ಈಗಿನ ಸುದ್ದಿ

ಖಾಸಗಿ ಹಡಗುಗಳಿಂದ ಮತ್ತೆ 'ಮುಂಬೈ ದಾಳಿ': ಡಿಕೆ ಜೋಷಿ

ಖಾಸಗಿ ಹಡಗುಗಳಿಂದ ಮತ್ತೆ 'ಮುಂಬೈ ದಾಳಿ': ಡಿಕೆ ಜೋಷಿ
Published On :

ನವದೆಹಲಿ: ಖಾಸಗಿ ಹಡುಗು ಸಂಸ್ಥೆಗಳ ಮೂಲಕ ಶಸ್ತ್ರಾಸ್ತ್ರ ರವಾನಿಸುವುದರಿಂದ ಮತ್ತೆ ಭಾರತದಲ್ಲಿ 26/11 ಮಾದರಿಯಲ್ಲಿ ದಾಳಿಯಾಗುವ ಸಾಧ್ಯತೆ ಇದೆ ಎಂದು ನೌಕಾದಳದ ಮುಖ್ಯಸ್ಥ ದೇವೇಂದ್ರ ಕುಮಾರ್ ಜೋಷಿ ಎಚ್ಚರಿಕೆ ನೀಡಿದ್ದಾರೆ.

ನೌಕಾದಳದ ದಿನಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜೋಷಿ, ಖಾಸಗಿ ಹಡಗುಗಳಲ್ಲಿ ಅನಿಯಂತ್ರಿತ ಶಸ್ತ್ರಾಸ್ತ್ರಗಳನ್ನು ರವಾನಿಸುವುದರಿಂದ ಭಾರತದಲ್ಲಿ ಮತ್ತೆ ಮುಂಬೈ ದಾಳಿ ಮಾದರಿಯಲ್ಲಿ ದಾಳಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಡಗುಗಳಲ್ಲಿ ಶಸ್ತ್ರಾಸ್ತ್ರಗಳನ್ನು ರವಾನಿಸುವುದು ಗಂಭೀರ ವಿಚಾರವಾಗಿದ್ದು, ಇದಕ್ಕೆ ಯಾವುದೇ ರೀತಿಯ ನಿಯಂತ್ರಣಗಳಿಲ್ಲ. ದೇಶದ ಶತ್ರುಗಳು ಮತ್ತು ಭಯೋತ್ಪಾದಕರು ಇದರ ಪ್ರಯೋಜನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಹಡಗುಗಳಲ್ಲಿ ಶಸ್ತ್ರಾಸ್ತ್ರ ಮತ್ತು ಸೈನಿಕರನ್ನು ರವಾನಿಸುವುದೂ ಕೂಡ ಸುರಕ್ಷತಾ ಕ್ರಮವಲ್ಲ ಇದರಿಂದ ಭಯೋತ್ಪದಕರಿಗೆ ದಾಳಿ ನಡೆಸುವಂತೆ ಪರೋಕ್ಷವಾಗಿ ಆಹ್ವಾನ ನೀಡಿದಂತಾಗುತ್ತದೆ ಎಂದು ಜೋಷಿ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ದಾಳಿ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಏಕೈಕ ಜೀವಂತ ಅಪರಾಧಿ ಅಜ್ಮಲ್ ಕಸಬ್ ಮತ್ತು ಆತನ ತಂಡ ಕೂಡ ಪಾಕಿಸ್ತಾನದಿಂದ ಭಾರತಕ್ಕೆ ಪುಟ್ಟ ಹಡಗಿನಲ್ಲಿ ಪ್ರಯಾಣಿಸಿದ್ದರು. ಭಾರತದ ಕರಾವಳಿ ಭದ್ರತಾ ಪಡೆಗಳಿಗೆ ಅನುಮಾನ ಬಾರದಿರಲು ಭಾರತೀಯ ಮೀನುಗಾರಿಕಾ ಹಡಗೊಂದನ್ನು ಅಪಹರಿಸಿ ಅದರಲ್ಲಿದ್ದ ಎಲ್ಲ ಮೀನುಗಾರರನ್ನು ಹತ್ಯೆಗೈದಿದ್ದರು. ಅನಂತರ ಪೊಲೀಸ್ ವಾಹನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕರು ಮುಂಬೈನಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ತಮ್ಮ ಕ್ರೌರ್ಯ ಮೆರೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.