ಈಗಿನ ಸುದ್ದಿ

ಕಲ್ಲಿದ್ದಲು ಪ್ರಕರಣ: ನಾಪತ್ತೆಯಾಗಿರುವ ಕಡತ ಪತ್ತೆಗೆ ಡೆಡ್‌ಲೈನ್

Published On :

ನವದೆಹಲಿ: ಕಲ್ಲಿದ್ದಲು ಪ್ರಕರಣದ ನಾಪತ್ತೆಯಾಗಿರುವ ಕಡತಗಳನ್ನು ಪತ್ತೆ ಮಾಡಲು ವಿಳಂಬ ಮಾಡುತ್ತಿರುವ ಸಿಬಿಐ ವಿರುದ್ಧ  ಸುಪ್ರೀಂಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ.

ಅದೇ ವೇಳೆ ನಾಪತ್ತೆಯಾಗಿರುವ ಕಡತಗಳನ್ನು 2 ವಾರದೊಳಗೆ ಪತ್ತೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ನಾಪತ್ತೆಯಾಗಿರುವ ಕಡತಗಳ ಬಗ್ಗೆ ಕೆಲವು ವಿವಾದಗಳೆದ್ದಿವೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಇದಕ್ಕೆ ಉತ್ತರಿಸಿದ ಸುಪ್ರೀಂ, ಇದೊಂದು ಲಘು ಹೇಳಿಕೆ ಎಂದಿದೆ. ಮಾತ್ರವಲ್ಲದೆ ಆದಷ್ಟು ಬೇಗ ನಾಪತ್ತೆಯಾದ ಕಡತಗಳನ್ನು ಪತ್ತೆ ಮಾಡಬೇಕೆಂದು  ಸಿಬಿಐಗೆ ಹೇಳಿದೆ.

ಸಿಬಿಐ ತನಿಖೆ ಮಂದಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ ಸುಪ್ರೀಂ, ಪ್ರಸ್ತುತ ಪ್ರಕರಣದಲ್ಲಿ 169 ಕಂಪನಿಗಳು ಭಾಗಿಯಾಗಿವೆ ಎಂಬ ಆರೋಪವಿದೆ. ಆದ್ದರಿಂದ ಆದಷ್ಟು ಬೇಗ ತನಿಖೆ ಮಾಡಿ ವರದಿ ಸಲ್ಲಿಸಬೇಕು ಎಂದು ಹೇಳಿದೆ.

ಆದಾಗ್ಯೂ, ಕೆಲವೊಂದು ಪ್ರಧಾನ ಕಡತಗಳು ಸರ್ಕಾರದಿಂದ ನಮಗೆ ಲಭಿಸಿಲ್ಲವಾಗಿದ್ದರಿಂದ ತನಿಖೆಯ ಗತಿಯೂ ಕ್ಷೀಣಿಸಿದೆ ಎಂದು ಸಿಬಿಐ, ಸುಪ್ರೀಂ ಕೋರ್ಟ್‌ಗೆ ಉತ್ತರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.