ನಮ್ಮನ್ನು ಕೆರಳಿಸಬೇಡಿ, ಪರಿಣಾಮ ಎದುರಿಸಬೇಕಾಗುತ್ತದೆ: ಚೀನಾ
ಬಿಜಿಂಗ್: ನಮ್ಮನ್ನು ಕೆರಳಿಸಬೇಡಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನಾದ ಸೇನಾಧಿಕಾರಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ರಕ್ಷಣಾ ಸಚಿವ ಎ.ಕೆ. ಆಂಟೋನಿಯವರ ಚೀನಾ ಭೇಟಿಯ ವೇಳೆಯಲ್ಲೇ ಗಡಿಭಾಗದಲ್ಲಿ ಸೇನೆಯನ್ನು ನಿಯೋಜಿಸಿ ನೂತನ ಸಮಸ್ಯೆಗಳಿಗೆ ಪ್ರಚೋದಿಸಬೇಡಿ. ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನಾ ಸೇನಾಧಿಕಾರಿ ಹೇಳಿದ್ದಾರೆ.
ಭಾರತದೊಡನೆ ನೂತನ ಕ್ಯಾತೆ ತೆಗೆದಿರುವ ಚೀನಾ, ಭಾರತ ಗಡಿಭಾಗದಲ್ಲಿ ಸೇನೆ ನಿಯೋಜಿಸದಿದ್ದರೆ ಒಳ್ಳೆಯದು ಎಂದು ಹೇಳಿದೆ. ಭಾರತ ಮತ್ತು ಚೀನಾ ನಡುವೆ ಉನ್ನತ ಮಟ್ಟದ ಮಾತುಕತೆಗಾಗಿ ರಕ್ಷಣಾ ಸಚಿವರು ಚೀನಾಗೆ ಆಗಮಿಸುವುದಕ್ಕೂ ಕೆಲವೆ ಗಂಟೆಗಳ ಮುನ್ನ ಸೇನಾಧಿಕಾರಿ ಈ ಹೇಳಿಕೆ ನೀಡಿದ್ದು ಆಶ್ಚರ್ಯ ತಂದಿದೆ.
ಆಂಟೋನಿಯವರ ಭೇಟಿಗೆ ಕೆಲವೇ ಗಂಟೆಗಳ ಮುನ್ನವೇ ಪತ್ರಕರ್ತರೊಂದಿಗೆ ಮಾತನಾಡಿದ ಚೀನಾ ಸಂಸ್ಕೃತಿ ಅಭಿವೃದ್ಧ ಸಂಘದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮಹಾಪ್ರಧಾನ ಕಾರ್ಯದರ್ಶಿ ಮೇಜರ್ ಜನರಲ್ ಲುಯೋ ಯುವಾನ್, ನೂತನ ಸಮಸ್ಯೆಗಳಿಂದ ನಮ್ಮನ್ನು ಪ್ರಚೋದಿಸಬೇಡಿ ಎಂದು ಹೇಳಿದ್ದಾರೆ.
ಚೀನಾ ದೇಶದ ಭಯ ಇಟ್ಟುಕೊಂಡು ತನ್ನ ಸೇನಾ ಬಲವನ್ನ ಅಭಿವೃದ್ಧಿ ಪಡಿಸುವ ಸಾಹಸಕ್ಕೆ ಇಡೀ ವಿಶ್ವದಲ್ಲೇ ಭಾರತ ರಾಷ್ಟ್ರ ಮುಂದಾಗಿದೆ. ಚೀನಾದಿಂದ ಬೆದರಿಕೆಯ ಕಾರಣಕ್ಕಾಗಿ ಸೇನಾ ಬಲವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿರುವುದಾಗಿ ಭಾರತ ಹೇಳಿಕೆ ನೀಡುತ್ತಿದ್ದು, ಇದರ ಬಗ್ಗೆ ಎಚ್ಚರ ವಹಿಸಲಿ. ಎಂದು ಸೇನಾಧಿಕಾರಿ ತಿಳಿಸಿದ್ದಾರೆ.
ಹಿಂದಿನ ಕಾಲದಲ್ಲಿ ಚೀನಾ ದೇಶಕ್ಕೆ ಸೇರಿದ್ದ 90 ಸಾವಿರ ಚದರಾಡಿಯಷ್ಟು ಭೂಭಾಗವನ್ನ ಭಾರತೀಯರು ಆಕ್ರಮಿಸಿದಾರೆ ಎಂದು ಚೀನಾ ಆರೋಪಿಸುತ್ತಿದ್ದು, ಇದನ್ನು ವಶಪಡಿಸಿಕೊಳ್ಳುವ ಸಂಚು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

