ಈಗಿನ ಸುದ್ದಿ

ಜಿಸ್ಯಾಟ್-7 ಉಪಗ್ರಹ ಉಡಾವಣೆ ಯಶಸ್ವಿ

Published On :

ಬೆಂಗಳೂರು: ಭಾರತದ ಮೊಟ್ಟ ಮೊದಲ ರಕ್ಷಣಾ ಉಪಗ್ರಹ ಜಿಸ್ಯಾಟ್-7 ಉಪಗ್ರಹ ಶುಕ್ರವಾರ ಯಶಸ್ವಿಯಾಗಿ ಉಡಾವಣೆಯಾಗಿದೆ.

ರಕ್ಷಣಾ ಉದ್ದೇಶಕ್ಕಾಗಿ ದೇಶಿಯವಾಗಿ ನಿರ್ಮಿಸಲಾದ ಜಿಸ್ಯಾಟ್-7 ಉಪಗ್ರಹ ಫ್ರೆಂಚ್ ಗಯಾನಾದ ಕೌರು ಬಾಹ್ಯಾಕಶ ನೆಲೆಯಲ್ಲಿ ಯಶಸ್ವಿ ಉಡಾವಣೆಯಾಗಿದೆ. ಇದು ನೌಕಾ ಸಂವಹನಕ್ಕೆ ನೆರವಾಗುವ ಉಪಗ್ರಹವಾಗಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ 2 ಗಂಟೆಗೆ ಉಪಗ್ರಹವನ್ನು ಹೊತ್ತ 5 ರಾಕೆಟ್‌ಗಳು ಗಗನಕ್ಕೆ ಚಿಮ್ಮಿದೆ. ಭಾರತದ ಭೂಭಾಗ ಮತ್ತು ಸಾಗರಗಳ ಮೇಲೆ ಹಾಗೂ ದೇಶದ ಭದ್ರತೆ ಮತ್ತು ಸೂಕ್ಷ್ಮ ಭಾಗಗಳ ಮೇಲೆ ನಿಗಾ ಇಡುವುದಲ್ಲದೇ, ನೌಕಾ ಪಡೆಗೆ ಶರವೇಗದಲ್ಲಿ ಮಾಹಿತಿ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.