ಪ್ರಧಾನಿ ಮತ್ತು ರುಪಾಯಿ ಎರಡೂ ಮ್ಯೂಟ್ ಆಗಿದೆ: ಮೋದಿ
ರಾಜ್ಕೋಟ್: ರುಪಾಯಿ ಮೌಲ್ಯ ಕುಸಿಯುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಪ್ರಧಾನಿ ಮತ್ತು ರುಪಾಯಿ ಎರಡೂ ಮ್ಯೂಟ್ ಆಗಿದೆ ಎಂದು ಹೇಳಿದ್ದಾರೆ.
ಒಂದು ಕಾಲದಲ್ಲಿ ಭಾರತದ ರುಪಾಯಿ ಹೆಚ್ಚು ಸದ್ದು ಮಾಡುತ್ತಿತ್ತು. ಆದರೆ ಇಂದು ಅದರ ಸದ್ದಡಗಿದೆ. ಅದೇ ರೀತಿ ನಮ್ಮ ಪ್ರಧಾನಿಯವರ ಮಾತು ಕೂಡಾ ಕೇಳಿಬರುತ್ತಿಲ್ಲ. ಪ್ರಧಾನಿ ಮತ್ತು ರುಪಾಯಿ ಎರಡೂ ಮ್ಯೂಟ್ ಆಗಿದೆ.ರಾಜ್ಕೋಟದಲ್ಲಿ ಮೋರ್ಬಿ ಎಂಬ ಜಿಲ್ಲೆಯನ್ನು ರಚಿಸುವುದರ ಬಗ್ಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಈ ರೀತಿ ಹೇಳಿದ್ದಾರೆ.
ಅಗಸ್ಟ್ 15ರಂದು ಮಾಡಿದ ಭಾಷಣದಲ್ಲೂ ಮೋದಿ ಪ್ರಧಾನಿ ಸಿಂಗ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು. ರುಪಾಯಿ ಮೌಲ್ಯ ಕುಸಿಯುತ್ತಿರುವುದರ ಬಗ್ಗೆಯೂ, ಪಾಕಿಸ್ತಾನ ಮತ್ತು ಚೀನಾದ ಬಗ್ಗೆ ಪ್ರಧಾನಿ ನಿಲುವಿನ ಬಗ್ಗೆಯೂ ಮೋದಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

