ಡ್ರೀಮ್‌ಲೈನರ್‌ಗಳ ವಾಪಸ್‌ಗೆ ಬೋಯಿಂಗ್ ನಿರ್ಧಾರ

ವಾಷಿಂಗ್‌ಟನ್: ಬೋಯಿಂಗ್ ಸಂಸ್ಥೆ ವಿಶ್ವಾದ್ಯಂತ ಮಾರಾಟ ಮಾಡಿರುವ ಎಲ್ಲಾ 50 ಡ್ರೀಮ್‌ಲೈನರ್ ವಿಮಾನಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ.
ಅತ್ಯಾಧುನಿಕ ತಂತ್ರಜ್ಞಾನದ ಡ್ರೀಮ್‌ಲೈನರ್ ವಿಮಾನಗಳಲ್ಲಿ ಕಂಡುಬಂದಿರುವ ತಾಂತ್ರಿಕದೋಷದಿಂದಾಗಿ ತಾನು ವಿಮಾನಗಳನ್ನು ವಾಪಸ್ ಪಡೆಯುತ್ತಿರುವುದಾಗಿ ಅಮೆರಿಕದ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ತಿಳಿಸಿದೆ. ಭಾರತ, ಅಮೆರಿಕ, ಚಿಲಿ, ಇಥೋಪಿಯಾ, ಜಪಾನ್ ಮತ್ತು ಪೋಲ್ಯಾಂಡ್ ದೇಶಗಳ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಮಾರಾಟ ಮಾಡಿರುವ ಎಲ್ಲಾ 50 ಡ್ರೀಮ್‌ಲೈನರ್ ವಿಮಾನಗಳನ್ನು ಬೋಯಿಂಗ್ ಸಂಸ್ಥೆ ವಾಪಸ್ ಪಡೆಯುವುದಾಗಿ ಹೇಳಿದೆ.
"ಸಂಸ್ಥೆಗೆ ಪ್ರಯಾಣಿಕರ ಭದ್ರತೆಯೇ ಮುಖ್ಯ. ಹೀಗಾಗಿ ತಾಂತ್ರಿಕದೋಷ ಕಾಣಿಸಿಕೊಂಡಿರುವ 787 ಸರಣಿಯ ಡ್ರೀಮ್‌ಲೈನರ್ ವಿಮಾನಗಳನ್ನು ವಾಪಸ್ ಪಡೆಯುತ್ತಿದ್ದೇವೆ. ವಿಮಾನದಲ್ಲಿನ ತಾಂತ್ರಿಕದೋಷಗಳನ್ನು ಸರಿಪಡಿಸಿದ ನಂತರ ಎಫ್‌ಎಎ (ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್) ಅನುಮತಿ ಪಡೆಯಲಾಗುವುದು. ನಂತರ ವಿಮಾನಯಾನ ಸಂಸ್ಥೆಗಳಿಗೆ ವಿಮಾನಗಳನ್ನು ವಾಪಸ್ ಮಾಡುತ್ತೇವೆ' ಎಂದು ಬೋಯಿಂಗ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಂತ್ರಿಕದೋಷ ಕಾಣಿಸಿಕೊಂಡಿರುವ 787 ಡ್ರೀಮ್‌ಲೈನರ್ ವಿಮಾನಗಳ ಉತ್ಪಾದನೆಯನ್ನು ನಿಲ್ಲಿಸುತ್ತೀರಾ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ ಬೋಯಿಂಗ್ ಸಂಸ್ಥೆಯ ವಕ್ತಾರರು, ವಿಮಾನ ಉತ್ಪಾದನೆಯನ್ನು ನಿಲ್ಲಿಸುವುದಿಲ್ಲ. ಆದರೆ ವಿಮಾನದಲ್ಲಿ ಈಗ ಉಂಟಾಗಿರುವ ತಾಂತ್ರಿಕದೋಷಗಳನ್ನು ಸರಿಪಡಿಸಿದ ನಂತರ ವಿಮಾನಗಳನ್ನು ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.
ಬೋಯಿಂಗ್ ಸಂಸ್ಥೆ ನಿರ್ಮಾಣ ಮಾಡಿದ್ದ ಅತ್ಯಾಧುನಿಕ 787 ಡ್ರೀಮ್‌ಲೈನರ್ ವಿಮಾನಗಳ ಬ್ಯಾಟರಿ ಮತ್ತು ವಿದ್ಯುತ್ ಉಪಕರಣಗಳಲ್ಲಿ ತಾಂತ್ರಿಕ ಲೋಪದೋಷ ಕಂಡು ಬಂದ ಹಿನ್ನಲೆಯಲ್ಲಿ ನಿನ್ನೆ ವಿಶ್ವಾದ್ಯಂತ ವಿವಿಧ ವಿಮಾನಯಾನ ಸಂಸ್ಥೆಗಳಲ್ಲಿದ್ದ ಎಲ್ಲಾ ಡ್ರೀಮ್‌ಲೈನರ್ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


