ಯಾಸೀನ್ ಭಟ್ಕಳ್‌ಗೆ ತನ್ನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪವಿಲ್ಲ
ನವದೆಹಲಿ: ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸೀನ್ ಭಟ್ಕಳ ಅಲಿಯಾಸ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ಧಿಬಾಪಾನಿಗೆ ತಾನು ಎಸಗಿರುವ ಕೃತ್ಯಗಳ ಬಗ್ಗೆ ಪಶ್ಚಾತ್ತಾಪವಿಲ್ಲ ಎಂದು ಮೂಲಗಳು ತಿಳಿಸಿವೆ.
ತಾನು ಎಸಗಿರುವ ಕೃತ್ಯಗಳ ಬಗ್ಗೆ ಸಮರ್ಥಿಸಿಕೊಂಡಿರುವ ಯಾಸಿನ್, ಎಲ್ಲಾ ಸಮಯದಲ್ಲಿ ಬಾಂಬ್ ಸ್ಫೋಟವಾಗಿದೆ. ಇಲ್ಲಿ ತಿಳಿದುಕೊಳ್ಳಲು ಯಾವುದೇ ಹೊಸ ವಿಷಯವಿಲ್ಲ. ಬಾಂಬ್ ಸ್ಫೋಟಿಸಿರುವುದರ ಬಗ್ಗೆ ನಾನು ಪಶ್ಚಾತ್ತಾಪ ಪಡುವುದಿಲ್ಲ ಎಂದು ಹೇಳಿದ್ದಾನೆ.
ಭಾರತದಲ್ಲಿ ಬಾಂಬ್ ಸ್ಪೋಟಿಸಿ ಅನೇಕ ಅಮಾಯಕ ಜನರ ಪ್ರಾಣ ತೆಗೆದ ಯಾಸಿನ್, ತನ್ನ ಧೋರಣೆಯನ್ನು ಸಮರ್ಥಿಸಿಕೊಂಡಿದ್ದು, ಬಂಧನದ ನಂತರ ವಿಚಾರಣೆಗೆ ಒಳಪಡಿಸಿದ ವೇಳೆ ಆತನ ಹೇಳಿಕೆಯಲ್ಲಿ ಪಶ್ಚಾತ್ತಾಪವಿರದಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಐಎಸ್‌ಐ ಜೊತೆ ಸಂಪರ್ಕವಿದೆ ಎಂದು ತಪ್ಪೋಪ್ಪಿಕೊಂಡಿರುವ ಯಾಸಿನ್ ಭಟ್ಕಳ್, 2009ರಲ್ಲಿ ತನ್ನ ಸಹೋದರನ ಜೊತೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ನಿನ್ನೆ ಬೇಹುಗಾರಿಕಾ ದಳ ಮತ್ತು ಬಿಹಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಯಾಸಿನ್ ಭಟ್ಕಳ್‌ನನ್ನು ಬಂಧಿಸಲಾಗಿತ್ತು. ಬಿಹಾರಕ್ಕೆ ಹೊಂದಿಕೊಂಡಿರುವ ನೇಪಾಳ ಗಡಿಯಲ್ಲಿ ಬುಧವಾರ ರಾತ್ರಿ ಆತನನ್ನು ಬಂಧಿಸಲಾಗಿದೆ. ಇಂದು ಮಧ್ಯಾಹ್ನದೊಳಗೆ ಆತನನ್ನು ದೆಹಲಿಗೆ ಕರೆ ತರಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
40 ಪ್ರಕರಣಗಳಲ್ಲಿ ಭಾಗಿ
2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಸ್ಫೋಟ, ಪುಣೆಯ ಜರ್ಮನಿ ಬೇಕರಿ ಸ್ಫೋಟ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಂಭವಿಸಿದ 40ಕ್ಕೂ ಹೆಚ್ಚು ಬಾಂಬ್ ಸ್ಫೋಟಗಳಲ್ಲಿ ಯಾಸೀನ್ ಭಟ್ಕಳ್ ಭಾಗಿಯಾಗಿದ್ದಾನೆ.
ಹೈದರಾಬಾದ್ ಅವಳಿ ಸ್ಫೋಟದ ರೂವಾರಿ ಈ ಭಟ್ಕಳ್
2013 ಫೆಬ್ರುವರಿ 21ರಂದು 16 ಮಂದಿಯನ್ನು ಬಲಿ ಪಡೆದು ಹೈದರಾಬಾದ್‌ನ ದಿಲ್ ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಸ್ಫೋಟದಲ್ಲಿ ಯಾಸಿನ್ ಭಟ್ಕಳ್ ಭಾಗಿಯಾಗಿದ್ದಾನೆ. ಈ ಅವಳಿ ಸ್ಫೋಟ ಸಂಭವಿಸಿದ್ದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಶಂಕಿತ ವ್ಯಕ್ತಿಯ ದೃಶ್ಯ ಸೆರೆಯಾಗಿತ್ತು. ಆ ದೃಶ್ಯದಲ್ಲಿದ್ದ ವ್ಯಕ್ತಿ ಖುದ್ದು ಯಾಸಿನ್ ಭಟ್ಕಳನೇ ಎಂದು ಶಂಕಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

