ಈಗಿನ ಸುದ್ದಿ

ಭಾರಿ ಹಿಮಪಾತಕ್ಕೆ ನಲುಗಿದ 'ದೊಡ್ಡಣ್ಣ'

ಭಾರಿ ಹಿಮಪಾತಕ್ಕೆ ನಲುಗಿದ 'ದೊಡ್ಡಣ್ಣ'
Published On :

ಟೆಕ್ಸಾಸ್: ಈ ಭಾರಿಯ ಚಳಿಗಾಲ ವಿಶ್ವದ ದೊಡ್ಡಣ್ಣ ಅಮೆರಿಕಗೆ ಭಾರಿ ಹೊಡೆತವನ್ನು ನೀಡಿದ್ದು, ಭಾರಿ ಹಿಮಪಾತದಿಂದಾಗಿ ಅಮೆರಿಕದ ಪ್ರಮುಖ ನಗರಗಳ ಸಂಪರ್ಕ ಬಹುತೇಕ ಕಡಿತಗೊಂಡಿದೆ.

ಅಮೆರಿಕದ ಪ್ರಮುಖ ನಗರಗಳಾದ ಟೆಕ್ಸಾಸ್, ಮೆಕ್ಸಿಕೋ, ಅರ್ಕಾನ್ಸಾಸ್ ಮತ್ತು ಲೂಸಿಯಾನ ನಗರಗಳಲ್ಲಿ ಭಾರಿ ಹಿಮಮಳೆ ಬೀಳುತ್ತಿದ್ದು, ರಸ್ತೆ ಮತ್ತು ರೈಲು ಮಾರ್ಗಗಳು ಸಂಪೂರ್ಣ ಹಿಮದಲ್ಲಿ ಮುಚ್ಚಿಹೋಗಿವೆ. ಕೇವಲ ಶುಕ್ರವಾರ ಒಂದೇ ದಿನದಲ್ಲಿ ಅಮೆರಿಕದಲ್ಲಿ ಸುಮಾರು 1900 ವಿಮಾನಗಳ ಪ್ರಯಾಣ ವ್ಯತಿರಿಕ್ತ ಹವಾಮಾನದಿಂದಾಗಿ ಸ್ಥಗಿತಗೊಂಡಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಮೆಕ್ಸಿಕೋ ಮತ್ತು ಟೆಕ್ಸಾಸ್ ನಗರದಲ್ಲಿ ಭಾರಿ ಹಿಮಪಾತದಿಂದ ವಿದ್ಯುತ್ ಕೈಕೊಟ್ಟಿದ್ದು, ಈ ನಗರಗಳು ಬಹುತೇಕ ಅಂಧಕಾರದಲ್ಲಿ ಮುಳುಗಿವೆ. ಅತೀವ ಚಳಿಯಿಂದಾಗಿ ಈ ಅವಳಿ ನಗರಗಳಲ್ಲಿ ಈವರೆಗೂ 3 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರಿ ಹಿಮಪಾತ ಮತ್ತು ತೀವ್ರ ಚಳಿಯಿಂದಾಗಿ ಅಮೆರಿಕದ ನಾಗರೀಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳು ಮತ್ತು ವಿಮಾನಗಳ ಸೇವೆ ಹಿಮದಿಂದಾಗಿ ಸ್ಥಗಿತಗೊಂಡಿವೆ.

ರಸ್ತೆಗಳಲ್ಲಿ ತುಂಬಿರುವ ಹಿಮವನ್ನು ತೆಗೆಯಲು ಸ್ಥಳೀಯ ಕಾರ್ಪೋರೇಷನ್ ತುರ್ತು ಕ್ರಮ ಕೈಗೊಂಡಿದ್ದು, ಸ್ಥಳೀಯ ಆಡಳಿತ ಮತ್ತು ಕೆಲ ಸಾಮಾಜಿಕ ಸಂಘಟನೆಗಳು ನಾಗರೀಕರ ಸಹಾಯಕ್ಕೆ ಧಾವಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.