ಆಯೋಧ್ಯ ಯಾತ್ರಾ: ವಿಎಚ್ಪಿ ನಾಯಕರ ಬಂಧನ

ಆಯೋಧ್ಯ: ಆಯೋಧ್ಯೆಯ ವಿವಾದಿತ ಸ್ಥಳದಲ್ಲಿ ಚೌರಾಸಿ(84) ಕೋಸಿ ಪರಿಕ್ರಮ ಯಾತ್ರೆ ನಡೆಸಲು ಮುಂದಾದ ವಿಶ್ವ ಹಿಂದೂ ಪರಿಷಥ್(ವಿಎಚ್ ಪಿ)ನ ನಾಯಕರಾದ ಅಶೋಕ್ ಸಿಂಘಲ್ ಮತ್ತು ಪ್ರವೀಣ್ ತಗೋಡಿಯಾ ಅವರನ್ನು ಉತ್ತರ ಪ್ರದೇಶದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಭಾನುವಾರದಿಂದ ಆಯೋಧ್ಯೆಯಲ್ಲಿ ಯಾತ್ರೆ ನಡೆಸುವುದಾಗಿ ವಿಶ್ವಹಿಂದೂ ಪರಿಷತ್ ಪಣತೊಟ್ಟಿತ್ತು. ಆದರೆ ಯಾತ್ರೆಗೆ ಉತ್ತರ ಪ್ರದೇಶದ ಸರ್ಕಾರ ನಿರ್ಬಂಧ ಹೇರಿತ್ತು. ಯಾತ್ರೆಯನ್ನು ನಿಷೇಧಿಸಿದ ಸರ್ಕಾರ ಇಡೀ ಆಯೋಧ್ಯೆಯನ್ನು ಪೊಲೀಸರ ಭದ್ರಕೋಟೆಯಾಗಿ ಮಾರ್ಪಡಿಸಿತ್ತು.
ಸರ್ಕಾರ ನಿರ್ಬಂಧದ ನಡುವೆಯು ವಿಎಚ್ ಪಿ ನಾಯಕರು ಯಾತ್ರೆ ನಡೆಸಲು ಮುಂದಾದ ಕಾರಣ ಇಬ್ಬರು ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿನ್ನೆಯಷ್ಟೆ ವಿಎಚ್ ಪಿಯ 200 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ವಿಎಚ್ ಪಿ ಆಯೋಜಿಸಿರುವ ಯಾತ್ರೆಯಿಂದ ಕೋಮುಗಲಭೆ ಉಂಟಾಗುವ ಸಾಧ್ಯತೆಯಿದೆ ಹಾಗೂ ಯಾತ್ರೆಗೆ ಅವಕಾಶ ನೀಡುವುದು ಸುಪ್ರೀಂ ಕೋರ್ಟ್ ನ ಆದೇಶ ಉಲ್ಲಂಘಿಸಿದಂತೆ ಎಂದು ಸರ್ಕಾರ ಹೇಳಿದೆ.
ಶನಿವಾರ ಸಂತರು, ವಿಎಚ್ ಪಿ ಕಾರ್ಯಕರ್ತರು ಸೇರಿದಂತೆ 350ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಇಂದು ಬೆಳಿಗ್ಗೆ ವಿಎಚ್ ಪಿ ಯಾತ್ರೆಯನ್ನು ಉದ್ಘಾಟಿಸಿತು. ಈ ಸಂದರ್ಭದಲ್ಲಿ ಪೊಲೀಸರು ಮಾಜಿ ಬಿಜೆಪಿ ಸಂಸದ, ಶಾಸಕ ಸೇರಿದಂತೆ 500 ಮಂದಿಯನ್ನು ಬಂಧಿಸಿದ್ದಾರೆ.
ರಾಮ್ ಜನ್ಮಭೂಮಿ ನ್ಯಾಸ್ ಸಮಿತಿಯ ಅಧ್ಯಕ್ಷ ಮಹಂತ್ ನ್ರಿತ್ಯಾ ಗೋಪಾಲ್ದಾಸ್ ಅವರು ಆಯೋಧ್ಯೆಯ ಮಣಿರಂ ಚವಾಣಿ(ಅಖಡ)ದಿಂದ ಯಾತ್ರೆಯನ್ನಾ ಪ್ರಾರಂಭಿಸಿದರು. ಆದರೆ ಕ್ಷಣಾರ್ಧದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಮಾಜಿ ಬಿಜೆಪಿ ಸಂಸದ ರಾಮ್ ವಿಲಾಸ್ ವೇದಂತ್, ಶಾಸಕ ರಾಮ್ ಚಂದ್ರ ಯಾದವ್ ಅವರು ಬಂಧನಕ್ಕೊಳಗಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


