ಪ್ರಧಾನಿ ಸಿಂಗ್ ಅವರನ್ನು 'ಮುದಿ ಮೂರ್ಖ' ಎಂದ ಲಂಕಾದ ಸಂಸದ

ಕೊಲಂಬೋ: ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶ್ರೀಲಂಕಾದ ಸಂಸದನೋರ್ವ 'ಮುದಿ ಮೂರ್ಖ' ಎಂದು ಟೀಕಿಸಿದ್ದಾನೆ.
ಶ್ರೀಲಂಕಾದ ಸಂಸತ್ನಲ್ಲಿ ಕಳೆದ ವಾರ ನಡೆದಿದ್ದ ಕಲಾಪದ ವೇಳೆ ಆಡಳಿತಾರೂಢ ಪಕ್ಷದ ಸೂರ್ಯಪ್ಪೆರುಮಾ ಎಂಬ ಸಂಸದನೋರ್ವ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು 'ಮುದಿ ಮೂರ್ಖ' ಎಂದು ಕಟುವಾಗಿ ಟೀಕಿಸಿದ್ದಾನೆ. ಶ್ರೀಲಂಕಾದಲ್ಲಿ ನಡೆದಿದ್ದ GMCHOGM ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಲ್ಗೊಳ್ಳದ ಹಿನ್ನಲೆಯಲ್ಲಿ ಮಾತನಾಡಿದ ಸೂರ್ಯಪ್ಪೆರುಮಾ, 'ಆ ಮುದಿಯನನ್ನು ಶೀಘ್ರದಲ್ಲಿಯೇ ಕಚೇರಿಯಿಂದ ಹೊರಹಾಕಲಾಗುತ್ತದೆ' ಎಂದು ಹೇಳಿದ್ದಾನೆ.
ಕಳೆದ ವಾರ ಶ್ರೀಲಂಕಾ ವಿದೇಶಾಂಗ ಇಲಾಖೆ ಏರ್ಪಡಿಸಿದ್ದ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೂರ್ಯಪ್ಪೆರುಮಾ, ಭಾರತ ಪ್ರಧಾನಿ ಮನಮೋಹನ್ ಸಿಂಗ್ GMCHOGM ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿ, ಅಲ್ಲಿ ಪಂಚರಾಜ್ಯಗಳ ಚುನಾವಣೆ ಬಂದ ಹಿನ್ನಲೆಯಲ್ಲಿ ಕೊನೆಯ ಗಳಿಗೆಯಲ್ಲಿ ಸಭೆಯನ್ನು ಮೊಟಕುಗೊಳಿಸಿದ್ದನು. ಇದೀಗ ಭಾರತದಲ್ಲಿ ಹೊಸದೊಂದು ರಾಜ್ಯವನ್ನು ರಚನೆ ಮಾಡುತ್ತಿದ್ದಾನೆ. ಶೀಘ್ರದಲ್ಲಿಯೇ 'ಆ ಮುದಿ ಮೂರ್ಖ'ನನ್ನು ಪ್ರಧಾನಿ ಕಚೇರಿಯಿಂದ ಹೊರಹಾಕಲಾಗುತ್ತದೆ ಎಂದು ಹೇಳಿದ್ದಾನೆ.
ಅಲ್ಲದೆ ಭಾರತ ದೇಶದ ಕುರಿತಾಗಿಯೂ ವಿವಾದಾತ್ಮಕ ಹೇಳಿಕೆ ನೀಡಿರುವ ಸೂರ್ಯಪ್ಪೆರುಮಾ, 'ಭಾರತವೇನು ದೈತ್ಯ ದೇಶವಲ್ಲ. ಅದೊಂದು ಕೀಟವಷ್ಟೇ' ಎಂದು ಟೀಕಿಸಿದ್ದಾನೆ.
ವಯಸ್ಸಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಿಂತಲೂ ನಾಲ್ಕು ವರ್ಷ ಹಿರಿಯನಾಗಿರುವ ಸೂರ್ಯಪ್ಪೆರುಮಾ, ಭಾರತ ಪ್ರಧಾನಿಯನ್ನು ಟೀಕಿಸಿರುವುದನ್ನು ಲಂಕಾದ ವಿಪಕ್ಷಗಳು ಟೀಕಿಸಿವೆ. ಲಂಕಾದ ಪ್ರಮುಖ ವಿರೋಧ ಪಕ್ಷವಾಗಿರುವ ಸಂಯುಕ್ತ ರಾಷ್ಟ್ರೀಯ ಪಕ್ಷ(ಯುಎನ್ಪಿ)ದ ಸಂಸದ ರವಿ ಕರುಣಾನಾಯಕೆ ಸೂರ್ಯಪ್ಪೆರುಮಾ ಅವರ ಬೇಜವಾಬ್ದಾರಿ ಹೇಳಿಕೆಯಿಂದ ನೆರೆಯ ರಾಷ್ಟ್ರಗಳು ಲಂಕಾ ವಿರುದ್ಧ ಕಿಡಿಕಾರುವಂತಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ಸೂರ್ಯಪ್ಪೆರುಮಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ಶ್ರೀಲಂಕಾ ವಿದೇಶಾಂಗ ಇಲಾಖೆಯ ಸಚಿವರು ಮತ್ತು ಸರ್ಕಾರದ ಪ್ರತಿನಿಧಿಗಳು ಸೂರ್ಯಪ್ಪೆರುಮಾ ಹೇಳಿಕೆಯನ್ನು ಖಂಡಿಸಿದ್ದಾರೆ. ಒಟ್ಟಾರೆ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಭಾರತ ದೇಶದ ಕುರಿತು ಸೂರ್ಯಪ್ಪೆರುಮಾ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


