ಈಗಿನ ಸುದ್ದಿ

ಉಗ್ರ ಕೃತ್ಯಗಳಿಗಾಗಿ ಬಿಹಾರದ ಯುವಕರನ್ನು ಓಲೈಸಿದ್ದ ಭಟ್ಕಳ್

Published On :

ನವದೆಹಲಿ: ಗುರುವಾರ ಬಂಧನಕ್ಕೊಳಗಾದ ಇಂಡಿಯನ್ ಮುಜಾಹಿದ್ದೀನ್ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ಭಯೋತ್ಪಾದನಾ ಸಂಘಟನೆಗೆ ಸೇರುವಂತೆ ಬಿಹಾರದ ಯುವಕರನ್ನು ಓಲೈಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಾಂಬ್ ಸ್ಫೋಟ ಹಾಗು ಇನ್ನಿತರ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಭಟ್ಕಳ್‌ಗಾಗಿ ಕಳೆದ 5 ವರ್ಷದಿಂದ ಪೊಲೀಸರು ಹುಡುಕಾಡುತ್ತಿದ್ದು, ಕಳೆದ ಗುರುವಾರ ಭಾರತ- ನೇಪಾಳ ಗಡಿ ಪ್ರದೇಶದಿಂದ ಪೊಲೀಸರು ಈತನನ್ನು ಬಂಧಿಸಿದ್ದರು. ಇದರ ಜತೆಗೆ ಭಟ್ಕಳ್‌ನ ಸಹಚರ ಅಸಾದುಲ್ಲ ಅಖ್ತರ್ ಕೂಡಾ ಸೆರೆಯಾಗಿದ್ದನು.

ಭಟ್ಕಳ್‌ನ್ನು ವಿಚಾರಣೆಗೊಳಪಡಿಸಿದಾಗ ತಾನು ಬಿಹಾರದ ಮಿತಿಲಾಂಚಲ್ ಪ್ರದೇಶ ಸೇರಿದಂತೆ ದರ್ಬಾಂಗ, ಮಧುಬನಿ ಮತ್ತು ಸಮಸ್ತಿಪುರ್ ಜಿಲ್ಲೆಗಳಲ್ಲಿ ಉಗ್ರ ಸಂಘಟನೆಗಾಗಿ ಯುವಕರನ್ನು ನಿಯೋಜಿಸುತ್ತಿದ್ದನು ಎಂದು ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆರ್ಥಿಕವಾಗಿ ಹಿಂದುಳಿದಿರುವ ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಭಟ್ಕಳ್ ಓಲೈಸುತ್ತಿದ್ದ ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ. ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಮಾಡಲು ಆತ ಮಿತಿಲಾಂಚಲ್‌ನಲ್ಲಿ ಯುವಕನ್ನು ನಿಯೋಜನೆ  ಮಾಡುತ್ತಿದ್ದ ಎಂದು ಬಿಹಾರದಲ್ಲಿ ಭಟ್ಕಳ್‌ನ್ನು ವಿಚಾರಣೆಗೊಳಪಡಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾನು ಮತ್ತು ತನ್ನ ಸಹಚರರು  ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಯುವಕರನ್ನು ಪತ್ತೆ ಹಚ್ಚಿ ತಮ್ಮ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದೆವು. ನಂತರ ಅವರಿಗೆ ನಿಗದಿತ ಕೆಲಸವನ್ನು ನೀಡಿ ಅದನ್ನವರು ಯಶಸ್ವಿಯಾಗಿ ಪೂರೈಸಿದರೆ ಮಾತ್ರ ಮುಂದಿನ ಹಂತದ ಕಾರ್ಯಗಳಿಗೆ ನಿಯೋಜಿಸಲಾಗುವುದು. ಹೀಗೆ ಉಗ್ರ ಸಂಘಟನೆಯೊಂದಿಗೆ ತೊಡಗಿರುವ ಯುವಕರ ಹೆಸರು ಮತ್ತು ವಿಳಾಸವನ್ನು ಎಲ್ಲಿಯೂ ಬಹಿರಂಗ ಪಡಿಸಲಾಗುವುದಿಲ್ಲ ಎಂದು ಭಟ್ಕಳ್ ವಿವರಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಏತನ್ಮಧ್ಯೆ, ಉಗ್ರ ಸಂಘಟನೆಗೆ ಯುವಕರನ್ನು ನಿಯೋಜಿಸುವ ಕಾರ್ಯದಲ್ಲಿ ತಾನು ನೇರವಾಗಿ ಪಾಲ್ಗೊಳ್ಳುತ್ತಿದ್ದೆ ಎಂಬುದನ್ನು ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.