ಉತ್ತರ ಕೊರಿಯಾದ 3ನೇ ಅಣು ಶಕ್ತಿ ಪ್ರಯೋಗ ಯಶಸ್ವಿ
ಅಮೆರಿಕದ ವಿರೋಧದ ನಡುವೆಯೂ ಉತ್ತರ ಕೊರಿಯಾ ತನ್ನ 3ನೇ ಅಣುಶಕ್ತಿ ಪ್ರಯೋಗ...

ಸಿಯೋಲ್: ಅಮೆರಿಕದ ವಿರೋಧದ ನಡುವೆಯೂ ಉತ್ತರ ಕೊರಿಯಾ ತನ್ನ 3ನೇ ಅಣುಶಕ್ತಿ ಪ್ರಯೋಗವನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿದೆ.
ಪೈಂಗ್ಯಾಂಗ್ನಲ್ಲಿ ಉತ್ತರ ಕೋರಿಯಾ ಸುರಕ್ಷಿತವಾಗಿ ಅಣು ಶಕ್ತಿ ಪ್ರಯೋಗ ನಡೆಸಿದೆ ಎಂದು ಸಂಯುಕ್ತ ಸಂಸ್ಥಾನ ಭದ್ರತಾ ಸಂಸ್ಥೆ (ಯುಎನ್ಎಸ್ಇ) ಸ್ಪಷ್ಟಪಡಿಸಿದೆ. ಅಲ್ಲದೇ ಅಣು ಶಕ್ತಿ ಪ್ರಯೋಗ ಯಶ್ವಸಿಯಾಗಿ ನಡೆದಿದೆ ಎಂದು ಬಿಬಿಸಿ ವರದಿ ಮಾಡಿದೆ.
ಅಣು ಶಕ್ತಿ ಪ್ರಯೋಗದ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ 4.9 ತೀವ್ರತೆಯ ಭೂಕಂಪನವಾಗಿದ್ದು, ಈ ಕಂಪನ ಅಣು ಶಕ್ತಿ ಪ್ರಯೋಗದಿಂದಲೇ ಆಗಿದೆ ಎಂದು ಸಂಯುಕ್ತ ಸಂಸ್ಥಾನದ ಭೂವಿಜ್ಞಾನ ಸಮೀಕ್ಷಾ ಸಂಸ್ಥೆ ಸ್ಪಷ್ಟಪಡಿಸಿದೆ. ಪ್ರಯೋಗ ನಡೆದ 3 ಗಂಟೆ ಬಳಿಕ ಅಣು ಶಕ್ತಿ ಪ್ರಯೋಗದಿಂದಲೇ ಭೂ ಕಂಪನವಾಗಿದೆ ಎಂದು ಖಚಿತಪಡಿಸಲಾಗಿದ್ದು, ಉತ್ತರ ಕೊರಿಯಾದ ಕಿಲಿಜು, ಉತ್ತರ ಹ್ಯಾಮ್ಕಿಂಗ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ.
ಈ ಅಣು ಶಕ್ತಿ ಬಾಂಬ್ 6-7 ಕಿಲೋ ಟನ್ ಸಾಮರ್ಥ್ಯವನ್ನು ಹೊಂದಿದೆ ಎಂದು ಉತ್ತರ ಕೊರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ಪ್ರಯೋಗ ನಡೆಸುವ ಕುರಿತು ಅಮೆರಿಕಾ ಹಾಗೂ ಚೀನಾಕ್ಕೆ ಮಾಹಿತಿ ನೀಡಲಾಗಿತ್ತ್ತು ಎಂದು ಕೊರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಅಮೆರಿಕಾಕ್ಕೆ ಸಡ್ಡು ಹೊಡೆದು ತಾನು ಪ್ರಬಲ ರಾಷ್ಟ್ರ ಎಂದು ಜಗತ್ತಿಗೆ ತೊರಿಸಿಕೊಳ್ಳುತ್ತಿರುವ ಉತ್ತರ ಕೊರಿಯಾ, ಅಕ್ಟೋಬರ್ 2006 ಮತ್ತು ಡಿಸೆಂಬರ್ 2009ರಲ್ಲಿ ಅಣು ಶಕ್ತಿ ಪರೀಕ್ಷೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಪ್ರಯೋಗ ನಡೆಸದಂತೆ 2011ರಲ್ಲಿ ಉತ್ತರ ಕೊರಿಯಾಕ್ಕೆ ಅಮೆರಿಕ ಎಚ್ಚರಿಕೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


