ಈಗಿನ ಸುದ್ದಿ

ಅಸಾರಾಂ ಬಾಪು ಬಂಧನ ಆಗ್ರಹಿಸಿ ಅಮರಣಾಂತ ಉಪವಾಸ

Published On :

ನವದೆಹಲಿ: ರಾಜಸ್ತಾನದ ಜೋಧಪುರ್‌ನಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿರುವ ಹದಿಹರೆಯದ ಬಾಲಕಿಯ ಅಪ್ಪ, ಅಸಾರಾಂ ಅವರ ಬಂಧನ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಬಾಲಕಿಯ ಅಪ್ಪ ಶನಿವಾರ ಉಪವಾಸ ಆರಂಭಿಸಿದ್ದು, ಅಸಾರಾಂ ಬಂಧನಕ್ಕೊಳಗಾಗುವವರೆಗೆ ತಾನು ಯಾವುದೇ ಆಹಾರವನ್ನು ಸೇವಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ, ಅಸಾರಾಂ ಬಾಪು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯಾರಿಗಾದರೂ ಹೇಳಿದರೆ ಕೊಂದು ಹಾಕುವೆ ಎಂದು ತನ್ನ ಮಗಳಿಗೆ ಬೆದರಿಕೆಯನ್ನೊಡ್ಡಿದ್ದರು ಎಂದು ಬಾಲಕಿಯ ಅಪ್ಪ ದೂರಿದ್ದರು.

ತಾನು ಅಸಾರಾಂ ಬಾಪುನನ್ನು ದೇವರು ಎಂದು ನಂಬಿದ್ದೆ. ಆದರೆ ಆತ ಇಂಥಾ ನಾಚಿಕೆಗೇಡಿನ ಕೃತ್ಯವನ್ನೆಸಗುವ ಮೂಲಕ ತನ್ನ ಹಾಗು ತಮ್ಮ ಕುಟುಂಬದ ನಂಬಿಕೆಗೆ ದ್ರೋಹ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದಕ್ಕಾಗಿ ಅಸಾರಾಂ ಬಾಪುವನ್ನು ಗಲ್ಲಿಗೇರಿಸಿ ಎಂದು ಬಾಲಕಿಯ ಅಪ್ಪ ಒತ್ತಾಯಿಸಿದ್ದಾರೆ.
        

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.