ಕೊನೆಗೂ ಸಮನ್ಸ್ ಸ್ವೀಕರಿಸಿದ ಅಸಾರಾಂ ಬಾಪು
ಇಂದೋರ್/ ಜೋಧ್ಪುರ್: ಲೈಂಗಿಕ ಕಿರುಕುಳ ಆರೋಪ ಕೇಳಿಬಂದರೂ, ಕಳೆದ ಎರಡು ದಿನಗಳಿಂದ ಈ ಆರೋಪ ಸತ್ಯಕ್ಕೆ ದೂರ ಎನ್ನುತ್ತಾ ನುಣುಚಿಕೊಳ್ಳುತ್ತಿದ್ದ ದೇವಮಾನವ ಅಸಾರಾಂ ಬಾಪು ಮಂಗಳವಾರ ಸಮನ್ಸ್ ಸ್ವೀಕರಿಸಿದ್ದಾರೆ.
ಅಸಾರಾಂ ಬಾಪುಗೆ ಸಮನ್ಸೆ ನೀಡುವುದಕ್ಕಾಗಿ ಜೋಧಪುರ್ ಪೊಲೀಸರು ಇಂದು ಬೆಳಗ್ಗಿನಿಂದ ಇಂದೋರ್ ಆಶ್ರಮದ ಬಳಿ ಕಾಯುತ್ತಾ ಕುಳಿತಿದ್ದರು. ಆವಾಗ ಬಾಪು ಅವರ ಶಿಷ್ಯರು ಬಂದು ಬಾಪು ಅವರು ಧ್ಯಾನ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಇಷ್ಟು ಮಾತ್ರವಲ್ಲದೆ ತನ್ನನ್ನು ಬಂಧಿಸಿದರೆ, ಜನರು ಸುಮ್ಮನಿರಲ್ಲ ಎಂದು ಬಾಪು ಪೊಲೀಸರಿಗೇ ಬೆದರಿಕೆಯನ್ನೊಡ್ಡಿದ್ದರು. ಲೈಂಗಿಕ ಕಿರುಕುಳ ಆರೋಪದ ಮೂಲಕ ತನ್ನ ಮೇಲೆ ಸಂಚು ಹೂಡಲಾಗಿದೆ ಎಂಬುದು ಅಸಾರಾಂ ಬಾಪು.
ಒಂದು ವೇಳೆ ಪೊಲೀಸರು ತನ್ನನ್ನು ಬಲವಂತವಾಗಿ ಬಂಧಿಸಿದರೆ, ತಾನು ಆಹಾರ, ನೀರು ತ್ಯಜಿಸುವುದಾಗಿ ಬಾಪು ಹೇಳಿದ್ದರು.
ಈ ರೀತಿಯ ಬೆಳವಣಿಗೆಯನ್ನು ಗಮನಿಸಿ, ಬಾಪು ಎಲ್ಲಿಯೂ ತಪ್ಪಿಸಿಕೊಳ್ಳದಂತೆ ವಿಮಾನ ನಿಲ್ದಾಣದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿತ್ತು.
ಜೋಧಾಪುರ ಆಶ್ರಮದಲ್ಲಿ 16ರ ಹರೆಯದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದಡಿಯಲ್ಲಿ ಬಾಪುಗೆ ಸಮನ್ಸ್ ಕಳುಹಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

