ಕಾಶ್ಮೀರಕ್ಕಾಗಿ ಮತ್ತೆ ಯುದ್ಧ: ನವಾಜ್ ಷರೀಫ್

ಇಸ್ಲಾಮಾಬಾದ್: ಕಾಶ್ಮೀರ ವಿವಾದ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಭವಿಷ್ಯದಲ್ಲಿ ಮತ್ತೊಂದು ಯುದ್ಧಕ್ಕೆ ನಾಂದಿಯಾಗಬಹುದು ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಬಜೆಟ್ ಕಲಾಪದ ಕುರಿತು ಸುದ್ದಿ ಸಂಸ್ಥೆಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ನವಾಜ್ ಷರೀಫ್ ಅವರು, ಉಭಯ ದೇಶಗಳ ನಡುವೆ ಕಾಶ್ಮೀರ ವಿವಾದ ಭವಿಷ್ಯದಲ್ಲಿ ಮತ್ತೊಂದು ಯುದ್ಧಕ್ಕೆ ಕಾರಣವಾಗಬಹುದು. ಭಾರತೀಯ ಕಾಶ್ಮೀರವನ್ನು ಸ್ವತಂತ್ರ್ಯಗೊಳಿಸುವುದು ನನ್ನ ಕನಸಾಗಿದ್ದು, ನನ್ನ ಜೀವಿತಾವಧಿಯಲ್ಲಿಯೇ ಅದು ನನಸಾಗುತ್ತದೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.
ಕಾಶ್ಮೀರ ಜನರ ಆಕಾಂಕ್ಷೆಯ ಮೇರೆಗೆ ಅದನ್ನು ಸ್ವತಂತ್ರ್ಯಗೊಳಿಸದ ಹೊರತು ವಿಶ್ವಸಂಸ್ಥೆ ಯಾವುದೇ ನಿರ್ಣಯಗಳನ್ನು ಕೈಗೊಂಡರೂ ಆ ನೆಲದಲ್ಲಿ ಶಾಂತಿ ನೆಲೆಸುವುದು ಅಸಾಧ್ಯ. ಆದರೆ ಇದಕ್ಕಾಗಿ ನಾವು ಭಾರತದೊಂದಿಗೆ ಶಸ್ತ್ರಾಸ್ತ್ರ ಸ್ಪರ್ಧೆಗಿಳಿಯುವುದಿಲ್ಲ. ಒಂದು ವೇಳೆ ಸ್ಪರ್ಧೆಗೆ ಇಳಿದಿದ್ದೇ ಆದರೆ ಬಡತನ ನಿರ್ಮೂಲನೆಗೆ ಮತ್ತು ಸಾಮಾಜಿಕ ವಲಯದ ಅಭಿವೃದ್ಧಿಗೆ ಮೀಸಲಾಗಿರಿಸಿರುವ ನಿಧಿಯನ್ನು ಬಳಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಅಂತಾರಾಷ್ಟ್ರೀಯ ಸಮುದಾಯ ಕಾಶ್ಮೀರವನ್ನು ಸ್ವತಂತ್ರ್ಯಗೊಳಿಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಷರೀಫ್ ಒತ್ತಿ ಹೇಳಿದ್ದಾರೆ.
ಒಟ್ಟಾರೆ ಕಾಶ್ಮೀರದ ವಿಚಾರವಾಗಿ ಪದೇ ಪದೇ ಪಾಕಿಸ್ತಾನ ಕಾಲುಕೆರೆಯುತ್ತಿದ್ದು, ಕಾಶ್ಮೀರಕ್ಕಾಗಿ ತನ್ನ ಅಭಿವೃದ್ಧಿ ಯೋಜನೆಗಳನ್ನೂ ಕೂಡ ಬದಿಗೊತ್ತಲೂ ಪಾಕಿಸ್ತಾನ ಸಿದ್ಧ ಎನ್ನುವ ಧಾಟಿಯಲ್ಲಿ ಪ್ರಧಾನಿ ಷರೀಫ್ ಮಾತನಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


