಿಲ್ಲಾ ಮೆಜಿಸ್ಟ್ರೇಟರ್ ವಿಪಿನ್ ಕುಮಾರ್ ದ್ವಿವೇದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

