ಸೈಕೋ ಕಿಲ್ಲರ್ ಜೈಶಂಕರ್ ಜೈಲಿನಿಂದ ಪರಾರಿ, 11 ಅಧಿಕಾರಿಗಳ ಅಮಾನತು

ಬೆಂಗಳೂರು: ಸೈಕೋ ಕಿಲ್ಲರ್ ಜೈಶಂಕರ್ ಭಾನುವಾರ ಜೈಲಿನಿಂದ ಪರಾರಿಯಾಗಿದ್ದು, ಈ ಸಂಬಂಧ ಜೈಲಿನ 11 ಅಧಿಕಾರಿಗಳನ್ನು ಅಮಾನತುಗೊಳಿಸಿ ಎಡಿಜಿಪಿ ಗಗನ್ದೀಪ್ ಅವರು ಆದೇಶಿಸಿದ್ದಾರೆ.
ಸುಮಾರು 20ಕ್ಕು ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಕಿಲ್ಲರ್ ಜೈಶಂಕರ್ ಇಂದು ಬೆಳಗಿನ ಜಾವ ಪರಪ್ಪನ ಅಗ್ರಹಾರ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ. ಕೇಂದ್ರ ಕಾರಾಗೃಹ ಇತಿಹಾಸದಲ್ಲೇ ಕೈದಿಯೊಬ್ಬ ಜೈಲಿನಿಂದ ಪರಾರಿಯಾಗಿದ್ದು ಇದೇ ಮೊದಲು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗಗನ್ದೀಪ್ ಅವರು, ಈ ಸಂಬಂಧ ಹೆಚ್ಚುವರಿ ಎಸ್ಪಿ ಸಿ.ವಿ.ಮಠ್ ಹಾಗೂ ಜೈಲರ್ಗಳಾದ ಮೋಹನ್ ಮತ್ತು ಮಹಾಂತೇಶ್ ಸೇರಿದಂತೆ 11 ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ.
ಪರಾರಿಯಾದ ಕೈದಿ ಜೈಶಂಕರನನ್ನು 2011ರ ಮೇನಲ್ಲಿ ಬಿಜಾಪುರ ಜಿಲ್ಲೆ ಝಳಕಿ ಚೆಕ್ಪೋಸ್ಟ್ನಲ್ಲಿ ಬಂಧಿಸಲಾಗಿತ್ತು.
ತಮಿಳುನಾಡು ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಜೈಶಂಕರ್ ನಿನ್ನೆ ಮಧ್ಯರಾತ್ರಿ ನಕಲಿ ಕೀ ಹಾಗೂ ಪೊಲೀಸ್ ಡ್ರೆಸ್ ಬಳಸಿ ಜೈಲಿನಿಂದ ಪರಾರಿಯಾಗಿದ್ದಾನೆ. ಆದರೆ ಆತನಿಗೆ ನಕಲಿ ಕೀ ಹಾಗೂ ಪೊಲೀಸ್ ಡ್ರೆಸ್ ಹೇಗೆ ಸಿಕ್ಕಿತು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದು, ಅವರು ಕೈದಿ ಪರಾರಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ.
ಈ ಕಿಲ್ಲರ್ ಜೈಶಂಕರ್ ಈ ಮುಂಚೆ 2011ರಲ್ಲಿ ಕೊಯಮತ್ತೂರು ಜೈಲಿಂದ ಕೋರ್ಟ್ಗೆ ಕರೆತರುವಾಗಲೂ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


