ಮುಂಬೈ ಗ್ಯಾಂಗ್ರೇಪ್: ಓರ್ವ ಆರೋಪಿ ಬಾಲಾಪರಾಧಿ
ಮುಂಬೈ: ಕಳೆದ ವಾರ ಆಂಗ್ಲಪತ್ರಿಕೆಯ ಛಾಯಾಗ್ರಾಹಕಿಯನ್ನು ಸಾಮೂಹಿಕ ಅತ್ಯಾಚಾರಗೈದ ಪ್ರಕರಣದ ಆರೋಪಿಗಳಲ್ಲಿ ಓರ್ವ ಆರೋಪಿ ಬಾಲಾಪರಾಧಿ ಎಂದು ತಿಳಿದು ಬಂದಿದೆ.
ಕಳೆದ ವಾರ ಮುಂಬೈಯ ಶಕ್ತಿ ಮಿಲ್ ಬಳಿ ಪತ್ರಿಕೆಯ ಛಾಯಾಗ್ರಾಹಕಿಯನ್ನು ಐವರು ಸಾಮೂಹಿಕ ಅತ್ಯಾಚಾರಗೈದಿದ್ದರು.
ಈ ಪ್ರಕರಣದ ಆರೋಪಿಗಳನ್ನು ಮುಂಬೈ ಪೊಲೀಸರು ಘಟನೆ ನಡೆದ 70 ಗಂಟೆಗಳೊಳಗೆ ಬಂಧಿಸಿದ್ದು, ಘಟನೆ ನಡೆದ 12 ಗಂಟೆಯೊಳಗೆ ಬಂಧಿಸಲ್ಪಟ್ಟ ಪ್ರಥಮ ಆರೋಪಿ ಈಗ ಬಾಲಾಪರಾಧಿ ಎಂದು ಸಾಬೀತಾಗಿದೆ.
ಈ ಹಿಂದೆ ಈ ಆರೋಪಿಗಳಲ್ಲಿ ಯಾರೂ ಅಪ್ರಾಪ್ತರಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದರು. ಆದರೆ ಈಗ ಆರೋಪಿಯ ಜನನ ಪ್ರಮಾಣ ಪತ್ರದ ಪ್ರಕಾರ ಪ್ರಥಮ ಆರೋಪಿ ಬಾಲಾಪರಾಧಿಯಾಗಿದ್ದಾನೆ ಎಂಬುದು ಸಾಬೀತಾಗಿದೆ.
ಆರೋಪಿಯನ್ನು ಬಂಧಿಸಿದಾಗ ಆತನ ಅಜ್ಜಿ ಜನನ ಪ್ರಮಾಣ ಪತ್ರವನ್ನು ಸಲ್ಲಿಸಿದ್ದು ಅದರಲ್ಲಿ ಜನನ ದಿನಾಂಕವನ್ನು ತಿದ್ದಿ ಸರಿಪಡಿಸಿದಂತಿತ್ತು. ಆದರೆ ಇದೀಗ ಮುನಿಸಿಪಲ್ ಕಾರ್ಪೋರೇಷನ್ನಿಂದ ಪಡೆದ ಜನನ ಪ್ರಮಾಣ ಪತ್ರದಲ್ಲಿ ಈ ಆರೋಪಿ 1997ರಲ್ಲಿ ಜನಿಸಿದವನು ಎಂದಿದೆ. ಆರೋಪಿಗೆ 16 ವರ್ಷದವನಾಗಿರುವುದರಿಂದ ಒಂದು ವೇಳೆ ಆತ ತಪ್ಪಿತಸ್ಥ ಎಂದು ಸಾಬೀತಾದರೆ ಗರಿಷ್ಠ 3 ವರ್ಷಗಳ ಕಾಲ ಆತ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

