ತೆಲುಗು ನಟರಿಗೆ 'ಪದ್ಮಶ್ರೀ' ಹಿಂದಿರುಗಿಸಲು 'ಹೈ' ಸೂಚನೆ

ಹೈದರಾಬಾದ್: ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ತೆಲುಗು ಸಿನಿಮಾ ರಂಗದ ಖ್ಯಾತ ನಟರಾದ ಮೋಹನ್ ಬಾಬು ಮತ್ತು ಬ್ರಹ್ಮಾನಂದಂ ಅವರಿಗೆ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುವಂತೆ ಆಂಧ್ರ ಪ್ರದೇಶ ಹೈಕೋರ್ಟ್ ಸೂಚಿಸಿದೆ.
ಆಂಧ್ರ ಪ್ರದೇಶ ಬಿಜೆಪಿ ಮುಖಂಡ ಎನ್.ಇಂದ್ರ ಸೇನಾ ರೆಡ್ಡಿ ಅವರು, ನಟ ಮೋಹನ್ ಬಾಬು ಮತ್ತು ಬ್ರಹ್ಮಾನಂದಂ ಅವರು ಪ್ರಶಸ್ತಿಯ ನಿಯಾಮಾವಳಿಗಳನ್ನು ಉಲ್ಲಂಘಿಸಿದ್ದು, ಕೂಡಲೇ ಅವರ ಪ್ರಶಸ್ತಿಗಳನ್ನು ಹಿಂಪಡೆಯಬೇಕು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಕಲ್ಯಾಣ್ ಜ್ಯೋತಿ ಸೇನ್‌ಗುಪ್ತಾ ಮತ್ತು ನ್ಯಾ.ಪಿ ಸಂಜಯ್ ಕುಮಾರ್ ಅವರು ಇಬ್ಬರು ನಟರಿಗೆ ಪ್ರಶಸ್ತಿಯನ್ನು ಹಿಂದುರಿಗಿಸುವಂತೆ ಸೂಚಿಸಿದ್ದಾರೆ.
ಇಂದ್ರ ಸೇನಾ ರೆಡ್ಡಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ ನಟ ಮೋಹನ್ ಬಾಬು ಅವರು ನಿರ್ಮಾಣ ಮಾಡಿರುವ 'ದೇನಿಕೈನಾ ರೆಡಿ' ಚಿತ್ರದಲ್ಲಿ ನಿರ್ಮಾಪಕ ಮೋಹನ್ ಬಾಬು ಮತ್ತು ಹಾಸ್ಯ ನಟ ಬ್ರಹ್ಮಾನಂದಂ ಅವರು ತಮ್ಮ ಹೆಸರುಗಳ ಜೊತೆಗೆ ಪದ್ಮಶ್ರೀ ಬಿರುದನ್ನು ಸೇರಿಸಿಕೊಂಡಿದ್ದರು ಎಂದು ಆರೋಪಿಸಿದ್ದರು.
2007ರಲ್ಲಿ ನಟ ಮತ್ತು ನಿರ್ಮಾಪಕ ಮೋಹನ್ ಬಾಬು ಅವರಿಗೆ ಮತ್ತು 2009ರಲ್ಲಿ ಹಾಸ್ಯನಟ ಬ್ರಹ್ಮಾನಂದಂ ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿತ್ತು.
ಪದ್ಮಶ್ರೀ ಪ್ರಶಸ್ತಿಯ ನಿಯಮಾವಳಿಗಳ ಪ್ರಕಾರ, ಈ ಪ್ರಶಸ್ತಿ ಅವರ ಸಾಧನೆಗೆ ಸಂದ ಪುರಸ್ಕಾರವೇ ಹೊರತು ಅವರಿಗೆ ನೀಡಿರುವ ಬಿರುದುಗಳಲ್ಲ. ಒಂದು ವೇಳೆ ಪ್ರಶಸ್ತಿ ಪುರಸ್ಕೃತ ವ್ಯಕ್ತಿ ಪ್ರಶಸ್ತಿಯನ್ನು ತನ್ನ ಬಿರುದಾಗಿ ಅಥವಾ ತನ್ನ ಹೆಗ್ಗಳಿಕೆಗಾಗಿ ಬಳಸಿಕೊಂಡರೆ ಅಂತಹ ಸಂದರ್ಭದಲ್ಲಿ ಪ್ರಶಸ್ತಿಯನ್ನು ವಾಪಸ್ ಪಡೆಯಬಹುದಾಗಿದೆ. ಅಂತೆಯೇ ಪ್ರಶಸ್ತಿಯನ್ನು ಶುಭಾಶಯ ಪತ್ರಗಳಲ್ಲಿ, ಆಮಂತ್ರಣ ಪತ್ರಿಕೆಗಳಲ್ಲಿ, ಚಿತ್ರದ ಶೀರ್ಷಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬಳಸಿಕೊಳ್ಳುವಂತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


