ಈಗಿನ ಸುದ್ದಿ

ಡೀಸೆಲ್ ದರ ಇಳಿಕೆ ಪ್ರಶ್ನೆಯೇ ಇಲ್ಲ: ವೀರಪ್ಪ ಮೊಯ್ಲಿ

Published On :

ಜೈಪುರ: ಡೀಸೆಲ್ ದರ ಇಳಿಸುವ ಪ್ರಶ್ನೆಯೇ ಇಲ್ಲ ಎಂದು ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಜೈಪುರದಲ್ಲಿ ನಡೆಯುತ್ತಿರುವ 3 ದಿನಗಳ ಚಿಂತನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಪ್ರತಿ ಬಾರಿ ದರ ಏರಿಕೆ ಮಾಡಿದಾಗಲೂ ವಿಪಕ್ಷಗಳು ಟೀಕಿಸುತ್ತಲೇ ಇರುತ್ತವೆ. ಈ ಬಾರಿಯೂ ಅಷ್ಟೇ. ಆದರೆ ನಾವು ವಾಸ್ತವಿಕ ಅಂಶಗಳನ್ನು ಅರಿಯಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಭಾರತದಲ್ಲಿ ತೈಲೋತ್ಪನ್ನಗಳು ಅಗ್ಗವಾಗಿಯೇ ದೊರೆಯುತ್ತಿವೆ. ಕೆಲ ಅನಿವಾರ್ಯ ಕಾರಣಗಳಿಂದ ದರ ಏರಿಕೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಸತತ ನಾಲ್ಕು ತಿಂಗಳ ನಂತರ ಸರ್ಕಾರ ಡೀಸೆಲ್ ದರ ಏರಿಕೆ ಮಾಡಿದ್ದು, ಸಗಟಾಗಿ ಖರೀದಿ ಮಾಡಿದರೆ ಡೀಸೆಲ್ ಕಡಿಮೆ ದರದಲ್ಲಿ ದೊರೆಯುತ್ತದೆ. ರಕ್ಷಣಾ ಇಲಾಖೆ ಮತ್ತು ರೇಲ್ವೆ ಇಲಾಖೆಗೆ ನೀಡುತ್ತಿರುವ ಸಬ್ಸಿಡಿಯಿಂದಾಗಿ 10ರು. ಕಡಿತಗೊಳ್ಳುತ್ತದೆ. ಉಳಿದಂತೆ ದೇಶಾದ್ಯಂತ ಸಾಮಾನ್ಯ ದರಗಳೇ ಮುಂದುವರೆಯುತ್ತವೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ನಿನ್ನೆ ಡೀಸೆಲ್ ದರದಲ್ಲಿ 45 ಪೈಸೆ ದರ ಏರಿಕೆ ಮಾಡಿ, ಸಬ್ಸಿಡಿ ಗ್ಯಾಸ್ ಸಿಲಿಂಡರ್‌ಗಳ ಮಿತಿಯನ್ನು 6 ರಿಂದ 9ಕ್ಕೆ ಏರಿಸಿತ್ತು. ಸರ್ಕಾರದ ಈ ನಡೆಯನ್ನು ಮಿತ್ರಪಕ್ಷ ಡಿಎಂಕೆ ಸೇರಿದಂತೆ ವಿರೋಧಪಕ್ಷಗಳು ಟೀಕಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.