ಸಿಂಧೂರಕ್ಷಕ್ ದುರಂತ: ಪೂರ್ಣಗೊಳ್ಳದ ಶೋಧಕಾರ್ಯ

ಮುಂಬೈ: ಸಿಂಧೂರಕ್ಷಕ್ ಸಬ್ಮೆರಿನ್ ದುರಂತ ನಡೆದು 4 ತಿಂಗಳಾದರೂ ನಾಪತ್ತೆಯಾಗಿರುವ ಯೋಧರ ಮೃತದೇಹಗಳಿಗಾಗಿ ನಡೆದಿರುವ ಶೋಧಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
ಐಎನ್ಎಸ್ ಸಿಂಧೂರಕ್ಷಕ್ ಸಬ್ಮೆರಿನ್ ದುರಂತ ನಡೆದು ಸತತ 4 ತಿಂಗಳುಗಳಾದರೂ ನಾಪತ್ತೆಯಾದ ಸಿಬ್ಬಂದಿಗಳ ಮೃತ ದೇಹಗಳಿಗಾಗಿ ನೌಕದಳದ ಸಿಬ್ಬಂದಿಗಳು ಇನ್ನೂ ಶೋಧಕಾರ್ಯ ಮುಂದುವರೆಸಿದ್ದಾರೆ. ನೌಕದಳದ ನುರಿತ ಮುಳುಗು ತಜ್ಞರು ಸಬ್ಮೆರಿನ್ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದು, ನಾಪತ್ತೆಯಾಗಿರುವ 7 ಸಿಬ್ಬಂದಿಗಳ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಕಳೆದ ಆಗಸ್ಟ್ 14ರಂದು ಮುಂಬೈನ ಡಾಕ್ಯಾರ್ಡ್ನಲ್ಲಿದ್ದ ಐಎನ್ಎಸ್ ಸಿಂಧೂರಕ್ಷಕ್ ಸಬ್ ಮೆರಿನ್ನಲ್ಲಿ ಸ್ಫೋಟ ಸಂಭವಿಸಿ, ಅದರಲ್ಲಿದ್ದ ಸುಮಾರು 18 ಮಂದಿ ಸಿಬ್ಬಂದಿ ನಾಪತ್ತೆಯಾಗಿದ್ದರು. ನಂತರ ನೌಕದಳದ ಸಿಬ್ಬಂದಿಗಳು ನೌಕೆಯಲ್ಲಿ ಶೋಧಕಾರ್ಯ ನಡೆಸಿ 18 ಸಿಬ್ಬಂದಿಗಳ ಪೈಕಿ 11 ಸಿಬ್ಬಂದಿಗಳ ಮೃತದೇಹಗಳನ್ನು ಹೊರತಂದಿದ್ದರು. ಆದರೆ ಇನ್ನುಳಿದ 7 ಮೃತದೇಹಗಳಿಗಾಗಿ ನೌಕೆಯಲ್ಲಿ ಇನ್ನೂ ಕೂಡ ಶೋಧಕಾರ್ಯ ನಡೆಸಲಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನೌಕದಳದ ವೈಸ್ ಅಡ್ಮಿರಲ್ ಶೇಖರ್ ಸಿನ್ಹಾ ಅವರು, ನಾವು ಶೋಧಕಾರ್ಯವನ್ನು ಸ್ಥಗಿತಗೊಳಿಸಿಲ್ಲ. ನಮ್ಮ ನುರಿತ ಮುಳುಗು ತಜ್ಞರು ನೌಕೆಯಲ್ಲಿ ಶೋಧಕಾರ್ಯ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಉಳಿದ ಸಿಬ್ಬಂದಿಗಳ ಮೃತ ದೇಹಗಳನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದ್ದಾರೆ.
ನೌಕೆಯ ದುರಂತಕ್ಕೆ ಕಾರಣ ತಿಳಿಯಲು ರಕ್ಷಣಾ ಇಲಾಖೆ ತನಿಖೆಗೆ ಆದೇಶಿಸಿತ್ತು. ಆದರೆ ಇದುವರೆವಿಗೂ ತನಿಖೆ ಪ್ರಗತಿ ಕಂಡಿಲ್ಲ. ಆದರೆ ತಜ್ಞರ ಪ್ರಕಾರ ನೌಕೆಗೆ ಶಸ್ತ್ರಾಸ್ತ್ರಗಳನ್ನು ತುಂಬಿಸುವಾಗ ನೌಕೆಯಲ್ಲಿ ಉಂಟಾದ ಒತ್ತಡದಿಂದಾಗಿ ಬೆಂಕಿಕಾಣಿಸಿಕೊಂಡು ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


