'ಇಶ್ರತ್ ಆತ್ಮಾಹುತಿ ಬಾಂಬರ್ ಎಂದು ಎಫ್ಬಿಐ ಹೇಳಿತ್ತು': ಗುಪ್ತಚರ ಇಲಾಖೆ
ನವದೆಹಲಿ: ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಬಗ್ಗೆ ವಿವಾದಗಳು ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಸ್ತುತ ಪ್ರಕರಣದಲ್ಲಿ ಗುಪ್ತಚರ ಇಲಾಖೆ ಮತ್ತು ಸಿಬಿಐ ನಡುವಿನ ಹಗ್ಗ ಜಗ್ಗಾಟ ಮುಂದುವರಿಯುತ್ತಲೇ ಇದೆ.
ಇದೀಗ ಗುಪ್ತಚರ ಇಲಾಖೆ 2004 ಜೂನ್ 15ರಂದು ಎನ್ಕೌಂಟರ್ನಲ್ಲಿ ಸಾವಿಗೀಡಾದ ಇಶ್ರತ್ ಜಹಾನ್ ಮಹಿಳಾ ಆತ್ಮಾಹುತಿ ಬಾಂಬರ್ ಎಂದು 2009ರಲ್ಲಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಹೇಳಿತ್ತು ಎಂಬ ಸತ್ಯವನ್ನು ಬಹಿರಂಗ ಪಡಿಸಿದೆ. ಗುಪ್ತಚರ ಇಲಾಖೆ ಗೃಹಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ.
ಲಷ್ಕರೆ ತೊಯ್ಬಾ ಸದಸ್ಯ ಡೇವಿಡ್ ಹೇಡ್ಲಿ ಅವರನ್ನು ವಿಚಾರಣೆಗೊಳಪಡಿಸಿದಾಗ ಇಶ್ರತ್ ಮುಜಾಮಿಲ್ಲ್ ಎಂಬ ಉಗ್ರ ಸಂಘಟನೆಯ ಸದಸ್ಯೆಯಾಗಿದ್ದಳು ಎಂದು ಹೇಡ್ಲಿ ಹೇಳಿರುವುದಾಗಿ ಎಫ್ಬಿಐ ಹೇಳಿತ್ತು.
ಇಶ್ರತ್ ಉಗ್ರ ಸಂಘಟನೆಗೆ ಸೇರಿದವಳಾಗಿದ್ದಳು ಎಂದು ಲಷ್ಕರೆ ತೊಯ್ಬಾ ಸದಸ್ಯ ಜಾಕಿ ಉರ್ ರೆಹಮಾನ್ ಹೇಡ್ಲಿ ಅವರಿಗೆ ಹೇಳಿದ್ದನು ಎಂದು ಎಫ್ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಆದಾಗ್ಯೂ, ಎನ್ಐಎ ನಡೆಸಿದ ವಿಚಾರಣೆಯಲ್ಲಿ ಹೇಡ್ಲಿ, ಇಶ್ರತ್ ಬಗ್ಗೆ ಯಾವುದೇ ವಿಷಯ ಹೇಳಿಲ್ಲ.
ಏತನ್ಮಧ್ಯೆ, ಇಶ್ರತ್ನ್ನು ಉಗ್ರ ಸಂಘಟನೆಗೆ ಸೇರಿದವಳಲ್ಲ ಎಂದು ಕ್ಲೀನ್ಚಿಟ್ ಕೊಟ್ಟಿರುವ ಸಿಬಿಐ ಬಗ್ಗೆ ಗುಪ್ತಚರ ಇಲಾಖೆ ಅಸಮಧಾನ ವ್ಯಕ್ತಪಡಿಸಿದ್ದು, ಸಿಬಿಐ ನಿಲುವನ್ನು ಖಂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

