ಈಜಿಪ್ಟ್: ಹಂಗಾಮಿ ಅಧ್ಯಕ್ಷರಾಗಿ ಆಡ್ಲಿ ಮನ್ಸೋರ್ ಪ್ರಮಾಣ

ಕೈರೋ: ಈಜಿಪ್ಟ್ ಅಧ್ಯಕ್ಷ ಮೊಹಮ್ಮದ್ ಮೋರ್ಸಿ ಅವರ ವಿರುದ್ಧ ಸೇನೆ ದಂಗೆ ಎದ್ದಿದ್ದು, ಈಜಿಪ್ಟ್ ಸೇನೆ ದೇಶದ ಸಂವಿಧಾನವನ್ನು ವಜಾಗೊಳಿಸಿದೆ. ಸೇನೆ ಸಂವಿಧಾನವನ್ನು ವಜಾಗೊಳಿಸಿರುವ ಕಾರಣ ಮೋರ್ಸಿ ಇನ್ಮುಂದೆ ಪರಮೋನ್ನತ ಸಂವಿಧಾನತ್ಮಕ ನ್ಯಾಯಸ್ಥಾನದ ಅಧಿಪತಿಯಾಗಿರುವುದಿಲ್ಲ ಬದಲಾಗಿ ಅವರು ದೇಶದಲ್ಲಿ ತಾತ್ಕಾಲಿಕ ನಾಯಕತ್ವ ವಹಿಸಲಿದ್ದಾರೆ.
ಮೋರ್ಸಿ ಅವರು ಈಜಿಪ್ಟ್ನಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವ ಮೂಲಕ ಆಯ್ಕೆಯಾದ ನಾಯಕರಾಗಿದ್ದರು. ಆದರೆ ಅವರು ಈಜಿಪ್ಟ್ನಲ್ಲಿ ಇಸ್ಲಾಮಿಕ್ ನಿಯಮಗಳನ್ನು ಹೇರುತ್ತಿದ್ದಾರೆ ಮತ್ತು ದೇಶದಲ್ಲಿ ಸುಧಾರಣೆ ತರಲು ವಿಫಲರಾಗಿದ್ದಾರೆ ಎಂದು ಈಜಿಪ್ಟ್ನ ಜನರು ದೂರಿದ್ದಾರೆ.
ಮೋರ್ಸಿಯ ಈ ಧೋರಣೆಯನ್ನು ಖಂಡಿಸಿ ಸೇನೆ ದಂಗೆಯೆದ್ದಿದ್ದು, ಮೋರ್ಸಿ ಅವರನ್ನು ಪದಚ್ಯುತಿಗೊಳಿಸಿದೆ.
ಕಳೆದ ರಾತ್ರಿ ಅಧ್ಯಕ್ಷರ ಪರ ಮತ್ತು ವಿರೋಧಿ ಬಣಗಳ ನಡುವಿನ ಹೋರಾಟದಲ್ಲಿ 23 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಮೋರ್ಸಿಯ ಪದಚ್ಯುತಿಯ ನಂತರ ಇದೀಗ ಆಡ್ಲಿ ಮನ್ಸೋರ್ ಅವರು ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮುಸಲ್ಮಾರ ವಿರುದ್ಧ ದಾಳಿ ನಡೆಸುವುದಾಗಲೀ, ದಾಳಿಗೆ ಪ್ರೇರೇಪಿಸುವುದಾಗಲಿ ಮಾಡಿದರೆ ನಾವು ಸಹಿಸಿಕೊಳ್ಳುವುದಿಲ್ಲ ಎಂದು ಸೇನೆ ಎಚ್ಚರಿಕೆ ನೀಡಿದೆ.
ಪ್ರಸ್ತುತ ದಂಗೆಯಲ್ಲಿ ಬುಧವಾರ ಬಂಧಿಗಳಾದವರನ್ನು ಹೊಸ್ನಿ ಮುಬಾರಕ್ ಅವರನ್ನಿರಿಸಿದ್ದ ಕಾರಾಗೃಹದಲ್ಲೇ ಇರಿಸಲಾಗಿದೆ ಎಂದು ಈಜಿಪ್ಟ್ನ ಮಾಧ್ಯಮಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


