ಈಗಿನ ಸುದ್ದಿ

ಉದ್ದೇಶ ಪೂರ್ವಕವಾಗಿಯೇ ಮೋದಿ ಮೇಲೆ ಆರೋಪ: ರಾಜನಾಥ್

Published On :

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.

ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಮೋದಿ ಅವರ ವಿರುದ್ಧ ಸುಳ್ಳು ಆರೋಪ ಮಾಡುಲಾಗುತ್ತಿದೆ. ಮೋದಿ ಸ್ಫರ್ಧಾತ್ಮಕ ಅಭ್ಯರ್ಥಿ. ದೇಶದಲ್ಲೇ ಬಹಳ ಉತ್ತಮ ನಾಯಕ ಎಂದೆನಿಸಿಕೊಂಡವರು. ಗುಜರಾತ್‌ನಲ್ಲಿ ಸತತ ಮೂರು ಬಾರಿ ಅಧಿಕಾರಕ್ಕೆ ಬಂದವರು. ಅಂತಹವರ ಹೆಸರಿಗೆ ಕಾಂಗ್ರೆಸ್ ಮಸಿ ಬಳಿಯಲು ಪ್ರಯತ್ನಿಸುತ್ತಿದೆ ಎಂದು ರಾಜನಾಥ್ ಆಪಾದಿಸಿದ್ದಾರೆ.

ಸಿಬಿಐನ್ನು ದುರಪಯೋಗ ಪಡಿಸಿಕೊಳ್ಳುತ್ತಿರುವ ಕಾಂಗ್ರೆಸ್, ಇಶ್ರತ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮೋದಿ ಕೈವಾಡವಿದೆ ಎಂದು ಸುಳ್ಳು ಆರೋಪ ಮಾಡುತ್ತಿದೆ. ಹಾಗಾದರೇ ಅಮೆರಿಕದ ಆಡಳಿತವು ಇಶ್ರತ್ ಸೂಸೈಡ್ ಬಾಂಬ್‌ರ್ ಎಂದು ಹೇಳಿರುವುದರ ಅರ್ಥವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಅಮೆರಿಕದ ವಶದಲ್ಲಿರುವ ಮುಂಬೈ ದಾಳಿಯ ರುವಾರಿ ಡೇವಿಡ್ ಕೊಲೆಮಾನ್ ಹೆಡ್ಲಿ ಇಶ್ರತ್ ಜಹಾನ್‌ಗೆ ಉಗ್ರರ ಸಂಪರ್ಕವಿತ್ತು ಎಂದು ಶುಕ್ರವಾರ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ಇಶ್ರತ್ ಆತ್ಮಾಹುತಿ ಬಾಂಬ್ ಸ್ಫೋಟಿಸಲು ಯತ್ನಿಸಿದ್ದಳು. ಉಗ್ರರರೊಡನೆ ಇಶ್ರತ್‌ಗೆ ಸಂಪರ್ಕವಿದ್ದು, ಆಕೆಯನ್ನು ಮಾನವ ಬಾಂಬ್ ಸ್ಫೋಟಕ್ಕಾಗಿ ಲಕ್ಷರ್-ಇ-ತೊಯ್ಬಾ ಉಗ್ರ ಸಂಘಟನೆಯ ಝಕಿರ್-ರಹಮಾನ್ ಲಕ್ವಿ ಅವರು ನೇಮಕ ಮಾಡಲಾಗಿತ್ತು ಎಂದು ಹೆಡ್ಲಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.