ಪೋಲಿಯೋ ಲಸಿಕೆ ಹಾಕಿದ್ದಕ್ಕೆ ಗುಂಡಿಟ್ಟ ಉಗ್ರರು..!

ಪೇಶಾವರ: ಮಾರಕ ರೋಗ ಪೋಲಿಯೋ ಬಾರದಿರಲಿ ಎಂದು ಕಂದಮ್ಮಗಳಿಗೆ ಲಸಿಕೆ ಹಾಕುತ್ತಿದ್ದ ವೈಧ್ಯಕೀಯ ಸಿಬ್ಬಂದಿಯೋರ್ವರನ್ನು ಉಗ್ರರು ಗುಂಡಿಟ್ಟು ಕೊಂದಿರುವ ಘಟನೆ ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದೆ.
ಪೇಶಾವರದ ಖೈಬರ್ ಪಕ್ತ್ತುಂಖ್ವಾ ಪ್ರಾಂತ್ಯದ ಪೋಲಿಯೋ ಲಸಿಕಾ ಕೇಂದ್ರದ ಮೇಲೆ ದಾಳಿ ನಡಿಸಿರುವ ಉಗ್ರರು ಸಿಬ್ಬಂದಿಗಳ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಮಟ್ನಿ ಸರ್ಕಾರಿ ಆಸ್ಪತ್ರೆಯಲ್ಲಿ ಪುಟ್ಟ ಕಂದಮ್ಮಗಳಿಗೆ ಪೊಲಿಯೋ ಲಸಿಕೆ ಹಾಕುತ್ತಿದ್ದ ಝಾಹಿದ್ ಗುಲ್ ಎಂಬ ಸಿಬ್ಬಂದಿಯನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ. ಘಟನೆಯಲ್ಲಿ ಇಬ್ಬರು ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಲ್ಲಿಯವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ನೇತೃತ್ವ ವಹಿಸಿದೇ ಇದ್ದರೂ, ತಾಲಿಬಾನ್ ಸಂಘಟನೆ ಪೋಲಿಯೋ ಕಾರ್ಯಕ್ರಮವನ್ನು ತೀವ್ರ ವಿರೋಧಿಸುತ್ತಿತ್ತು. ಪೋಲಿಯೋ ಲಸಿಕೆಗಳಲ್ಲಿ ವಿಷ ಸೇರಿಸಲಾಗಿದ್ದು, ಮುಸ್ಲಿಂ ಮಕ್ಕಳನ್ನು ಕೊಲ್ಲಲೆಂದು ಈ ಯೋಜನೆ ಹಾಕಿಕೊಂಡಿದ್ದಾರೆ. ಹೀಗಾಗಿ ಯಾರೂ ಈ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಆದೇಶಿಸಿತ್ತು. ಹೀಗಾಗಿ ಪ್ರಸ್ತುತ ದಾಳಿಯನ್ನು ತಾಲಿಬಾನ್ ಸಂಘಟನೆಯೇ ನಡೆಸಿರಬಹುದು ಎಂದು ಶಂಕಿಸಲಾಗುತ್ತಿದೆ.
ಕಳೆದ 90 ದಿನಗಳಿಂದ ನಡೆಯುತ್ತಿರುವ ಪೋಲಿಯೋ ಲಸಿಕಾ ಕಾರ್ಯಕ್ರದಲ್ಲಿ ಈ ವರೆಗು ಸುಮಾರು 90ಕ್ಕೂ ಅಧಿಕ ದಾಳಿಗಳು ನಡೆದಿವೆ. ಉಗ್ರರ ದಾಳಿಯಿಂದಾಗಿ ಓರ್ವ ವೈದ್ಯ ಸೇರಿದಂತೆ 3 ಸಿಬ್ಬಂದಿಗಳು ತಮ್ಮ ಪ್ರಾಣ ಕಳೆದು ಕೊಂಡಿದ್ದಾರೆ. ಪರಿಸ್ಥಿತಿ ಹೀಗದಿದ್ದರೂ ಕೂಡ ಪಾಕಿಸ್ತಾನದಾದ್ಯಂತ ಸುಮಾರು 2ಲಕ್ಷದ 60 ಸಾವಿರ ಕಂದಮ್ಮಗಳಿಗೆ ಪೋಲಿಯೋ ಲಸಿಕೆಯನ್ನು ಹಾಕಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


