ಅಮೆರಿಕದ ವಿವಾದಿತ ಬಾಡಿ "ಸ್ಕ್ಯಾನಿಂಗ್‌ಗೆ ಬ್ರೇಕ್'

ವಾಷಿಂಗ್‌ಟನ್: ಅಮೆರಿಕದ ವಿವಾದಿತ ಬಾಡಿ ಸ್ಕ್ಯಾನಿಂಗ್‌ಗೆ ಟ್ರಾನ್ಸ್‌ಪೋರ್ಟೇಷನ್ ಸೆಕ್ಯೂರಿಟಿ ಅಡ್ಮಿನಿಸ್ಟ್ರೇಷನ್ (ಟಿಎಸ್‌ಎ) ಶೀಘ್ರದಲ್ಲಿಯೇ ಬ್ರೇಕ್ ಹಾಕಲಿದೆ.
ಮುಂದಿನ ಜೂನ್ ತಿಂಗಳಿನಿಂದ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ವಿವಾದಕ್ಕೆ ಗುರಿಯಾಗಿದ್ದ ಬಾಡಿ ಸ್ಕ್ಯಾನಿಂಗ್ ಸಿಸ್ಟಂ ಅನ್ನು ಟಿಎಸ್‌ಎ ಸ್ಥಗತಗೊಳಿಸಲಿದೆ. ಭದ್ರತಾ ದೃಷ್ಟಿಯಿಂದ ವಿಮಾನ ಮತ್ತು ರೇಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದ, ಎಲ್ಲಾ ಬಾಡಿ ಸ್ಕ್ಯಾನರ್‌ಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಟಿಎಸ್‌ಎ ತಿಳಿಸಿದೆ.
2009ರ ಕ್ರಿಸ್‌ಮಸ್ ಹಬ್ಬದ ದಿನ ಉಗ್ರನೊಬ್ಬ ತನ್ನ ದೇಹದಲ್ಲಿ ಸ್ಪೋಟಕಗಳನ್ನು ಅಳವಡಿಸಿಕೊಂಡು ವಿಮಾನದೊಳಗೆ ಹೋಗಲು ಯತ್ನಿಸಿದ್ದನು. ಆದರೆ ವಿಮಾನದೊಳಗಿನ ಆಧುನಿಕ ಭದ್ರತಾ ಯಂತ್ರಗಳು ಮತ್ತು ಮೆಟಲ್‌ಡಿಟೆಕ್ಟರ್‌ಗಳು ಅದನ್ನು ಪತ್ತೆ ಹಚ್ಚಿ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಿತ್ತು. ನಂತರ ಎಚ್ಚೆತ್ತುಕೊಂಡು ಭದ್ರತಾ ಸಿಬ್ಬಂದಿಗಳು ಆತನನ್ನು ಬಂಧಿಸಿದ್ದರು.
ಈ ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿನ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿದ್ದ "ವೈಟ್‌ಹೌಸ್', ವಿಮಾನ ಮತ್ತು ರೇಲ್ವೆ ನಿಲ್ದಾಣಗಳಲ್ಲಿ ಅತ್ಯಾಧುನಿಕ ಭದ್ರತಾ ಸಲಕರಣೆಗಳನ್ನು ಅಳವಡಿಸಿತ್ತು. ಹೀಗೆ ಅಳವಡಿಸಲಾದ ಯಂತ್ರಗಳಲ್ಲಿ "ರ್ಯಾಪಿಸ್ಕ್ಯಾನ್' ಸಂಸ್ಥೆಯ ಸ್ಕ್ಯಾನರ್‌ಕೂಡ ಒಂದಾಗಿತ್ತು. ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದ ಈ ಸ್ಕ್ಯಾನರ್‌ಗಳು ಭಾರಿ ವಿವಾದಕ್ಕೆ ಗ್ರಾಸವಾಗಿತ್ತು. ಏಕೆಂದರೆ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದ ಈ ಸ್ಕ್ಯಾನರ್‌ಗಳು ಪ್ರಯಾಣಿಕರ ದೇಹವನ್ನು ಸ್ಕ್ಯಾನ್ ಮಾಡಿ ತುಂಬಾ ಪಾರದರ್ಶಕವಾಗಿ ತೋರಿಸುತ್ತಿತ್ತು.
ದೇಹವನ್ನು ನಗ್ನವಾಗಿ ಪ್ರದರ್ಶಿಸುವ ಈ ಸ್ಕ್ಯಾನರ್‌ನಿಂದಾಗಿ ಪ್ರಯಾಣಿಕರು ಸಂಕೋಚದಿಂದಲೇ ಸ್ಕ್ಯಾನಿಂಗ್‌ಗೆ ಒಳಗಾಗಬೇಕಿತ್ತು. ಹೀಗಾಗಿ ಹಲವು ಪ್ರಯಾಣಿಕರು ಈ ಸ್ಕ್ಯಾನರ್‌ನ ಬಗ್ಗೆ ಅಸಮಾಧನಾವನ್ನು ವ್ಯಕ್ತಪಡಿಸಿದ್ದರು. 2009ರಲ್ಲಿ ಅಳವಡಿಸಲಾದ ಈ ಸ್ಕ್ಯಾನರ್‌ಗೆ ಆರಂಭದಿಂದಲೂ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ನಿನ್ನೆ ಚರ್ಚೆ ನಡೆಸಿದ ಅಮೆರಿಕ ಕಾಂಗ್ರೆಸ್, ರ್ಯಾಪಿಸ್ಕಾನ್ ಸಿಸ್ಟಂಗಳನ್ನು ತೆರವುಗೊಳಿಸಲು ಟಿಎಸ್‌ಎಗೆ ಸೂಚನೆ ನೀಡಿದೆ.
ಅಮೆರಿಕ ಕಾಂಗ್ರೆಸ್‌ಗೆ ತನ್ನ ಅಭಿಪ್ರಾಯ ತಿಳಿಸಿರುವ ಟಿಎಸ್‌ಎ, ರ್ಯಾಪಿಸ್ಕ್ಯಾನ್‌ನೊಂದಿಗೆ ತಾವು ಮಾಡಿಕೊಂಡಿರುವ ಒಪ್ಪಂದ ಇದೇ ವರ್ಷದ ಜೂನ್ ತಿಂಗಳಿನಲ್ಲಿ ಅಂತ್ಯಗೊಳ್ಳಲಿದ್ದು, ಅನಂತರ ಅವುಗಳನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದೆ. ಅಮೆರಿಕಾ ಕಾಂಗ್ರೆಸ್‌ನ ಅಭಿಪ್ರಾಯಕ್ಕೆ "ರ್ಯಾಪಿಸ್ಕ್ಯಾನ್' ಸಂಸ್ಥೆ ಒಮ್ಮತ ಸೂಚಿಸಿದ್ದು, ಹಿಂದಿನ ಸ್ಕ್ಯಾನರ್‌ನಲ್ಲಿರುವ ಲೋಪದೋಷಗಳನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


