ಚೀನಾಗಿಂತಲೂ ಭಾರತದಲ್ಲಿ ಭ್ರಷ್ಟಾಚಾರ ಪ್ರಮಾಣ ಹೆಚ್ಚು

ನವದೆಹಲಿ: ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ ಮಂಗಳವಾರ ಹೊರಬಿದ್ದಿದ್ದು, ಚೀನಾದೇಶಕ್ಕಿಂತಲೂ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವರದಿಯೊಂದು ಹೇಳಿದೆ.
watchdog Transparency International (TI) ಇಂದು ಬಿಡುಗಡೆ ಮಾಡಿರುವ ವಿಶ್ವದ ಭ್ರಷ್ಟ ದೇಶಗಳ ಪಟ್ಟಿಯಲ್ಲಿ ಒಟ್ಟಾರೆ 36 ಅಂಕಗಳನ್ನು ಗಳಿಸಿರುವ ಭಾರತ 94ನೇ ಸ್ಥಾನದಲ್ಲಿದೆ. 40 ಅಂಕಗಳನ್ನು ಗಳಿಸಿಕೊಂಡಿರುವ ನೆರೆಯ ಚೀನಾ 80ನೇ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕೆ ಹೋಲಿಸಿಕೊಂಡರೆ ಭಾರತಲ್ಲಿನ ಭ್ರಷ್ಟಾಚಾರ ಪ್ರಮಾಣ ಕಡಿಮೆ ಪ್ರಮಾಣದಲ್ಲಿದ್ದು, ಪಾಕಿಸ್ತಾನ 28 ಅಂಕಗಳನ್ನು ಗಳಿಸಿ 127ನೇ ಸ್ಥಾನದಲ್ಲಿದೆ.
ವಿಶ್ವದ ಎಲ್ಲ ದೇಶಗಳನ್ನು ಪಟ್ಟಿಮಾಡಿ ಆ ದೇಶಗಳಲ್ಲಿನ ಭ್ರಷ್ಟಾಚಾರ ಪ್ರಮಾಣಕ್ಕೆ ಅನುಗುಣವಾಗಿ 0-100 ವರೆಗಿನ ಅಂಕಗಳನ್ನು ನೀಡಲಾಗಿದೆ. ಆ ಪ್ರಕಾರ ವಿಶ್ವದ ಅತ್ಯಂತ ಭ್ರಷ್ಟ ದೇಶಗಳ ಸಾಲಿನಲ್ಲಿ ಸೊಮಾಲಿಯಾ, ಉತ್ತರ ಕೊರಿಯಾ ಮತ್ತು ಆಫ್ಘಾನಿಸ್ತಾನ ದೇಶಗಳು ತಲಾ 8 ಅಂಕಗಳನ್ನು ಗಳಿಸುವುದರೊಂದಿಗೆ ಜಂಟಿ ಪ್ರಥಮ ಸ್ಥಾನದಲ್ಲಿವೆ. ಅಂತೆಯೇ 91 ಅಂಕಗಳನ್ನು ಗಳಿಸಿರುವ ಡೆನ್ಮಾರ್ಕ್ ಮತ್ತು ನ್ಯೂಜಿಲೆಂಡ್ ದೇಶಗಳು ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಅತ್ಯಂತ ಕಡಿಮೆ ಭ್ರಷ್ಟಾಚಾರ ನಡೆವ ದೇಶಗಳು ಎಂಬ ಖ್ಯಾತಿ ಪಡೆದಿವೆ.
ಆದರೆ ಇಲ್ಲಿ ವಿಶ್ವದ ಯಾವುದೇ ರಾಷ್ಟ್ರವೂ ಕೂಡ 100 ಅಂಕಗಳಿಸಿ ಸಂಪೂರ್ಣ ಭ್ರಷ್ಟಾಚಾರ ಮುಕ್ತ ರಾಷ್ಟ್ರ ಎನಿಸಿಕೊಳ್ಳುವುದರಲ್ಲಿ ವಿಫಲವಾಗಿವೆ.
TI ಬಿಡುಗಡೆ ಮಾಡಿರುವ ವಿಶ್ವದ ಮೊದಲ ಹತ್ತು ಅತ್ಯಂತ ಹೆಚ್ಚು ಭ್ರಷ್ಟ ರಾಷ್ಟ್ರಗಳು
ಸೊಮಾಲಿಯಾ (8)
ಆಫ್ಘಾನಿಸ್ತಾನ (8)
ಉತ್ತರ ಕೊರಿಯಾ (8)
ಸುಡಾನ್ (11)
ದಕ್ಷಿಣ ಸುಡಾನ್ (14)
ಲಿಬಿಯಾ (15)
ಇರಾಕ್ (16)
ಉಜ್ಬೇಕಿಸ್ತಾನ (17)
ಟರ್ಕ್‌ಮೆನಿಸ್ತಾನ (17)
ಸಿರಿಯಾ (17)
ವಿಶ್ವದ ಮೊದಲ ಹತ್ತು ಅತ್ಯಂತ ಕಡಿಮೆ ಭ್ರಷ್ಟ ರಾಷ್ಟ್ರಗಳು
ಡೆನ್ಮಾರ್ಕ್ (91)
ನ್ಯೂಜಿಲ್ಯಾಂಡ್ (91)
ಫಿನ್ ಲ್ಯಾಂಡ್ (89)
ಸ್ವೀಡೆನ್ (89)
ನಾರ್ವೆ (86)
ಸಿಂಗಾಪುರ (86)
ಸ್ವಿಟ್ಜೆರ್‌ಲ್ಯಾಂಡ್ (85)
ನೆದರ್ ಲ್ಯಾಂಡ್ (83)
ಆಸ್ಟ್ರೇಲಿಯಾ (81)
ಕೆನಡಾ (81)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


