ಈಗಿನ ಸುದ್ದಿ

ಚೀನಾದಲ್ಲಿ ಅನಿಲ ಕೊಳವೆ ಸ್ಫೋಟ: 62ಕ್ಕೇರಿದ ಮೃತರ ಸಂಖ್ಯೆ

ಚೀನಾದಲ್ಲಿ ಅನಿಲ ಕೊಳವೆ ಸ್ಫೋಟ: 62ಕ್ಕೇರಿದ ಮೃತರ ಸಂಖ್ಯೆ
Published On :

ಬೀಜಿಂಗ್: ಚೀನಾದಲ್ಲಿ ಸಂಭವಿಸಿದ್ದ ಅನಿಲ ಕೊಳವೆ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 62ಕ್ಕೇರಿದ್ದು, ಗಾಯಾಳುಗಳ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ.

ಕಳೆದ ನವೆಂಬರ್ 22ರಂದು ಚೀನಾದ ಷಾನ್ಡಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ್ದ ಅನಿಲ ಕೊಳವೆ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ ಏರಿಕೆಯಾಗಿದ್ದು, ಮಂಗಳವಾರ ನಡೆದ ಶೋಧ ಕಾರ್ಯದಲ್ಲಿ ಮತ್ತೆ ಮೂರು ಶವಗಳು ಪತ್ತೆಯಾಗಿವೆ. ಆ ಮೂಲಕ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 62ಕ್ಕೇರಿದೆ. ಅಲ್ಲದೆ ಗಾಯಾಳುಗಳ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಪ್ರಸ್ತುತ 136 ಮಂದಿ ಗಾಯಾಳುಗಳನ್ನು ಚೀನಾದ ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.

ದುರಂತ ಸ್ಥಳದಲ್ಲಿ ನಾಪತ್ತೆಯಾಗಿದ್ದ ಕೊನೆಯ ಮೂವರಿಗಾಗಿ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ನಿನ್ನೆಯಿಂದ ಶೋಧಕಾರ್ಯ ಆರಂಭಿಸಿದ್ದರು. ಈ ಪೈಕಿ ಇಂದು ಬೆಳಗ್ಗೆ ಕಾಣೆಯಾಗಿದ್ದ 3 ಮೃತದೇಹಗಳು ಪತ್ತೆಯಾಗಿವೆ. ಸುಮಾರು 176 ಕಿಮಿವರೆಗೆ ವಿಸ್ತರಿಸಿರುವ ಈ ಅನಿಲ ಕೊಳವೆ ವ್ಯಾಂಗ್ಡಾವ್ ಜಿಲ್ಲೆಯಿಂದ ವೈಯಫಾಂಗ್ ಅನಿಲ ಡಿಪೋಗೆ ಸಂಪರ್ಕ ಕಲ್ಪಿಸಿತ್ತು. ವ್ಯಾಂಗ್ಡಾವ್ ಜಿಲ್ಲೆಯ ಸಮೀಪವಿರುವ ಹೈಹೆ ಮತ್ತು ಝೈಟಾಂಗ್ಡಾವ್ ರಸ್ತೆಯಲ್ಲಿ ಅನಿಲ ಕೊಳವೆಯಲ್ಲಿ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.